ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೆ ಕಿವೀಸ್‌ಗೆ ಶಾಕ್, ಸ್ಟಾರ್ ಆಲ್‌ರೌಂಡರ್‌ಗೆ ಕೊರೊನಾ
ನಾಟಿಂಗ್‌ಹ್ಯಾಮ್, ಜೂನ್ 15 : ನ್ಯೂಜಿಲ್ಯಾಂಡ್ ತಂಡದ ಆಲ್‌ರೌಂಡರ್ ಮೈಕಲ್ ಬ್ರಾಸ್‌ವೆಲ್‌ಗೆ ಕೊರೊನಾ ದೃಢಪಟ್ಟಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಮುಗಿದ ಮುರುದಿನ ದಿನವೇ ಕಿವೀಸ್ ಕ್ರಿಕೆಟಿಗನಿಗೆ ಕೊರೊನಾ ಸೋಂಕು ತಗುಲಿದೆ.
ಕೆಲವು ಕೋವಿಡ್ ಲಕ್ಷಣಗಳು ಕಂಡುಬಂದ ಬೆನ್ನಲ್ಲೇ ಬ್ರಾಸ್‌ವೆಲ್‌ಗೆ ಆಂಟಿಜೆನ್ ಪರೀಕ್ಷೆಗೆ (RAT) ಒಗಾಗಿದ್ದರು. ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಗುರುವಾರ ಜೂನ್ 23 ರಿಂದ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ಗೆ ತಂಡಕ್ಕೆ ಮರಳುವ ಮೊದಲು ಐದು ದಿನಗಳ ಐಸೊಲೇಸನ್ ಅಗತ್ಯವಿದೆ.
ಬ್ರಾಸ್‌ವೆಲ್‌ಗೆ ಕೋವಿಡ್ 19 ಸೋಂಕು ತಗುಲಿರುವ ಹಿನ್ನಲೆ ಇಡೀ ಕಿವೀಸ್ ತಂಡವನ್ನು ಬುಧವಾರ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮುಂದಿನ ಪಂದ್ಯಕ್ಕೆ ಈ ಹಂತದಲ್ಲಿ ಯಾವುದೇ ಬದಲೀ ಆಟಗಾರರನ್ನು ಆಯ್ಕೆ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಜಾನಿ ಬೈರ್‌ಸ್ಟೋವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ 5 ವಿಕೆಟ್‌ಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿತು. 2ನೇ ಇನ್ನಿಂಗ್ಸ್‌ನಲ್ಲಿ 284ಕ್ಕೆ ಆಲೌಟ್ ಆಗಿದ್ದ ಕಿವೀಸ್ ಅತಿಥೇಯ ಇಂಗ್ಲೆಂಡ್ ತಂಡಕ್ಕೆ 299 ರನ್‌ಗಳ ಗುರಿ ನೀಡಿತ್ತು. ಕೊನೆಯ ದಿನ ಇಂಗ್ಲೆಂಡ್ 72 ಓವರ್‌ಗಳಲ್ಲಿ ಗುರಿಯನ್ನು ತಲುಪಬೇಕಿತ್ತು. ಆದರೆ ಇಂಗ್ಲೆಂಡ್ ಟೆಸ್ಟ್‌ನಲ್ಲೂ ಟಿ20 ಕ್ರಿಕೆಟ್‌ನಂತೆ ಬ್ಯಾಟ್ ಬೀಸಿ ಕೇವಲ 50 ಓವರ್‌ಗಳಲ್ಲಿ ತಲುಪಿತು.
ಜಾನಿ ಬೈರ್‌ಸ್ಟೋವ್ ಕೇವಲ 92 ಎಸೆತಗಳಲ್ಲಿ 14 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 136 ರನ್ ಚಚ್ಚಿದರೆ, ನಾಯಕ ಬೆನ್ ಸ್ಟೋಕ್ಸ್ 70 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 75 ರನ್‌ಗಳಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಂಡರು.
ಮೊದಲ ಸರಣಿ ಜಯ; ಜೋ ರೂಟ್ ನಂತರ ಇಂಗ್ಲೆಂಡ್ ತಂಡದ ಅಧಿಕೃತ ನಾಯಕನಾಗಿದ್ದ ಬೆನ್ ಸ್ಟೋಕ್ಸ್ ಮೊದಲ ಸರಣಿಯನ್ನು ಗೆಲ್ಲುವು ಮೂಲಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆಂಗ್ಲ ತಂಡವನ್ನು ಗೆಲುವಿನ ಹಳಿಗೆ ಮರಳುವಂತೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಸ್ಟೋಕ್ಸ್ ಎರಡೂ ಇನ್ನಿಂಗ್ಸ್ ಸೇರಿ 2 ವಿಕೆಟ್ ಮತ್ತು 121 ರನ್‌ಗಳಿಸಿದ್ದಾರೆ. ಈ ಸರಣಿಗೂ ಮುನ್ನ ಇಂಗ್ಲೆಂಡ್ ತಂಡ ಭಾರತ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಂಡಿತ್ತು.












Click it and Unblock the Notifications