RCB: ಪಂತ್, ರಾಹುಲ್‌ ಅಲ್ಲ ಈತ ಮಾತ್ರ ಬೇಕೇ ಬೇಕು ಅಂತಿದೆ ಆರ್​ಸಿಬಿ

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗಾಗಿ ಎಲ್ಲಾ ಫ್ರಾಂಚೈಸಿಗಳು ಸಜ್ಜಾಗುತ್ತಿವೆ. ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ಎರಡು ದಿನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB) ಈ ಬಾರಿ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಎಲ್ಲಾ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ತಂಡದ ಬೌಲಿಂಗ್‌ ಬಲ ಹೆಚ್ಚಿಸಲು ಗಮನ ನೀಡುತ್ತಿದೆ.

ಆರ್ ಸಿಬಿ ಅಭಿಮಾನಿಗಳು ಕೂಡ ಮೆಗಾ ಹರಾಜಿನಲ್ಲಿ ಯಾರು ಯಾರನ್ನು ಖರೀದಿಸಬೇಕು ಎನ್ನುವ ಬಗ್ಗೆ ಸಲಹೆ ಕೊಡುತ್ತಿದ್ದಾರೆ. ರಿಷಬ್ ಪಂತ್, ಕೆಎಲ್ ರಾಹುಲ್ ತಂಡಕ್ಕೆ ಬರಬೇಕು ಎನ್ನುವುದು ಬಹುತೇಕ ಅಭಿಮಾನಿಗಳ ಆಸೆಯಾಗಿದೆ. ಆದರೆ ಇವರಿಬ್ಬರನ್ನು ಹೊರತುಪಡಿಸಿ ಮತ್ತೊಬ್ಬ ಬ್ಯಾಟರ್ ಬೇಕೇ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

RCB Fans Urge Management to Bid for Jos Buttler in IPL 2025 Mega Auction

ಹೌದು, ಆರ್‌ಸಿಬಿ ತಂಡಕ್ಕೆ ಈಗ ಸ್ಫೋಟಕ ಆರಂಭಿಕ ಬ್ಯಾಟರ್ ಬೇಕಾಗಿದೆ. ವಿರಾಟ್ ಕೊಹ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಾರೆ ಅವರ ಜೊತೆ ಆರಂಭಿಕರಾಗಿ ಆಡಲು ಒಬ್ಬ ಸ್ಫೋಟಕ ಬ್ಯಾಟರ್ ಬೇಕಿದ್ದು, ಆ ಸ್ಥಾನಕ್ಕೆ ಜೋಸ್ ಬಟ್ಲರ್ ಸೂಕ್ತ ಎಂದು ಅಭಿಮಾನಿಗಳು ಹೇಳಿದ್ದಾರೆ. ಬಟ್ಲರ್ ಮತ್ತು ಕೊಹ್ಲಿ ಆರಂಭಿಕರಾಗಿ ಬಂದರೆ ಅದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಜೋಸ್ ಬಟ್ಲರ್ ಯಾಕೆ ಬೇಕು?

ಜೋಸ್ ಬಟ್ಲರ್ ಸಿಕ್ಕಾಪಟ್ಟೆ ಅನುಭವ ಇರುವ ಬ್ಯಾಟರ್. ಆರಂಭಿಕರಾಗಿ ಐಪಿಎಲ್‌ನಲ್ಲಿ ಹಲವು ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಐಪಿಎಲ್‌ನಲ್ಲಿ ಹೆಚ್ಚು ಶತಕ ಗಳಿಸಿರುವ ಬ್ಯಾಟರ್ ಜೋಸ್ ಬಟ್ಲರ್, ಕೊಹ್ಲಿ 8 ಶತಕ ಗಳಿಸಿ ಮಿಂಚಿದ್ದರೆ, ಜೋಸ್‌ ಬಟ್ಲರ್ 7 ಶತಕ ಗಳಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಡಿರುವ ಅವರು ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ.ಒಂದು ಕಡೆ ಕೊಹ್ಲಿ ಮತ್ತೊಂದು ಕಡೆ ಬಟ್ಲರ್ ಗಟ್ಟಿಯಾಗಿ ನಿಂತರೆ ರನ್ ಹೊಳೆ ಹರಿಯುವುದು ಪಕ್ಕಾ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

2024ರ ಐಪಿಎಲ್‌ನಲ್ಲಿ 2 ಶತಕ ಗಳಿಸಿ ಮಿಂಚಿದ್ದರು. 2022ರ ಆವೃತ್ತಿಯಲ್ಲಿ 4 ಶತಕ ಗಳಿಸಿದ್ದರು. 107 ಐಪಿಎಲ್ ಪದ್ಯಗಳನ್ನಾಡಿರುವ ಬಟ್ಲರ್, 3,582 ರನ್ ಗಳಿಸಿದ್ದಾರೆ. 38.11 ಸರಾಸರಿ ಹೊಂದಿದ್ದು 147.53 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

2022ರ ಮೆಗಾ ಹರಾಜಿನಲ್ಲಿ 10 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದರು. ಬಾರಿ ಕೂಡ ಜೋಸ್ ಬಟ್ಲರ್ ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಆರ್‌ಸಿಬಿ 83 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಪಂತ್, ಕೆಎಲ್ ರಾಹುಲ್‌ ಜೊತೆ ಬಟ್ಲರ್ ಕೂಡ ಆರ್‌ಸಿಬಿ ತಂಡಕ್ಕೆ ಬರಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+