ದೇವರ ಮಗ ಸೋತ, ದ್ರಾವಿಡ್ ಮಗ ಗೆದ್ದು ಬೀಗಿದ... Rahul Dravid
ಹುಲಿ ಹೊಟ್ಟೆಯಲ್ಲಿ ಹುಲಿ ಹುಟ್ಟುತ್ತೆ... ಆನೆ ಹೊಟ್ಟೆಯಲ್ಲಿ ಆನೆ ಹುಟ್ಟುತ್ತೆ... ಇಂತಹ ಮಾತು ನಿಮ್ಮ ಕಿವಿಗೂ ಬಿದ್ದಿರಬಹುದು. ಯಾಕಂದ್ರೆ ಸಾಧನೆ ಮಾಡುವುದು ಯಾರ ಅಪ್ಪನ ಮನೆಯ ಸ್ವತ್ತು ಅಲ್ಲ, ಆದರೂ ಅಪ್ಪನಿಗೆ ಮಗನನ್ನು & ಮಗನಿಗೆ ಅಪ್ಪನನ್ನು ಹೋಲಿಕೆ ಮಾಡುವ ವಾತಾವರಣ ಈ ನಮ್ಮ ಸಮಾಜದಲ್ಲಿ ಈಗಲೂ ಇದೆ. ಅಪ್ಪ ದೊಡ್ಡ ಕ್ರಿಕೆಟರ್ ಆಗಿದ್ದರೆ ಮಗ ಕೂಡ ಅದೇ ರೀತಿಯಾಗಿ ಕ್ರಿಕೆಟ್ ಆಡುತ್ತಾ ಕ್ರಿಕೆಟ್ ಲೋಕದಲ್ಲಿ ಕಿಂಗ್ ಆಗಬೇಕು. ಸಿನಿಮಾ ಮಾಡುತ್ತಿದ್ದರೆ ಹೀರೋ ಆಗಿ ದೊಡ್ಡ ಹೆಸರು ಹೆಸರು ಮಾಡಬೇಕು... ಇಂತಹ ವಾತಾವರಣದಲ್ಲಿ ದೇವರ ಮಗ ಸೋತ, ದ್ರಾವಿಡ್ ಮಗ ಗೆದ್ದು ಬೀಗಿದ...
ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡುವ ಜೊತೆಗೆ ಕೈತುಂಬಾ ಕಾಸು ಕೂಡ ಮಾಡಿ ಇಡೀ ಜಗತ್ತಿನಲ್ಲಿ ಶ್ರೀಮಂತ ಕ್ರೀಡಾಪಟುಗಳ ಪೈಕಿ ಒಬ್ಬರು ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್ ಅವರ ಈಗಿನ ಅಂದಾಜು ಆಸ್ತಿಯೇ ಸುಮಾರು 1,500 ಕೋಟಿ ರೂಪಾಯಿ ಎನ್ನಲಾಗುತ್ತದೆ. ಅಲ್ಲದೆ ಈ ರೀತಿ ದುಡಿದ ಸಾವಿರಾರು ಕೋಟಿ ರೂಪಾಯಿ ಹಣವನ್ನು ಸಚಿನ್ ತೆಂಡೂಲ್ಕರ್ ದೊಡ್ಡ ಮಟ್ಟದಲ್ಲಿ ಹೂಡಿಕೆ ಕೂಡ ಮಾಡಿದ್ದು, ಮತ್ತಷ್ಟು ಕೋಟಿ ರೂಪಾಯಿ ಸಂಪಾದನೆ ಮಾಡುವ ಹುಮ್ಮಸ್ಸಿನಲ್ಲೇ ಇದ್ದಾರೆ...

ಹಣ ಇದ್ದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನೋ ಮಾತು ಜಗತ್ತಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಹಣ ಇದ್ದರೆ ಏನು ಬೇಕಾದರೂ ಮಾಡಬಹುದು... ಕೈಯಲ್ಲಿ ಕಾಸು ಇದ್ದರೆ ಏನು ಬೇಕಾದರೂ ನಾವು ಕೊಳ್ಳಬಹುದು... ಅಂತೆಲ್ಲಾ ಬಡಾಯಿ ಕೊಚ್ಚಿ ಕೊಳ್ಳುವವರಿಗೆ ಸಚಿನ್ ತೆಂಡೂಲ್ಕರ್ ಮಗನ ಪರಿಸ್ಥಿತಿ ದೊಡ್ಡ ಉದಾಹರಣೆ ಎನ್ನಬಹುದು. ಅಪ್ಪ ಕ್ರಿಕೆಟ್ ಲೋಕದ ದೇವರೇ ಆಗಿದ್ದರೂ ಮಗ ಮಾತ್ರ ಕ್ರಿಕೆಟ್ ಅಖಾಡದಲ್ಲಿ ಠುಸ್ಸ್ ಪಟಾಕಿ ಆಗಿ ಹೋಗಿರುವುದು ಇಡೀ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಇಂತಹ ಸಮಯದಲ್ಲೇ ಕನ್ನಡಿಗ ರಾಹುಲ್ ದ್ರಾವಿಡ್ ಮಗನ ಉದಾಹರಣೆ ಕೊಟ್ಟು, ಸಚಿನ್ ಮಗನಿಗೆ ಜನ ಬುದ್ಧಿ ಹೇಳುತ್ತಿದ್ದಾರೆ!
ದೇವರ ಮಗ ಸೋತ, ದ್ರಾವಿಡ್ ಮಗ...
