RCB: ಮುಂದಿನ ಐಪಿಎಲ್‌ನಲ್ಲಿ ರಾಹುಲ್ ದ್ರಾವಿಡ್ ಆರ್‌ಸಿಬಿ ಕೋಚ್?
ರಾಹುಲ್ ದ್ರಾವಿಡ್, ಸದ್ಯ ಟಿ20 ವಿಶ್ವಕಪ್ ಗೆದ್ದು ಬೀಗುತ್ತಿರುವ ಭಾರತ ತಂಡದ ದ್ರೋಣಾಚಾರ್ಯ. ಆಟಗಾರನಾಗಿ ಮುಗಿಲೆತ್ತರದ ಸಾಧನೆ ಮಾಡಿರುವ ಗ್ರೇಟ್ ವಾಲ್‌ಗೆ ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಎನ್ನುವ ಕೊರಗು ಇದ್ದೇ ಇತ್ತು. ಆಟಗಾರನಾಗಿ ಐಸಿಸಿ ಪ್ರಶಸ್ತಿ ಗೆಲ್ಲದೇ ಇದ್ದರೂ, ಕೋಚ್ ಆಗಿ ಆ ಕನಸು ನನಸು ಮಾಡಿಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ದ್ರಾವಿಡ್ ಅವರಿಗೆ ಕೋಚ್ ಆಗಿ ಈ ಟಿ20 ವಿಶ್ವಕಪ್ ಕೊನೆಯದಾಗಿತ್ತು, ರೋಹಿತ್ ಶರ್ಮಾ ಪಡೆ ದ್ರಾವಿಡ್ ಅವರ ಕನಸು ನನಸು ಮಾಡುವಲ್ಲಿ ಯಶಸ್ವಿಯಾಗಿದೆ.

ಫೈನಲ್‌ನಲ್ಲಿ ಭಾರತ ಗೆದ್ದ ಬಳಿಕ ದ್ರಾವಿಡ್ ಮಗುವಿನಂತೆ ಕುಣಿದು ಕುಪ್ಪಳಿಸಿದ್ದರು. ಅವರು ಈ ರೀತಿ ಸಂಭ್ರಮಾಚರಣೆ ಮಾಡಿದ್ದನ್ನು ನೋಡುವುದು ಬಹಳ ಕಡಿಮೆ, ಅದನ್ನು ಕಂಡು ಆಟಗಾರರು ಮತ್ತು ಅಭಿಮಾನಿಗಳು ಕೂಡ ಅಚ್ಚರಿ ಪಟ್ಟಿದ್ದಾರೆ.
ಆರ್‌ಸಿಬಿ ಕೋಚ್ ಆಗ್ತಾರಾ?
ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿ ಮುಕ್ತಾಯವಾಗಿದೆ. ಮುಂದಿನವಾರದಿಂದ ನಾನು ನಿರುದ್ಯೋಗಿ, ನನಗೆ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಮಾಧ್ಯಮಗಳ ಬಳಿ ತಮಾಷೆಯಾಗಿ ಮಾತನಾಡಿದ್ದಾರೆ.
ದ್ರಾವಿಡ್ ಅವರನ್ನು ಆರ್ ಸಿಬಿ ತಂಡದ ಕೋಚ್ ಮಾಡಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ದ್ರಾವಿಡ್ ಕೋಚ್ ಆದರೆ ಆಗಲಾದರೂ ಆರ್ ಸಿಬಿ ಕಪ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಅಭಿಮಾನಿಗಳದ್ದಾಗಿದೆ.
ದ್ರಾವಿಡ್ ಉತ್ತಮ ಆಯ್ಕೆ
ಒಂದು ವೇಳೆ ಆರ್ ಸಿಬಿ ಏನಾದರೂ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಿಸಿಕೊಳ್ಳಲು ಯೋಚಿಸಿದರೆ, ತಂಡಕ್ಕೆ ಸಾಕಷ್ಟು ಲಾಭವಾಗುತ್ತದೆ. ಮೊದಲನೆಯದಾಗಿ ದ್ರಾವಿಡ್ ಅವರಿಗೆ ಭಾರತೀಯ ಆಟಗಾರರ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಅಂಡರ್ 19 ಆಟಗಾರರ ಬಗ್ಗೆಯೂ ಅವರು ತಿಳಿದುಕೊಂಡಿದ್ದಾರೆ. ಇದು ಬಲಿಷ್ಠ ತಂಡ ಕಟ್ಟುವಲ್ಲಿ ನೆರವಾಗಲಿದೆ.
ವಿರಾಟ್ ಕೊಹ್ಲಿ ಜೊತೆ ದ್ರಾವಿಡ್ ಉತ್ತಮ ನಂಟು ಹೊಂದಿದ್ದಾರೆ. ಇದು ಇಬ್ಬರಿಗೂ ಆಟದ ಬಗ್ಗೆ ಯೋಜನೆ ರೂಪಿಸಲು ಸಹಾಯಕವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ದ್ರಾವಿಡ್ ಕರ್ನಾಟಕದವರು, ಆರ್ ಸಿಬಿ ತಂಡಕ್ಕಾಗಿ ಆಡಿದವರು. ಅವರಿಗೆ ತಂಡದ ಜೊತೆ ಭಾವನಾತ್ಮಕ ನಂಟಿದೆ. ಅವರು ತಂಡದ ಕೋಚ್ ಆದರೆ ತಂಡದ ಜನಪ್ರಿಯತೆ ಕೂಡ ಮತ್ತಷ್ಟು ಹೆಚ್ಚಲಿದೆ.
ಆದರೆ ಆರ್ ಸಿಬಿ ಮ್ಯಾನೇಜ್‌ಮೆಂಟ್‌ಗೆ ಸ್ಥಳೀಯ ಆಟಗಾರರು, ಕೋಚ್ ಎಂದರೆ ಅದ್ಯಾಕೋ ಅಸಡ್ಡೆ ಇದೆ. ಅದೆಲ್ಲವನ್ನೂ ಮೀರಿ ದ್ರಾವಿಡ್ ಕೋಚ್ ಆಗ್ತಾರಾ ಎನ್ನುವ ಪ್ರಶ್ನೆ ಇದೆ. ಆಗಲಿ ಎನ್ನುವ ಆಸೆ ಕೂಡ ಅಭಿಮಾನಿಗಳದ್ದಾಗಿದೆ.












Click it and Unblock the Notifications