IPL 2023, ಪ್ಲೇಆಫ್ ಪ್ರವೇಶಕ್ಕೆ ಮುಂಬೈ ಕೊನೆಯ ಕಸರತ್ತು: ಶಾಕ್ ಕೊಡುತ್ತಾSRH: ಪಿಚ್ ರಿಪೋರ್ಟ್
ಭಾನುವಾರ ಐಪಿಎಲ್‌ನಲ್ಲಿ ಎರಡು ಪಂದ್ಯಗಳು ನಡೆಯಲಿದ್ದು ಈ ಆವೃತ್ತಿಯ ಕೊನೆಯ ಎರಡು ಲೀಗ್ ಪಂದ್ಯಗಳಾಗಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದ್ದು ಕುತೂಹಲ ಮೂಡಿಸಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಪಂದ್ಯದ ಗೆಲುವು ನಿರ್ಣಾಯಕ ಎಂಬುದು ಗಮನಾರ್ಹ.
ಸನ್‌ರೈಸ್ಸ್ ಹೈದರಾಬಾದ್ ತಂಡಈ ಬಾರಿಯ ಆವೃತ್ತಿಯಲ್ಲಿ ಲೀಗ್ ಹಂತದಿಂದ ಈಗಾಗಲೇ ಹೊರಗೆಬಿದ್ದಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಕೊನೆಗೊಳಿಸುವುದು ಮಾತ್ರವೇ ತಂಡದ ಗುರಿಯಾಗಿದೆ. ಹೀಗಾಗಿ ಯಾವುದೇ ಒತ್ತಡವಿಲ್ಲದೆ ಕಣಕ್ಕಿಳಿಯಲಿದೆ SRH ತಂಡ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡು ಸೊರಗಿದೆ

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು ಉತ್ತಮ ಅಂತರದೊಂದಿಗೆ ಗೆದ್ದು ಎರಡು ಅಂಕಗಳ ಜೊತೆಗೆ ನೆಟ್ ರನ್‌ರೇಟ್‌ನಲ್ಲಿಯೂ ಮುನ್ನಡೆ ಸಾಧಿಸುವ ಒತ್ತಡದಲ್ಲಿದೆ. ಹೀಗಾಗಿ ಭಾನುವಾರ ನಡೆಯಲಿರುವ ಪಂದ್ಯ ರೋಹಿತ್ ಶರ್ಮಾ ತಂಡದ ಪಾಲಿಗೆ ಅತ್ಯಂತ ಮಹತ್ವದ್ದು ಎಂಬುದು ಗಮನಾರ್ಹ ಅಂಶ.
ಇವರಿಬ್ಬರೂ ಭವಿಷ್ಯದ ದೊಡ್ಡ ಆಟಗಾರರು: ಯುವ ಆಟಗಾರರ ಬಗ್ಗೆ ರಾಬಿನ್ ಉತ್ತಪ್ಪ ಹೇಳಿಕೆ
ಪಂದ್ಯದ ಮಾಹಿತಿ ಹಾಗೂ ನೇರಪ್ರಸಾರದ ವಿವರ
ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧದ ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 21ರಂದು ಮಧ್ಯಾಹ್ನ ಆಯೋಜನೆಯಾಗಲಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಿದರೆ ಜಿಯೋ ಸಿನಿಮಾದಲ್ಲಿ ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸುವ ಅವಕಾಶವಿದೆ.
ಪಿಚ್ ರಿಪೋರ್ಟ್ ಹೀಗಿದೆ
ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ ಪಿಚ್ ಎನಿಸಿಕೊಂಡಿದೆ. ಆರಂಭದಿಂದಲೇ ಇಲ್ಲಿ ಬ್ಯಾಟರ್‌ಗಳಿಗೆ ಅದ್ಭುತ ನೆರವು ದೊರೆಯಲಿದ್ದು ಬೌಲರ್‌ಗಳಿಗೆ ಇಲ್ಲಿ ಕಠಿಣ ಸವಾಲು ಎದುರಾಗಲಿದೆ. ಆದರೆ ಮಧ್ಯಮ ಓವರ್‌ಗಳಲ್ಲಿ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿರಲಿದೆ.
IPL 2023: ಅಂಕಪಟ್ಟಿಯಲ್ಲಿ ನಮ್ಮ ಸ್ಥಾನ ನೋಡಿ ಸ್ವಲ್ಪ ಆಘಾತವಾಗಿದೆ: ಸಂಜು ಸ್ಯಾಮ್ಸನ್ ಹೀಗಂದಿದ್ದು ಯಾಕೆ?
ಸಂಭಾವ್ಯ ಆಡುವ ಬಳಗ
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ಕುಮಾರ್ ಕಾರ್ತಿಕೇಯ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ವಿಷ್ಣು ವಿನೋದ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್
ಸನ್‌ರೈಸರ್ಸ್ ಹೈದರಾಬಾದ್: ವಿವ್ರಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕೊ ಜಾನ್ಸೆನ್, ಮಯಾಂಕ್ ಮಾರ್ಕಂಡೆ












Click it and Unblock the Notifications