Ind vs Pak: ಭಾರತ ತಂಡಕ್ಕೆ ಚಾಲೆಂಜ್ ಮಾಡಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಒಂದೂ ಪಂದ್ಯ ಗೆಲುವು ಕಾಣದೆ ಸೆಮಿಫೈನಲ್‌ನಿಂದ ಹೊರಬಿದ್ದಿದೆ. ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸೋಲು ಕಂಡ ಬಳಿಕ ಪಾಕಿಸ್ತಾನ ಪಂದ್ಯಾವಳಿಯಿಂದಲೇ ಹೊರಬಿದ್ದಿತ್ತು. ಇತ್ತೀಚಿನ ದಿನಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವಾಗ ಮೊದಲಿನ ಪೈಪೋಟಿ ಕಾಣಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಪಾಕಿಸ್ತಾನ ದುರ್ಬಲ ತಂಡವಾಗಿದ್ದು ಆಟದಲ್ಲಿ ಮೊದಲಿನ ರೋಚಕತೆ ಇರುವುದಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಎರಡೂ ತಂಡಗಳ ನಡುವಿನ ಹೋಲಿಕೆ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಕ್ಲೈನ್ ಮುಷ್ತಾಕ್ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತ ತಂಡಕ್ಕೆ ಸವಾಲು ಹಾಕಿದ್ದಾರೆ. 24 ನ್ಯೂಸ್‌ ಎಚ್‌ಡಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಹೊಸ ಸವಾಲು ಹಾಕಿದ್ದಾರೆ. ಭಾರತ ನಿಜವಾಗಿ ಶ್ರೇಷ್ಠ ತಂಡ ಎನ್ನುವುದನ್ನು ಸಾಬೀತುಪಡಿಸಲು ಪಾಕಿಸ್ತಾನದ ವಿರುದ್ಧ 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಲಿ ಎಂದು ಹೇಳಿದರು.

Pakistan ex cricketer open challenge to team india

ರಾಜಕೀಯವನ್ನು ಬದಿಗಿಟ್ಟರೆ ಪಾಕಿಸ್ತಾನದ ಆಟಗಾರರು ಉತ್ತಮವಾಗಿ ಆಡುತ್ತಾರೆ, ಅವರು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಭಾರತ ನಿಜವಾಗಿ ಉತ್ತಮ ತಂಡವಾಗಿದ್ದರೆ ಪಾಕಿಸ್ತಾನದ ವಿರುದ್ಧ 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಲಿ ಆಗ ಯಾವ ತಂಡ ಉತ್ತಮ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾನ್-ಉಲ್-ಹಕ್ ಕೂಡ ಹಾಜರಿದ್ದರು.

ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ನಾಯಕತ್ವ, ಆಯ್ಕೆ ಸಮಿತಿ ನಿರ್ವಹಣೆ ಅಥವಾ ಮಂಡಳಿಯ ಅಧಿಕಾರಿಗಳಾಗಿರಲಿ, ಪ್ರತಿಯೊಂದು ಸ್ಥಾನದಲ್ಲೂ ಹಲವಾರು ಪ್ರಮುಖ ವ್ಯಕ್ತಿಗಳು ಬದಲಾಗಿದ್ದರೂ ಸಮಸ್ಯೆ ಮಾತ್ರ ಬಗೆಹರಿಯದೇ ಉಳಿದಿದೆ. ಪಾಕಿಸ್ತಾನ ತಂಡದಲ್ಲಿ ಈಗ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಸಕ್ಲೈನ್ ಮುಷ್ತಾಕ್ ಒಪ್ಪಿಕೊಂಡರು. ಆದರೆ ತಂಡ ಸರಿಯಾಗಿ ಸಿದ್ಧವಾದರೆ ಎಂತಹುದೇ ತಂಡವನ್ನು ಸೋಲಿಸುತ್ತದೆ, ಆಟಕ್ಕೆ ನಾವು ಸರಿಯಾಗಿ ಸಿದ್ಧತೆ ಮಾಡಿಕೊಂಡರೆ ಜಗತ್ತಿನ ತಂಡಗಳಿಗೆ ಮತ್ತು ಭಾರತ ತಂಡಕ್ಕೂ ತಕ್ಕ ಉತ್ತರವನ್ನು ನೀಡುವ ಸ್ಥಿತಿಯಲ್ಲಿರುತ್ತೇವೆ ಎಂದು ಸಕ್ಲೈನ್ ಮುಷ್ತಾಕ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ಸದ್ಯ ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯುವಂತೆ ಅಭಿಮಾನಿಗಳು ಆಸೆಪಟ್ಟರೂ ಎರಡೂ ದೇಶಗಳ ನಡುವೆ ರಾಜಕೀಯ ತಿಕ್ಕಾಟದಿಂದಾಗಿ ಸದ್ಯದ ಮಟ್ಟಿಗೆ ಅದು ಸಾಧ್ಯವಾಗುವುದು ಅನುಮಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+