ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದಕ್ಕೆ ಬಂಧನ; ಯಾರು ಈ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ?
ಜನಪ್ರಿಯ ಟ್ರಾವೆಲ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. 3.70 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ "ಟ್ರಾವೆಲ್ ವಿತ್ ಜೋ" ಹೆಸರಿನ ಟ್ರಾವೆಲ್ ಉದ್ದೇಶಿ ಯಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿರುವ ಮಲ್ಹೋತ್ರಾ, ಉತ್ತರ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ-ಸಂಬಂಧಿತ ಬೇಹುಗಾರಿಕೆ ಜಾಲದ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಬಂಧಿತರಾಗಿದ್ದಾರೆ.
ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್ ಪೊಲೀಸರು ಬೇಹುಗಾರಿಕೆ ಮತ್ತು ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳಿಗೆ ಸೂಕ್ಷ್ಮ ಭಾರತೀಯ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ. 1923ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರ ಪ್ರಕರಣವು ಈಗ ಹೆಚ್ಚಿನ ತನಿಖೆಗಾಗಿ ಆರ್ಥಿಕ ಅಪರಾಧಗಳ ವಿಭಾಗದಲ್ಲಿದೆ.

ಪಾಕ್ ಕಾರ್ಯಕರ್ತರ ಜೊತೆ ಸಂಪರ್ಕ
ಹಿಸಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಸಂಜಯ್ ದಾಖಲಿಸಿದ ಎಫ್‌ಐಆರ್ ಪ್ರಕಾರ, ಮಲ್ಹೋತ್ರಾ 2023 ರ ಭೇಟಿಯ ಸಮಯದಲ್ಲಿ ನವದೆಹಲಿಯ ಪಾಕಿಸ್ತಾನ ಹೈಕಮಿಷನ್ (ಪಿಎಚ್‌ಸಿ) ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರ ಸಂಪರ್ಕಕ್ಕೆ ಬಂದರು. ಡ್ಯಾನಿಶ್ ಅವರ ಹ್ಯಾಂಡ್ಲರ್ ಆಗಿ ಕೆಲಸ ಮಾಡಿದ್ದು, ಅವರನ್ನು ಪಾಕಿಸ್ತಾನಿ ಗುಪ್ತಚರ ಆಪರೇಟಿವ್ಸ್ (ಪಿಐಒ) ಗೆ ಪರಿಚಯಿಸಿದರು ಮತ್ತು ಎನ್‌ಕ್ರಿಪ್ಟ್ ಮಾಡಿದ ಪ್ಲಾಟ್‌ಫಾರ್ಮ್‌ಗಳ ಮೂಲಕ ಅವರ ಜೊತೆ ಸಂವಹನ ನಡೆಸಳಾಗಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಮತ್ತು ಬಾಲಿಗೂ ಭೇಟಿ
ಜ್ಯೋತಿ ಮಲ್ಹೋತ್ರಾ 2023 ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ, ಅಲ್ಲಿ ಅವರು ಅಲಿ ಎಹ್ವಾನ್, ಶಕೀರ್ ಮತ್ತು ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ಅನುಮಾನ ಬರದಂತೆ ಅವರು ಜಟ್ ರಾಂಧವಾನಂತಹ ವೇಷಧಾರಿ ಹೆಸರುಗಳಲ್ಲಿ ಸಂಪರ್ಕ ಬೆಳೆಸಿದ್ದರು ಎನ್ನಲಾಗಿದೆ.
ಅವರು ಗುಪ್ತಚರ ಆಪರೇಟಿವ್‌ಗಳಲ್ಲಿ ಒಬ್ಬರೊಂದಿಗೆ ಇಂಡೋನೇಷ್ಯಾದ ಬಾಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ, ಇದು ಕೇವಲ ಸಂವಹನ ಮಾತ್ರವಲ್ಲದ ಅದಕ್ಕೂ ಮಿಗಿಲಾದ ಷಡ್ಯಂತ್ರಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.
ಜ್ಯೋತಿ ಮಲ್ಹೋತ್ರಾ ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಕಾರ್ಯಕರ್ತರೊಂದಿಗೆ ದೊಡ್ಡ ಬೇಹುಗಾರಿಕೆ ಜಾಲದ ಭಾಗವಾಗಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರು ಸೇರಿದಂತೆ ಆರು ವ್ಯಕ್ತಿಗಳನ್ನು ಈವರೆಗೆ ಬಂಧಿಸಲಾಗಿದೆ, ಅವರ ಮೇಲೆ ಬೇಹುಗಾರಿಕೆ, ಸೂಕ್ಷ್ಮ ಮಾಹಿತಿಯನ್ನು ರವಾನಿಸುವುದು ಮತ್ತು ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಗೆ ಹಣಕಾಸು ಮತ್ತು ಲಾಜಿಸ್ಟಿಕ್ ಬೆಂಬಲವನ್ನು ಒದಗಿಸಿದ ಗಂಭೀರ ಆರೋಪ ಮಾಡಲಾಗಿದೆ.












Click it and Unblock the Notifications