IPL 2024: ಐಪಿಎಲ್ 2024ರ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ ನೋಡಿ
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಲೋಕಸಭಾ ಚುನಾವಣೆ ಇರುವ ಕಾರಣ ಐಪಿಎಲ್ ಪಂದ್ಯಗಳು ಭಾರತದಿಂದ ಹೊರಗಡೆ ನಡೆಯುತ್ತವೆ ಎನ್ನುವ ಆತಂಕವಿತ್ತು. ಆದರೆ, ಬಿಸಿಸಿಐ ಭಾರತದಲ್ಲೇ ಐಪಿಎಲ್ ಪಂದ್ಯಗಳನ್ನು ನಡೆಸಲು ನಿರ್ಧರಿಸಿದ್ದು, ಎಲ್ಲಾ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೊದಲ ಹಂತದಲ್ಲಿ ಬಿಸಿಸಿಐ ಏಪ್ರಿಲ್ 7ರವರೆಗಿನ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು, ಈಗ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ 8ರಂದು ಸಿಎಸ್‌ಕೆ ತಂಡ ಕೆಕೆಆರ್ ತಂಡದ ವಿರುದ್ಧ ಸೆಣೆಸಲಿದ್ದು ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗದ ಕಾರಣ ಬಿಸಿಸಿಐ ಆರಂಭಿಕ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಬಳಿಕ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 24 ರಿಂದ ಜೂನ್ 4 ರವರೆಗೆ ನಡೆಯಲಿದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ರೂಪಿಸಲಾಗಿದೆ.
ಟಾಟಾ ಐಪಿಎಲ್ನ ಪೂರ್ತಿ ವೇಳಾಪಟ್ಟಿ ಹಿಂಗಿದೆ ನೋಡ್ಕೊಳ್ರಪ್ಪ. ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಪ್ರತಿದಿನ ಮನರಂಜನೆ ತಪ್ಪಿದ್ದಲ್ಲ 🤗
— Star Sports Kannada (@StarSportsKan) March 25, 2024
ನೋಡಿರಿ TATA IPL 2024 ಪ್ರತಿದಿನ ನಿಮ್ಮ #StarSportsKannada ದಲ್ಲಿ#IPLonStar pic.twitter.com/a06LkQVXLK
ಮೇ 26ರಂದು ಫೈನಲ್
ಮೇ 19ರಂದು ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದ್ದು, ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕೊನೆಯ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ಅಮಹದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕ್ವಾಲಿಫೈಯರ್ 1 ಪಂದ್ಯ ಮೇ 21ರಂದು ನಡೆಯಲಿದ್ದು, ಮೇ 22 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಮೇ 24ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಮೇ 26 ರಂದು ಇದೇ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಚುನಾವಣೆ ಜೊತೆಗೆ ಕ್ರಿಕೆಟ್ ಹಬ್ಬ
ಚುನಾವಣೆ ಜೊತೆ ಕ್ರಿಕೆಟ್ ಹಬ್ಬ ಜೊತೆಯಾಗಿದೆ. ಭದ್ರತಾ ಕಾರಣದಿಂದ ಸಮಸ್ಯೆ ಎದುರಾಗುತ್ತದೆ ಎನ್ನುವ ಆತಂಕ ಇತ್ತಾದರೂ, 7 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ಗೊಂದಲಕ್ಕೆ ಯಾವುದೇ ಆಸ್ಪದ ಕೊಡದಂತೆ ಬಿಸಿಸಿಐ ವೇಳಾಪಟ್ಟಿಯನ್ನು ರೂಪಿಸಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆ ಸಮಯದಲ್ಲೇ ಐಪಿಎಲ್ ಪಂದ್ಯಾವಳಿ ಇದ್ದ ಕಾರಣ, ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ಪಂದ್ಯಗಳು ನಡೆಯಲಿದ್ದು, ಅಭಿಮಾನಿಗಳ ಸಂತಸ ಹೆಚ್ಚಿಸಿದೆ.
ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ
1) ಆರ್‌ಸಿಬಿ Vs ಸಿಎಸ್‌ಕೆ - ಮಾರ್ಚ್ 22 (ಆರ್‌ಸಿಬಿಗೆ ಸೋಲು)
2) ಆರ್‌ಸಿಬಿ Vs ಪಂಜಾಬ್ ಕಿಂಗ್ಸ್ - ಮಾರ್ಚ್ 25, ಬೆಂಗಳೂರು.
3) ಆರ್‌ಸಿಬಿ Vs ಕೋಲ್ಕತ್ತಾ ನೈಟ್ ರೈಡರ್ಸ್ - ಮಾರ್ಚ್ 29, ಬೆಂಗಳೂರು.
4) ಆರ್‌ಸಿಬಿ Vs ಲಕ್ನೊ ಸೂಪರ್ ಜೈಂಟ್ಸ್ - ಏಪ್ರಿಲ್ 2, ಬೆಂಗಳೂರು.
5) ಆರ್‌ಸಿಬಿ Vs ರಾಜಸ್ಥಾನ ರಾಯಲ್ಸ್ - ಏಪ್ರಿಲ್ 6, ಜೈಪುರ.
6) ಆರ್‌ಸಿಬಿ Vs ಮುಂಬೈ ಇಂಡಿಯನ್ಸ್ - ಏಪ್ರಿಲ್ 11, ಮುಂಬೈ.
7) ಆರ್‌ಸಿಬಿ Vs ಸನ್‌ರೈಸರ್ಸ್ ಹೈದರಾಬಾದ್ - ಏಪ್ರಿಲ್ 15, ಬೆಂಗಳೂರು.
8) ಆರ್‌ಸಿಬಿ Vs ಕೋಲ್ಕತ್ತಾ ನೈಟ್ ರೈಡರ್ಸ್ - ಏಪ್ರಿಲ್ 21, ಕೋಲ್ಕತ್ತಾ.
9) ಆರ್‌ಸಿಬಿ Vs ಸನ್‌ರೈಸರ್ಸ್ ಹೈದರಾಬಾದ್ - ಏಪ್ರಿಲ್ 24, ಹೈದರಾಬಾದ್.
10) ಆರ್‌ಸಿಬಿ Vs ಗುಜರಾತ್ ಟೈಟಾನ್ಸ್ - ಏಪ್ರಿಲ್ 28, ಅಹಮದಾಬಾದ್.
11) ಆರ್‌ಸಿಬಿ Vs ಗುಜರಾತ್ ಟೈಟಾನ್ಸ್ - ಮೇ 4, ಬೆಂಗಳೂರು.
12) ಆರ್‌ಸಿಬಿ Vs ಪಂಜಾಬ್ ಕಿಂಗ್ಸ್ - ಮೇ 9, ಧರ್ಮಶಾಲಾ.
13) ಆರ್‌ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್ - ಮೇ 12, ಬೆಂಗಳೂರು.
14) ಆರ್‌ಸಿಬಿ Vs ಚೆನ್ನೈ ಸೂಪರ್ ಕಿಂಗ್ಸ್ - ಮೇ 18, ಬೆಂಗಳೂರು.












Click it and Unblock the Notifications