IPL 2024: ಐಪಿಎಲ್‌ನಲ್ಲಿ ಮಿಂಚುತ್ತಿರುವ ಭಾರತದ ಅನ್‌ಕ್ಯಾಪ್ಡ್ ಪ್ಲೇಯರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಈ ಬಾರಿಯ ಲೀಗ್‌ನಲ್ಲಿ ಕ್ಯಾಪ್ಡ್ ಅಟಗಾರರಿಗಿಂತಲೂ ಅನ್ ಕ್ಯಾಪ್ಡ್ ಅಟಗಾರರೇ ಹೆಚ್ಚು ಸದ್ದನ್ನು ಮಾಡುತ್ತಿದ್ದಾರೆ. ಅಲ್ಲದೆ ತಾವು ಪ್ರತಿನಿಧಿಸುವ ತಂಡಕ್ಕೆ ಜಯದ ಮಾಲೆಯನ್ನು ತೊಡಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಪ್ರಸಕ್ತ ಋತುವಿನಲ್ಲಿ ದೇಶೀಯ ಆಟಗಾರರ ಪ್ರದರ್ಶನ ಎಲ್ಲರ ಗಮನ ಕದ್ದಿದೆ. ಅದರಲ್ಲೂ ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಚರ್ಚಾ ವಸ್ತುವಾಗಿದ್ದಾರೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಬ್ಬರಿಸುತ್ತಿರುವ ಸ್ಟಾರ್ ಆಟಗಾರರು ಟೀಮ್ ಇಂಡಿಯಾ ಪರ ಕಣಕ್ಕೆ ಇಳಿಯುವ ಕನಸು ಕಾಣುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸದ್ದು ಮಾಡುತ್ತಿರುವ ಅನ್‌ಕ್ಯಾಪ್ಡ್ ಆಟಗಾರ ಪರಿಚಯ ಇಲ್ಲಿದೆ.

ರಿಯಾನ್ ಪರಾಗ್
ಕಳೆದ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಮಿಡ್ಲ್ ಆರ್ಡರ್ ಬ್ಯಾಟರ್ ರಿಯಾನ್ ಪರಾಗ. ತಂಡ ಒತ್ತಡದಲ್ಲಿದ್ದಾಗ ಇವರ ಬ್ಯಾಟ್ನಿಂದ ರನ್‌ಗಳು ಹರಿದು ಬಂದವು.
ಪರಾಗ ಆಡಿದ ಧಾಟಿ ಖಂಡಿತವಾಗಿಯೂ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಈ ಋತುವಿನಲ್ಲಿ ಇದುವರೆಗೆ ರಿಯಾನ್ ಆಡಿದ 3 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ವಿಕೆಟ್ ನೀಡಿಲ್ಲ ಮತ್ತು ರಾಜಸ್ಥಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಯಾಂಕ್ ಯಾದವ್
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಸ್ಥಾನ ಪಡೆದಿರುವ ಯುವ ವೇಗಿ ಮಯಾಂಕ್ ಯಾದವ್ ತನ್ನ ವೇಗದ ದಾಳಿಯಿಂದಲೇ ಹೆಸರುವಾಸಿ. ಇವರು ಪಂಜಾಬ್ ಹಾಗೂ ಆರ್‌ಸಿಬಿ ವಿರುದ್ಧದ ಎರಡೂ ಪಂದ್ಯಗಳಲ್ಲೂ ಮನಮೋಹಕ ದಾಳಿ ಸಂಘಟಿಸಿದ್ದಾರೆ. ಅಲ್ಲದೆ ತಮ್ಮ ಪರ್ಫೆಕ್ಟ್ ಲೈನ್ ಹಾಗೂ ಲೆಂಥ ಮುಖಾಂತರ ಎದುರಾಳಿಗೆ ನಡುಕ ಹುಟ್ಟಿಸಿದ್ದಾರೆ.
ಪಂಜಾಬ್ ವಿರುದ್ಧದ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಮಯಾಂಕ್ 3, ಆರ್‌ಸಿಬಿ ವಿರುದ್ಧ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಎರಡೂ ಪಂದ್ಯಗಳಲ್ಲಿ ಮಯಾಂಕ್ ಗಂಟೆಗೆ 150 ಕಿಲೋಮಿಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಇವರ ವೇಗವನ್ನು ಕಂಡ ಕ್ರಿಕೆಟ್ ದಿಗ್ಗಜರು ಅಂತಾರಾಷ್ಟ್ರೀಉ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ.

