ಈ ಸರಿ ಕಪ್ ನಮ್ದಲ್ಲ! ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ರೊಚ್ಚಿಗೆದ್ದ ಅಭಿಮಾನಿಗಳು

ದುಬೈನಲ್ಲಿ ಐಪಿಎಲ್‌ 2024 ಹರಾಜು ಪ್ರಕ್ರಿಯೆ ಪೂರ್ಣವಾಗಿದೆ. ಮಿನಿ ಹರಾಜಿನಲ್ಲಿ ಹಲವು ಮೆಗಾ ದಾಖಲೆಗಳು ನಿರ್ಮಾಣವಾಗಿವೆ. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂಪಾಯಿ ನೀಡಿ ಕೆಕೆಆರ್ ಖರೀದಿ ಮಾಡಿದ್ದು, ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕ ಪಾಟ್ ಕಮ್ಮಿನ್ಸ್ ಕೂಡ ಬರೋಬ್ಬರಿ 20.5 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದಾರೆ. ಭಾರಿ ಮೊತ್ತಕ್ಕೆ ಹರಾಜಾಗುತ್ತಾರೆ ಎಂದು ನಿರೀಕ್ಷೆ ಮಾಡಿದ್ದ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಕೇವಲ 1.8 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡರು.

RCB Management Faces Fan Backlash Over IPL 2024 Auction Strategy

ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 23.25 ಕೋಟಿ ರೂಪಾಯಿ ಪರ್ಸ್‌ನೊಂದಿಗೆ ಹರಾಜಿಗೆ ತೆರಳಿತ್ತು. ಬೌಲರ್ ಗಳನ್ನು ಖರೀದಿ ಮಾಡುವುದು ಮ್ಯಾನೇಜ್‌ಮೆಂಟ್‌ನ ಉದ್ದೇಶವಾಗಿತ್ತು, ತಂಡದ ಬ್ಯಾಟಿಂಗ್ ಬಲಿಷ್ಠವಾಗಿದ್ದು ಬೌಲಿಂಗ್ ದುರ್ಬಲವಾದ ಕಾರಣ ಅದನ್ನು ಬಲಪಡಿಸುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದರು.

ರಚಿನ್ ರವೀಂದ್ರಗೆ ಬಿಡ್ ಮಾಡದ ಆರ್‌ಸಿಬಿ

ಬೆಂಗಳೂರು ಮೂಲದ, ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರಗೆ ಆರ್ ಸಿಬಿ ಬಿಡ್ ಕೂಡ ಮಾಡಲಿಲ್ಲ, 1.80 ಕೋಟಿ ರೂಪಾಯಿಗೆ ಸಿಎಸ್‌ಕೆ ಖರೀದಿ ಮಾಡಿತು. ಇನ್ನು ಶಾರ್ದೂಲ್ ಠಾಕೂರ್ ಹೆಸರು ಬಂದಾಗ ಕೂಡ ಬಿಡ್ ಮಾಡದ ಆರ್‌ಸಿಬಿ ಯಶ್ ದಯಾಳ್‌ಗೆ 5 ಕೋಟಿ ರೂಪಾಯಿ ನೀಡಿತು. ಶಾರ್ದೂಲ್ ಠಾಕೂರ್ 4 ಕೋಟಿ ರೂಪಾಯಿಗೆ ಹರಾಜಾದರು.

ಕನ್ನಡಿಗ ಶ್ರೇಯಸ್ ಗೋಪಾಲ್ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್ ಸೇರಿದರು. ಆರ್‌ಸಿಬಿ ಅವರನ್ನು ಖರೀದಿ ಮಾಡಲು ಆಸಕ್ತಿ ತೋರಲಿಲ್ಲ, ವಿಶ್ವಕ್‌ಪನಲ್ಲಿ ಮಿಂಚಿದ್ದ ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೊಯೆಟ್ಜೆ 5 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾದರು, ಅವರು ಕೂಡ ಉತ್ತಮ ಬೌಲಿಂಗ್ ಆಯ್ಕೆಯಾಗಿದ್ದರು.

ಎಲ್ಲರನ್ನೂ ಬಿಟ್ಟ ಆರ್‌ಸಿಬಿ ಕೊನೆಗೆ ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್‌ಗೆ ಬರೋಬ್ಬರಿ 11.50 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಇಂಗ್ಲೆಂಡ್ ಆಲ್‌ರೌಂಡರ್ ಟಾಮ್ ಕರನ್ (1.50 ಕೋಟಿ ರೂ.), ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.) ಸೌರವ್ ಚೌಹಾನ್ (20 ಲಕ್ಷ ರೂ.) ಆರ್ ಸಿಬಿ ಪಾಳಯ ಸೇರಿದರು. ಲೋಕಿ ಫರ್ಗುಸನ್ ಮಾತ್ರ ಆರ್‌ಸಿಬಿ ತಂಡದ ಉತ್ತಮ ಆಯ್ಕೆ ಎನ್ನಬಹುದು. 2 ಕೋಟಿ ರೂ. ಮೂಲ ಬೆಲೆಗೆ ಅವರನ್ನು ಆರ್‌ಸಿಬಿ ಖರೀದಿ ಮಾಡಿತು.

ಅಭಿಮಾನಿಗಳು ಹೇಳಿದ್ದೇನು?

ಆರ್‌ಸಿಬಿ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ, ಆದರೆ ಚಿನ್ನಸ್ವಾಮಿ ಅಂಗಳದಲ್ಲಿ ಬೌಲಿಂಗ್‌ ಉತ್ತಮವಾಗಿರಬೇಕು. ಒಂದು ವಿಭಾಗ ಬಲಿಷ್ಠವಾಗಿದ್ದರೆ ಕಪ್ ಗೆಲ್ಲೋಕೆ ಆಗಲ್ಲ, ಈ ಬಾರಿ ಕೂಡ ಆರ್‌ಸಿಬಿ ಕಪ್ ಗೆಲ್ಲಲ್ಲ ಎಂದು ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕ ಆಟಗಾರರನ್ನು ಆರ್‌ಸಿಬಿ ಕಡೆಗಣಿಸಿದ್ದು ಒಂದು ಕಡೆಯಾದರೆ, ಉತ್ತಮ ಬೌಲರ್ ಆಯ್ಕೆ ಮಾಡುವಲ್ಲಿ ಎಡವಿದ್ದು ಮತ್ತೊಂದು ಪ್ರಮಾದವಾಗಿದೆ. ಈ ಬೌಲಿಂಗ್‌ ಇಟ್ಟುಕೊಂಡು ಪಂದ್ಯ ಗೆಲ್ಲೋದು ಹೇಗೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದು ಅತ್ಯಂತ ಕೆಟ್ಟ ಮ್ಯಾನೇಜ್‌ಮೆಂಟ್ ಎಂದು ಕೆಲವರು ಕಿಡಿ ಕಾರಿದ್ದಾರೆ.

ಹರಾಜಿನ ಬಳಿಕ ಆರ್‌ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಯಶ್ ದಯಾಳ್, ಲೋಕಿ ಫರ್ಗ್ಯುಸನ್, ಸೌರಭ್ ಚೌಹಾನ್, ಅಲ್ಜಾರಿ ಜೋಸೆಫ್, ಟಾಮ್ ಕರನ್, ಸ್ವಪ್ನಿಲ್ ಸಿಂಗ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+