ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐನಾಕ್ಸ್ ಹಾಲ್‌ಗಳಲ್ಲಿ ಕುಳಿತು ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಬೇಕೇ?

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಭಾರತೀಯರು ಐಸಿಸಿ ಪುರುಷರ ಟಿ-20 ವಿಶ್ವಕಪ್ 2022ರ ಲೈವ್ ಪಂದ್ಯಗಳನ್ನು ಐನಾಕ್ಸ್ ಅಂಗಳದಲ್ಲಿ ಕುಳಿತು ನೋಡಬಹುದು. ದೇಶಾದ್ಯಂತದ ತನ್ನ ಸಿನಿಮಾ ಹಾಲ್‌ಗಳಲ್ಲಿ ವಿಶ್ವಕಪ್ ಲೈವ್ ಪಂದ್ಯವನ್ನು ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ಐಸಿಸಿ ಜೊತೆಗೆ ಐಎನ್‌ಎಕ್ಸ್ ಲೀಸರ್ ಲಿಮಿಟೆಡ್ ಒಪ್ಪಂದಕ್ಕೆ ಸಹಿ ಹಾಕಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ಐಎನ್‌ಎಕ್ಸ್ ಲೀಸರ್ ಹೇಳಿಕೆಯಲ್ಲಿ ತಿಳಿಸಿದೆ. ಟೀಮ್ ಇಂಡಿಯಾ ಆಡಲಿರುವ ಎಲ್ಲಾ ಪಂದ್ಯಗಳನ್ನು ಐನಾಕ್ಸ್ ಪ್ರದರ್ಶಿಸುತ್ತದೆ. ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಪಂದ್ಯದಿಂದ ಪ್ರಾರಂಭವಾಗುವ ಸರಣಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನು ಪ್ರಸಾರ ಮಾಡಲಿದೆ.

ವಿಶ್ವಕಪ್ ಆಡಲು ಬೂಮ್ರಾ ಬದಲಿಗೆ ಈ ವೇಗಿ ಉತ್ತಮ ಎಂದ ವಾಟ್ಸನ್ವಿಶ್ವಕಪ್ ಆಡಲು ಬೂಮ್ರಾ ಬದಲಿಗೆ ಈ ವೇಗಿ ಉತ್ತಮ ಎಂದ ವಾಟ್ಸನ್

''ದೇಶದ 25ಕ್ಕೂ ಹೆಚ್ಚು ನಗರಗಳಲ್ಲಿ ಇರುವ ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಲೈವ್ ಪಂದ್ಯಗಳನ್ನು ಪ್ರದರ್ಶಿಸಲಾಗುತ್ತದೆ" ಎಂದು ಅದು ಹೇಳಿದೆ. ಐಸಿಸಿ ಪುರುಷರ T20 ವಿಶ್ವಕಪ್‌ನ ಎಂಟನೇ ಆವೃತ್ತಿಯು ಅಕ್ಟೋಬರ್ 16 ರಿಂದ ಪ್ರಾರಂಭವಾಗುತ್ತದೆ. ಸೂಪರ್ 12 ಹಂತವು ಅಕ್ಟೋಬರ್ 22 ರಂದು ಪ್ರಾರಂಭವಾಗಲಿದೆ. ಫೈನಲ್ ಪಂದ್ಯವನ್ನು ನವೆಂಬರ್ 13ರಂದು ಮೆಲ್ಬೋರ್ನ್‌ನಲ್ಲಿ ನಿಗದಿಪಡಿಸಲಾಗಿದೆ.

INOX signs deal with ICC to live screen India T-20 World Cup matches in cinema hall

ಕ್ರಿಕೆಟ್ ಪ್ರೇಮಿಗಳಿಗೆ ವರ್ಚುವಲ್ ಟ್ರೀಟ್:

"ಸಿನಿಮಾ ಹಾಲ್‌ಗಳಲ್ಲಿ ಕ್ರಿಕೆಟ್ ಅನ್ನು ಪ್ರದರ್ಶಿಸುವ ಮೂಲಕ ನಾವು ದೈತ್ಯ ಪರದೆಯ ಅನುಭವದ ರೋಮಾಂಚನವನ್ನು ದೇಶದ ಕ್ರೀಡಾ ಪ್ರೇಮಿಗಳಿಗೆ ನೀಡುತ್ತೇವೆ. ವಿಶ್ವಕಪ್‌ನ ಉತ್ಸಾಹ ಮತ್ತು ಭಾವನೆಗಳು ಈ ಸಂಯೋಜನೆ ಅನ್ನು ಸೇರಿಸುತ್ತವೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ವರ್ಚುವಲ್ ಟ್ರೀಟ್ ಆಗಿ ಪರಿಣಮಿಸುತ್ತದೆ," ಎಂದು ಐನಾಕ್ಸ್ ಲೀಸರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ವಿಶಾಲ್ ಹೇಳಿದ್ದಾರೆ.

ಐನಾಕ್ಸ್ ಲೀಸರ್ ಕುರಿತು ತಿಳಿಯಿರಿ:

ಭಾರತದಾದ್ಯಂತ ಐನಾಕ್ಸ್ 165 ಮಲ್ಟಿಪ್ಲೆಕ್ಸ್‌ಗಳು, 705 ಸ್ಕ್ರೀನ್‌ಗಳೊಂದಿಗೆ 74 ನಗರಗಳಲ್ಲಿದ್ದದು 1.57 ಲಕ್ಷ ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಷ ಆರಂಭದ ಮಾರ್ಚ್‌ನಲ್ಲಿ ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸರಣಿಯನ್ನು ರಚಿಸಲು ಐನಾಕ್ಸ್ ಲೀಸರ್ ಮತ್ತು ಪಿವಿಆರ್ ವಿಲೀನವಾಗುವ ಬಗ್ಗೆ ಘೋಷಿಸಿದ್ದವು.

English summary
INOX signs deal with ICC to live screen India T-20 World Cup matches in cinema hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X