ಈಗಲೂ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆಗಳ ಸಮೀಪಕ್ಕೆ ಹೋಗಲು ಯಾರಿಗೂ ಆಗಲ್ಲ, ಎನ್ನುವ ವಾತಾವರಣ ಇದೆ. ಆದರೆ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಮಾತ್ರ ಒಂದು ಸರಿಯಾದ ಸಿಕ್ಸರ್ ಬಾರಿಸುವುದು ಬಿಡಿ ಟೀಂ ಇಂಡಿಯಾಗೆ ಆಯ್ಕೆ ಆಗುವುದು ಕೂಡ ಕನಸಿನ ಮಾತಾಗಿ ಉಳಿದುಬಿಟ್ಟಿದೆ. ಹೀಗಿದ್ದಾಗಲೇ ದ್ರಾವಿಡ್ ಮಗನ ಅಬ್ಬರ ಕಂಡು ಇಡೀ ಕ್ರಿಕೆಟ್ ಪ್ರಪಂಚ ಚಪ್ಪಾಳೆ ಹೊಡೆಯುತ್ತಿದೆ. ಅಲ್ಲದೆ, ದುಡ್ಡು ಇದ್ದರೆ ಮಾತ್ರ ಸಾಲದು & ಟ್ಯಾಲೆಂಟ್ ಕೂಡ ಇರಬೇಕು ಅಂತಾ ಕ್ರಿಕೆಟ್ ಲೋಕದ ಜನರು ಸಚಿನ್ ತೆಂಡೂಲ್ಕರ್ ಪುತ್ರನಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ದೇವರ ಮಗ ಸೋತ, ದ್ರಾವಿಡ್ ಮಗ ಗೆದ್ದು ಬೀಗಿದ... ಅಂತಿದ್ದಾರೆ ಜನ! ಯಾಕೆ ಗೊತ್ತಾ? ಮುಂದೆ ಓದಿ.
ಕನ್ನಡ ನಾಡಿನ ತಂಡಕ್ಕೆ ಕ್ಯಾಪ್ಟನ್!
ಅಂದಹಾಗೆ ಇದೀಗ ಮುಂಬರುವ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ತಂಡ ಕೂಡ ಅಬ್ಬರಿಸಲು ಸಜ್ಜಾಗಿದೆ. ಕರ್ನಾಟಕ ಅಂಡರ್-19 ತಂಡದ ಕ್ಯಾಪ್ಟನ್ ಆಗಿ, ಇದೀಗ ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ & ಪ್ರಧಾನ ಕೋಚ್ ಕೂಡ ಆಗಿದ್ದ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಾಟಕ ತಂಡಕ್ಕೆ ಕೂಡ ಹಲವಾರು ವರ್ಷ ಕಾಲ ಆಟ ಆಡಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಇದೀಗ ಅವರ ಪುತ್ರನಿಗೂ ದೊಡ್ಡ ಅವಕಾಶ ಸಿಕ್ಕಿದೆ, ಇದು ರಾಹುಲ್ ದ್ರಾವಿಡ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ. ಅಲ್ಲದೆ ಭವಿಷ್ಯದಲ್ಲಿ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಭಾರತ ತಂಡದ ನಾಯಕ ಕೂಡ ಆಗಲಿ ಅಂತಾನೇ ಫ್ಯಾನ್ಸ್ ಈಗ ಹಾರೈಸುತ್ತಿದ್ದಾರೆ.
ಕನ್ನಡಿಗ ರಾಹುಲ್ ದ್ರಾವಿಡ್ ಕಂಡರೆ ಭಯ!
0, 0, 0, 0, 0, 0... ಇದು ಮಾರ್ಕ್ಸ್ ಕಾರ್ಡ್ ಅಲ್ಲ, ಕನ್ನಡಿಗ ರಾಹುಲ್ ದ್ರಾವಿಡ್ ಎದುರಿಗೆ ಬೌಲಿಂಗ್ ಮಾಡಲು ಬರ್ತಿದ್ದ ಬೌಲರ್ಸ್ ಸ್ಕೋರ್ ಕಾರ್ಡ್. ಹೌದು ರಾಹುಲ್ ದ್ರಾವಿಡ್ ಅಂದ್ರೆ ಕ್ರಿಕೆಟ್ ಲೋಕವೇ ಒಂದು ಕ್ಷಣ ಭಯಪಡ್ತಾ ಇತ್ತು. ಎಲ್ಲರೂ ಯರ್ರಾಬಿರ್ರಿ ಬಾರಿಸಿ ರನ್ ಗಳಿಸಿ, ಕ್ರಿಕೆಟ್ ಬೌಲರ್ ಎದೆಯಲ್ಲಿ ಭಯ ಹುಟ್ಟಿಸುತ್ತಿದ್ದರೆ ಕನ್ನಡಿಗ ರಾಹುಲ್ ದ್ರಾವಿಡ್ ಮಾತ್ರ ರನ್ ಬಾರಿಸದೆ ಭಯ ಹುಟ್ಟು ಹಾಕ್ತಿದ್ದರು. ರಾಹುಲ್ ದ್ರಾವಿಡ್ ಅವರು ಎಂತಹದ್ದೇ ಬಾಲ್ ಬಂದರೂ ಅದನ್ನ ಮೂಲೆಗೆ ತಳ್ಳಿ ಕೂರಿಸುತ್ತಿದ್ದರು. ಈ ಕಾರಣಕ್ಕೆ ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿದರೆ ಹೆದರಿ ಕಣ್ಣೀರು ಹಾಕುತ್ತಿದ್ದರು ಬೌಲರ್ಸ್. ಈಗ ದ್ರಾವಿಡ್ ಅವರ ಮಗ ಕೂಡ ಇದೇ ರೀತಿ ಬೌಲರ್ಸ್ ಎದೆ ನಡುಗಿಸಲು ಸಜ್ಜಾಗಿದ್ದಾರೆ!












Click it and Unblock the Notifications