CSK vs MI: ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್‌ಗೆ MI ತತ್ತರ: ಸುಲಭ ಗುರಿ ನೀಡಿದ ಮುಂಬೈ ಇಂಡಿಯನ್ಸ್
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ನೀರಸ ಬ್ಯಾಟಿಂಗ್ ಪ್ರದರ್ಶಿಸಿದೆ. ಸಿಎಸ್‌ಗೆ ಬೌಲರ್‌ಗಳ ಅದ್ಭುತ ದಾಳಿಗೆ ಮುಂಬೈ ಇಂಡಿಯನ್ಸ್ ಅಗ್ರ ಕ್ರಮಾಂಕದ ಆಟಗಾರರು ಅಗ್ಗಕ್ಕೆ ವಿಕೆಟ್ ಕಳೆದುಕೊಂಡರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರ ಪ್ರದರ್ಶನ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಣ್ಣ ಚೇತರಿಕೆ ನೀಡಿದೆ
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆರಂಭಿಕನಾಗಿ ರೋಹಿತ್ ಶರ್ಮಾ ಬದಲಿಗೆ ಕ್ಯಾಮರೂನ್ ಗ್ರೀನ್ ಇಶಾನ್ ಕಿಶನ್‌ಗೆ ಸಾಥ್ ನೀಡಿದರು. ರೋಹಿತ್ ಶರ್ಮಾ ಮೂರಬೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆದರೆ ಮೂವರು ಕೂಡ ಎರಡಂಕಿ ಗಳಿಸಲು ಕೂಡ ಸಫಲವಾಗಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತೊಂದು ಶೂನ್ಯ ಸುತ್ತಿ ನಿರ್ಗಮಿಸಿದರು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ 14 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆದರೆ ನಂತರ ಬಂದ ನೇಹಲ್ ವಧೇರಾ ಹಾಗೂ ಸೂರ್ಯಕುಮಾರ್ ಯಾದವ್ ಸಣ್ಣ ಚೇತರಿಕೆ ನೀಡಿದರು. ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 26 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ವದೇರಾ ಟ್ರಿಸ್ಟನ್ ಸ್ಟಬ್ಸ್ ಜೊತೆಗೂ ಉತ್ತಮ ಜೊತೆಯಾಟದಲ್ಲು ಭಾಗಿಯಾದರು. ಆದರೆ ರನ್ ವೇಗ ನಿಧಾನಗತಿಯಲ್ಲಿದ್ದ ಕಾರಣ ಸಾಧಾರಣ ಗುರಿಯನ್ನಷ್ಟೇ ನಿಗದಿಪಡಿಸಲು ಸಾಧ್ಯವಾಯಿತು. ನೇಹಲ್ ವಧೇರಾ 51 ಎಸೆತಗಳನ್ನು ಎದುರಿಸಿದ್ದು 64 ರನ್‌ಗಳಿಸಿದರು. ಸ್ಟಬ್ಸ್ 20 ರನ್‌ಗಳ ಕೊಡುಗೆ ನೀಡಿದರು.
IPL 2023: LSG ತಂಡದಲ್ಲಿ ರಾಹುಲ್ ಬದಲಿಗೆ ಮತ್ತೋರ್ವ ಕನ್ನಡಿಗನಿಗೆ ಅವಕಾಶ: ಲಕ್ನೋ ತಂಡಕ್ಕೆ ಕರುಣ್ ಸೇರ್ಪಡೆ
ನಂತರ ಬಂದ ಟಿಮ್ ಡೇವಿಡ್, ಅರ್ಶದ್ ಖಾನ್ ಕೂಡ ಒಂದಂಕಿಗೆ ಔಟಾದರು. ಅಂರಿಮವಾಗಿ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 139 ರನ್‌ಗಳಿಸಲು ಶಕ್ತವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಥೀಶ ಪತಿರಣ 3 ವಿಕೆಟ್ ಪಡೆದರೆ ದೀಪಕ್ ಚಾಹರ್ ಹಾಗೂ ತುಷಾರ್ ದೇಶ್‌ಪಾಂಡೆ ತಲಾ ಎರಡು ವಿಕೆಟ್ ಕಬಳಿಸಿ ಸಂಭ್ರಮಿಸಿದರು.ಒಂದು ವಕೆಟ್ ರವೀಂದ್ರ ಜಡೇಜಾ ಪಾಲಾಯಿತು.
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಬೆಂಚ್: ಅಂಬಾಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಡ್ವೈನ್ ಪ್ರಿಟೋರಿಯಸ್, ಆರ್ ಎಸ್ ಹಂಗರ್ಗೇಕರ್, ಸಿಸಂದಾ ಮಗಳ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ, ನಿಶಾಂತ್ ಸಿಂಧು
IPL 2023: ಗುಜರಾತ್ ಟೈಟನ್ಸ ವಿರುದ್ಧ ಸೋತ ರೀತಿಗೆ ಕಿಡಿಕಾರಿದ ರಾಜಸ್ಥಾನ್ ರಾಯಲ್ಸ್ ಕೋಚ್ ಸಂಗಕ್ಕರ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಅರ್ಷದ್ ಖಾನ್
ಬೆಂಚ್: ಕುಮಾರ್ ಕಾರ್ತಿಕೇಯ, ರಮಣದೀಪ್ ಸಿಂಗ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್, ವಿಷ್ಣು ವಿನೋದ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ದುವಾನ್ ಜಾನ್ಸೆನ್, ತಿಲಕ್ ವರ್ಮಾ












Click it and Unblock the Notifications