India vs Bangladesh T20: ವಿಕೆಟ್ ಕೀಪರ್ ಸ್ಥಾನಕ್ಕೆ ಇವರಿಬ್ಬರ ನಡುವೆ ಭಾರಿ ಪೈಪೋಟಿ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಬಳಿಕ ಭಾರತ ಟಿ20 ಸರಣಿಯನ್ನು ಆಡಲಿದೆ. ಇನ್ನೂ ಬಿಸಿಸಿಐ ಟಿ20 ತಂಡವನ್ನು ಆಯ್ಕೆ ಮಾಡದೇ ಇದ್ದರೂ, ಪ್ರಮುಖ ಆಟಗಾರರ ನಡುವೆ ಭಾರತ ತಂಡವನ್ನು ಸೇರಲು ಪೈಪೋಟಿ ತೀವ್ರವಾಗಿದೆ. ಮುಖ್ಯವಾಗಿ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಭಾರಿ ಸ್ಪರ್ಧೆ ಇದ್ದು, ಇದೀಗ ಇಶಾನ್ ಕಿಶನ್ ಕೂಡ ರೇಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಿರುವ ಸಂಜು ಸ್ಯಾಮ್ಸನ್‌ಗೆ ಹೊಸ ತಲೆನೋವು ಶುರುವಾಗಿದೆ.
ತಂಡದಲ್ಲಿ ಅವಕಾಶ ಪಡೆಯಲು ಸಾಕಷ್ಟು ಹೆಣಗಾಡುವ ಸಂಜು ಸ್ಯಾಮ್ಸನ್ ಅಪರೂಪಕ್ಕೆ ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ. ಅವರ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ.

ಅಪಘಾತದ ಬಳಿಕ ಚೇತರಿಸಿಕೊಂಡಿರು ರಿಷಬ್ ಪಂತ್ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಟೆಸ್ಟ್‌ನಲ್ಲಿ ಅಬ್ಬರಿಸುವ ಪಂತ್ ಟಿ20 ಮಾದರಿಯಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಈ ನಡುವೆ ಇಶಾನ್ ಕಿಶನ್ ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿದ್ದು ಟಿ20 ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
ಮಾರ್ಚ್‌ನಲ್ಲಿ ಪಂತ್ ಭಾರತ ತಂಡದಲ್ಲಿ ವಿಕೆಟ್‌ಕೀಪರ್ ಸ್ಥಾನವನ್ನು ಮರಳಿ ಪಡೆದರು. ಸ್ಯಾಮ್ಸನ್ 2024 ರ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದೇ ಪರದಾಡಿದರು, ಪಂತ್ ಅಂದಿನಿಂದ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡುತ್ತಿದ್ದಾರೆ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸ್ಯಾಮ್ಸನ್ ಅವರ ಸ್ಥಾನವನ್ನು ಕಿತ್ತುಕೊಂಡಿದ್ದಾರೆ.
ರಿಷಬ್ ಪಂತ್‌ಗೆ ವಿಶ್ರಾಂತಿ
ಭಾರತ - ಬಾಂಗ್ಲಾದೇಶ ಟಿ20 ಸರಣಿಯಲ್ಲಿ ಪಂತ್‌ಗೆ ವಿಶ್ರಾಂತಿ ನೀಡಬಹುದು ಎಂದು ವರದಿಯಾಗಿದೆ. 3 ಪಂದ್ಯಗಳ ಸರಣಿಯು ಟೆಸ್ಟ್ ಸರಣಿ ಮುಗಿದ ಐದು ದಿನಗಳ ನಂತರ ಅಂದರೆ ಅಕ್ಟೋಬರ್ 6 ರಂದು ಪ್ರಾರಂಭವಾಗುತ್ತದೆ. ಪಂತ್ ಮಾರ್ಚ್‌ನಿಂದ ಸತತವಾಗಿ ಆಡುತ್ತಿದ್ದು ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಪಂತ್‌ಗೆ ವಿಶ್ರಾಂತಿ ನೀಡುವುದು ಸ್ಯಾಮ್ಸನ್‌ಗೆ ಒಳ್ಳೆಯ ಸುದ್ದಿ. ಆದರೆ ಸ್ಯಾಮ್ಸನ್‌ಗೆ ಈಗ ಇಶಾನ್ ಕಿಶನ್ ತಲೆನೋವಾಗಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ಸ್ಥಾನ ಪಡೆಯುವ ಸಾಧ್ಯತೆ ಇದೆ. 2023ರ ನವೆಂಬರ್‌ನಿಂದ ಭಾರತಕ್ಕಾಗಿ ಯಾವುದೇ ಪಂದ್ಯವನ್ನು ಆಡದ ಇಶಾನ್ ಕಿಶನ್ ಪಂತ್ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.
ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಇಶಾನ್ ಕಿಶಾನ್‌ಗೆ ಸಹಾಯಕವಾಗಿದೆ. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಇಬ್ಬರೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯರಂತಹ ಆಟಗಾರರು ಇದ್ದು, ಆರಂಭಿಕ ಸ್ಥಾನದಲ್ಲಿ ಆಡಲು ಅವಕಾಶ ಇರುವ ಕಾರಣ ಕಿಶನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.












Click it and Unblock the Notifications