ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಚಕವಾಗಿ ಫೈನಲ್ ತಲುಪಿದ ಪಾಕಿಸ್ತಾನ, ಏಷ್ಯಾಕಪ್‌ನಿಂದ ಭಾರತ ಹೊರಕ್ಕೆ

|
Google Oneindia Kannada News

ಶಾರ್ಜಾ, ಸೆ. 7: ಏಷ್ಯಾಕಪ್ 2022ರ ಸೂಪರ್ 4 ಹಂತದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ರೋಚಕ ಅಂತ್ಯ ಕಂಡಿದೆ. ಈ ಪಂದ್ಯದ ಫಲಿತಾಂಶವು ಟೀಂ ಇಂಡಿಯಾಕ್ಕೆ ಕಹಿ ಸುದ್ದಿಯನ್ನು ತಂದಿದ್ದು, ಏಷ್ಯಾಕಪ್‌ನಿಂದ ಭಾರತ ಹೊರಬೀಳುವ ಪರಿಸ್ಥಿತಿ ಉಂಟಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಸೋತಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದಿದ್ದರೆ ಅನುಕೂಲವಾಗುತ್ತಿತ್ತು. ಹಾಗೋ ಹೀಗೋ ಫೈನಲ್ ತಲುಪುವ ಕನಸು ಜೀವಂತ ಇರುತ್ತಿತ್ತು. ಆದರೆ, ಅಫ್ಘಾನಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸುವ ಮೂಲಕ ಭಾರತದ ಆಸೆ ಈಡೇರದಂತೆ ಮಾಡಿದೆ.

ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲು ಅಂತಿಮ ಓವರ್ ನಲ್ಲಿ ಪಾಕಿಸ್ತಾನಕ್ಕೆ 11 ರನ್ ಬೇಕಿತ್ತು. ಅದಾಗಲೇ ಆಸಿಫ್ ಅಲಿ ವಿಕೆಟ್ ಕಿತ್ತಿದ್ದ ಅಫ್ಘಾನಿಸ್ತಾನಕ್ಕೆ ಇನ್ನೆರಡು ವಿಕೆಟ್ ಕಬಳಿಸಿ ಗೆಲ್ಲುವ ಉತ್ಸಾಹ ಇಮ್ಮಡಿಯಾಗಿತ್ತು. ಆದರೆ, ಚೊಚ್ಚಲ ಏಷ್ಯಾಕಪ್ ಆಡುತ್ತಿರುವ ಯುವ ವೇಗಿ ನಸೀಂ ಶಾ ಕೊನೆ ಓವರ್ ನಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ, ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರು. ಅಫ್ಘಾನಿಸ್ತಾನದ ವೇಗಿ ಫಜಲ್ ಹಕ್ ಫರೂಖಿ ಸತತವಾಗಿ ಫುಲ್ ಟಾಪ್ ಎಸೆತ ಹಾಕಿದ್ದು, ಅಫ್ಘನ್ ತಂಡಕ್ಕೆ ಮಾರಕವಾಗಿ ಪರಿಣಮಿಸಿತು.

ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾ ತಂಡವನ್ನು ಪಾಕಿಸ್ತಾನ ಎದುರಿಸಲಿದೆ. ಸೂಪರ್ 4 ಹಂತದಲ್ಲಿ ಗೆಲುವು ಕಾಣದ ಭಾರತ ಹಾಗೂ ಅಫ್ಘಾನಿಸ್ತಾನ ಕೊನೆ ಪಂದ್ಯಕ್ಕೂ ಮುನ್ನವೇ ಪಂದ್ಯಾವಳಿಯಿಂದ ಹೊರ ಬೀಳಲಿವೆ. ಎರಡು ಗೆಲುವು, ನಾಲ್ಕು ಅಂಕಗಳೊಂದಿಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಭಾನುವಾರದಂದು ಫೈನಲ್ ಪಂದ್ಯದಲ್ಲಿ ಸೆಣಸಲಿವೆ.

 India are out of Asia Cup 2022

ಸೂಪರ್ 4 ಹಂತದಲ್ಲಿ ಪಾಕ್ ವಿರುದ್ಧ ರೋಹಿತ್ ಪಡೆ 5 ವಿಕೆಟ್ ಗಳಿಂದ ಸೋಲು ಹಾಗೂ ಶ್ರೀಲಂಕಾ ವಿರುದ್ಧ 6 ವಿಕೆಟ್ ಗಳ ಅಂತರದ ಸೋಲು ಅನುಭವಿಸಿತ್ತು. ಒಂದು ವೇಳೆ ಪಾಕ್ ವಿರುದ್ಧ ಅಫ್ಘಾನಿಸ್ತಾನ ಗೆದ್ದು, ಅಫ್ಘಾನಿಸ್ತಾನ ವಿರುದ್ಧ ಭಾರತ ದೊಡ್ಡ ಅಂತರದಲ್ಲಿ ಜಯಿಸಿ ನಂತರ ಪಾಕ್ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿದ್ದರೆ ಭಾರತ ಹಾಗೂ ಶ್ರೀಲಂಕಾ ಫೈನಲ್ ಆಡಬಹುದಾಗಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ, ಅಫ್ಘಾನಿಸ್ತಾನ ಹಾಗೂ ಭಾರತ ತಂಡಗಳ ಫೈನಲ್ ಕನಸು ಭಗ್ನಗೊಳಿಸಿದೆ.

ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ 20 ಓವರ್ ಗಳಲ್ಲಿ129/6
ಇಬ್ರಾಹಿಂ ಜದ್ರಾನ್ 35ರನ್ (37ಎಸೆತಗಳು)
ಹಜರತುಲ್ಲಾ ಜಾಜಾಯಿ 21(17)
ರಶೀದ್ ಖಾನ್ 18 ನಾಟೌಟ್(15)

ಹಾರೀಸ್ ರಾಫ್ 2/26, ನಸೀಂ ಶಾ 1/19, ಮೊಹಮ್ಮದ್ ನವಾಜ್ 1/23

ಪಾಕಿಸ್ತಾನ 131/9 (19.2)
ಶಾಬಾದ್ ಖಾನ್ 36(26)
ಇಫ್ತಿಖರ್ ಅಹ್ಮದ್ 30 (33)
ಮೊಹಮ್ಮದ್ ರಿಜ್ವಾನ್ 20 (26)

ಫರೀದ್ ಅಹ್ಮದ್ 3/31, ಫಜಲ್ ಹಕ್ ಫರೂಕಿ 3/31(3.2ಓವರ್ಸ್), ರಶೀದ್ ಖಾನ್ 2/25

ಫಲಿತಾಂಶ: ಪಾಕಿಸ್ತಾನಕ್ಕೆ 1 ವಿಕೆಟ್ ಜಯ

English summary
Naseem Shah smacks 2 sixes to take Pakistan to Asia Cup final, India are out of Asia Cup 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X