10 ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು ಅಂತಾ ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ... Virat Kohli
ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಚೆನ್ನೈ ತಂಡ ಸಿಎಸ್‌ಕೆ & ಧೋನಿ ಕಂಡರೆ ಕೆಂಡದ ರೀತಿ ಕೋಪ. ಅದರಲ್ಲೂ ಬೆಂಗಳೂರು ತಂಡ ಆರ್‌ಸಿಬಿ ವಿರುದ್ಧ ಚೆನ್ನೈ ತಂಡದ ಮ್ಯಾಚ್ ಇದ್ದರೆ ಇಂಡಿಯಾ & ಪಾಕಿಸ್ತಾನ್ ರೀತಿ ಹೋಲಿಕೆ ಮಾಡಲಾಗುತ್ತದೆ. ಚೆನ್ನೈ ಸೋತು ಹೋದರೆ ಆರ್‌ಸಿಬಿ ಅಭಿಮಾನಿಗಳು ಪಟಾಕಿ ಬ್ಲಾಸ್ಟ್ ಮಾಡಿ ಸಂಭ್ರಮ ಪಡುತ್ತಾರೆ, ಚೆನ್ನೈ ತಂಡ ಎಲ್ಲಾ ಮ್ಯಾಚ್ ಸೋಲಬೇಕು ಅಂತಾರೆ ಆರ್‌ಸಿಬಿ ಫ್ಯಾನ್ಸ್. ಹೀಗಿದ್ದಾಗಲೇ, 10 ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು ಅಂತಾ ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ...
ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ದೊಡ್ಡ ಸಹಾಯ ಮಾಡುತ್ತಿದೆ. ಅದು ಹೇಗೆ ಅಂದ್ರೆ, ಇವತ್ತು ಗುಜರಾತ್ ವಿರುದ್ಧ ಗೆಲ್ಲುವ ಮೂಲಕ ನಮ್ಮ ಬೆಂಗಳೂರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಹಂತಕ್ಕೆ ಹೋಗೋದಕ್ಕೆ ಸಹಾಯ ಮಾಡುತ್ತಿದೆ ಚೆನ್ನೈ ಸೂಪರ್ ಕಿಂಗ್ಸ್. ಯಾಕಂದ್ರೆ ಟೇಬಲ್ ಟಾಪರ್ ಆಗಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಗುಜರಾತ್ ಟೈಟಾನ್ಸ್ ತಂಡವನ್ನ ಇಂದು ಸಿಎಸ್‌ಕೆ ಸೋಲಿಸುವ ಮೂಲಕ ಆರ್‌ಸಿಬಿ ತಂಡಕ್ಕೆ ಬೆನ್ನೆಲುಬಾಗುತ್ತಿದೆ...

ಆರ್‌ಸಿಬಿ ತಂಡಕ್ಕೆ ಚೆನ್ನೈ ನೆರವು?
ಹೈದರಾಬಾದ್ ವಿರುದ್ಧ ಆರ್‌ಸಿಬಿ ತಂಡ ಸುಲಭವಾಗಿ ಗೆಲ್ಲುವ ಅವಕಾಶವನ್ನ ಕಿಂಗ್ ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್ ಸೃಷ್ಟಿ ಮಾಡಿದ್ದರು. ಹೀಗಿದ್ದಾಗ ನಂತರ ಬಂದ ಆರ್‌ಸಿಬಿ ತಂಡದ ಬೇರೆ ಆಟಗಾರರು ಸರಿಯಾಗಿ ಆಟ ಆಡಿದ್ದರೆ ಸುಲಭವಾಗಿ ಗೆದ್ದು ಬೀಗ ಬಹುದಿತ್ತು. ಆದರೆ, ಹೈದರಾಬಾದ್ ವಿರುದ್ಧ ಸೋಲುವ ಮೂಲಕ ನಮ್ಮ ಆರ್‌ಸಿಬಿ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಆರ್‌ಸಿಬಿ ತಂಡ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಮುಂದುವರಿಯುವ ಅವಕಾಶ ಇತ್ತು. ಹೀಗಿದ್ದಾಗ ಕೆಲ ಆಟಗಾರರು ಮಾಡಿದ ಎಡವಟ್ಟು ಬಗ್ಗೆ ಇದೀಗ ಆಕ್ರೋಶದ ರಣಕಹಳೆ ಮೊಳಗಿಸಿತ್ತು. ಇಂತಹ ಸಮಯದಲ್ಲೇ ಚೆನ್ನೈ ತಂಡ ಗೆಲ್ಲಬೇಕು, ಗುಜರಾತ್ ಸೋಲಬೇಕು ಅಂತಾ ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥನೆಯ ಮಾಡುತ್ತಿದ್ದರು.
ನಂಬರ್ 1 ಆಗುತ್ತಾ ನಮ್ಮ ಬೆಂಗಳೂರು ತಂಡ?
ಚೆನ್ನೈ ತಂಡ ಗುಜರಾತ್ ತಂಡವನ್ನ ಸೋಲಿಸಿದರೆ ಇದರಿಂದ ಗುಜರಾತ್ ಕೇವಲ 18 ಅಂಕ ಪಡೆದು ಕೆಳಗೆ ಕುಸಿಯಲಿದೆ. ಆ ನಂತರ 17 ಅಂಕ ಪಡೆದಿರುವ ನಮ್ಮ ಆರ್‌ಸಿಬಿ ತಂಡವು ಮತ್ತೆ ನಂಬರ್ 1 ಸ್ಥಾನಕ್ಕೆ ಹೋಗಲು ಸುಲಭ ಆಗಲಿದೆ ಅಂತಾನೇ ಅಭಿಮಾನಿಗಳು ಇದೀಗ ಚೆನ್ನೈ ತಂಡ ಗೆದ್ದು ಬೀಗಬೇಕು ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಈಗಿನ ಪರಿಸ್ಥಿತಿಯನ್ನ ನೋಡಿದರೆ ಚೆನ್ನೈ ತಂಡ ಗುಜರಾತ್ ವಿರುದ್ಧ ಭರ್ಜರಿ ಗೆಲುವು ಪಡೆಯುವುದು ಗ್ಯಾರಂಟಿ!












Click it and Unblock the Notifications