ಆಂಗ್ಕ್ರಿಶ್ ರಘುವಂಶಿ
18 ವರ್ಷ ಮತ್ತು 303 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಆಂಗ್‌ಕ್ರಿಶ್ ರಘುವಂಶಿ, ತಮ್ಮ ಮೊದಲ ಇನ್ನಿಂಗ್ಸ್‌ನಿಂದ ಮುನ್ನೆಲೆಗೆ ಬಂದಿದ್ದಾರೆ. ಕೆಕೆಆರ್ ಪರ ಬ್ಯಾಟ್ ಮಾಡಿದ ಇವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 54 ರನ್ ಗಳಿಸಿದರು. ಮುಂದಿನ ಪಂದ್ಯಗಳಲ್ಲಿ ಇವರ ಪ್ರದರ್ಶನ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ.
ಸಮೀರ್ ರಿಜ್ವಿ
ಸಿಎಸ್‌ಕೆ ಸಮೀರ್ ರಿಜ್ವಿ ಅವರನ್ನು 8 ಕೋಟಿ 40 ಲಕ್ಷ ರೂಪಾಯಿ ನೀಡಿ ಖರೀದಿಸತ್ತು. ಇವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸಮೀರ್ ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು. ಇವರು ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಇವರಲ್ಲಿನ ಪವರ್ ಫುಲ್ ಶಾಟ್‌ಗಳನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಎಂ.ಸಿದ್ಧಾರ್ಥ
ಆಟಗಾರನಿಗೆ ಚೊಚ್ಚಲ ಪಂದ್ಯ ವಿಶೇಷ. ಅದರಲ್ಲೂ ಬೌಲರ್ ಆಗಿದ್ದು, ವಿಶ್ವದ ಸ್ಟಾರ್ ಕ್ರಿಕೆಟ್ ಆಟಗಾರನನ್ನು ಬಲೆಗೆ ಕೆಡುತ್ತೀರಾ ಎಂದರೆ ಕೇಳಬೇಕೆ. ಲಕ್ನೋ ಸೂಪರ್ ಜೈಂಟ್ಸ್‌ನ ಎಡಗೈ ಸ್ಪಿನ್ ಬೌಲರ್ ಎಂ. ಸಿದ್ಧಾರ್ಥ್ ಎರಡನೇ ಐಪಿಎಲ್ ಪಂದ್ಯದಲ್ಲಿ ಮೊದಲ ವಿಕೆಟ್ ಪಡೆದು ಬೀಗಿದರು. ಅದು ಆರ್‌ಸಿಬಿ ತಂಡದ ಸ್ಟಾರ್ ವಿರಾಟ್ ಕೊಹ್ಲಿ ಅವರದ್ದು. ಇಲ್ಲಿಂದ ಕ್ರಿಕೆಟ್ ಪಂಡಿತರು ಇವರ ಆಟವನ್ನು ಸೂಕ್ಷ್ಮವಾಗಿ ನೋಡಲು ಆರಂಭಿಸಿದರು.
2019 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿದ ಪ್ರದರ್ಶನದ ಆಧಾರದ ಮೇಲೆ ಸಿದ್ಧಾರ್ಥ್‌ಗೆ 2020 ಕೆಕೆಆರ್ ಮಣೆ ಹಾಕಿತು. ಇದರ ನಂತರ, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ನೆಟ್ ಬೌಲರ್ ಆಗಿ ಸಿದ್ಧಾರ್ಥ್ ತಮ್ಮ ಜವಾಬ್ದಾರಿಯನ್ನು ಪೂರೈಸಿದ್ದಾರೆ. ಆದರೆ ಈ ಸೀಸನ್‌ಗಾಗಿ ನಡೆದ ಆಟಗಾರರ ಹರಾಜಿನಲ್ಲಿ ಎಲ್‌ಎಸ್‌ಜಿ ಅವರನ್ನು 2 ಕೋಟಿ 40 ಲಕ್ಷ ರೂ.ಗೆ ನೀಡಿ ಖರೀದಿಸಿತು.












Click it and Unblock the Notifications