ಭಾರತದ ಎದುರು ಇಂಗ್ಲಿಷರಿಗೆ ಮುಖಭಂಗ: 145 ರನ್‌ಗೆ ಗೂಡು ಸೇರಿದ ಇಂಗ್ಲೆಂಡ್!
ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನ ಬಲ ಪ್ರದರ್ಶನ ಮಾಡಿದೆ. ಅದರಲ್ಲೂ ಭಾರತದ ಬೌಲಿಂಗ್ ವಿಭಾಗವು ಅದೆಷ್ಟು ಖಡಕ್ ಆಗಿದೆ ಅನ್ನೋದಕ್ಕೆ ಇಂಗ್ಲೆಂಡ್ ವಿರುದ್ಧದ ಇಂದಿನ ಇನ್ನಿಂಗ್ಸ್ ಸಾಕ್ಷಿ ಆಗಿತ್ತು. ಭಾರತ VS ಇಂಗ್ಲೆಂಡ್ ಕ್ರಿಕೆಟ್ ತಂಡಗಳ 4ನೇ ಟೆಸ್ಟ್ ಮ್ಯಾಚ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಧೂಳಿಪಟವಾಗಿದೆ. 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು, ಭಾರತದ ವಿರುದ್ಧ ಮಂಡಿಯೂರಿದೆ! ಹಾಗಾದರೆ ಭಾರತ ಗೆಲ್ಲಲು ಇನ್ನು ಎಷ್ಟು ರನ್ ಬೇಕು?
ಭಾರತ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ನೀಡಿತ್ತು. ಈ ಮೂಲಕ 4ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಸೋಲುಣಿಸುವ ಸ್ಕೆಚ್ ಹಾಕಿತ್ತು ಇಂಗ್ಲೆಂಡ್ ಟೀಂ. ಆದರೆ ಆಗಿದ್ದೆಲ್ಲಾ ಉಲ್ಟಾ, ಭಾರತ ತಂಡದ ಲೋವರ್ ಆರ್ಡರ್ ಕೊಟ್ಟ ಏಟಿಗೆ ಇಂಗ್ಲೆಂಡ್ ಕ್ರಿಕೆಟ್ ಟೀಂನ ಬೌಲರ್ಸ್ ಪಡೆ ಶೇಕ್ ಆಗಿತ್ತು. ಹೀಗೆ ನೋಡ ನೋಡುತ್ತಲೇ ಭಾರತ ತಂಡ ಕೂಡ ಸವಾಲಿನ ಮೊತ್ತ ಕಲೆಹಾಕಿತ್ತು. ಇದೀಗ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 145 ರನ್‌ಗಳಿಗೆ ತಮ್ಮ ಎಲ್ಲಾ ವಿಕೆಟ್ ಕಳೆದುಕೊಂಡಿರುವ ಇಂಗ್ಲಿಷರು, ಭಾರತ ಕ್ರಿಕೆಟ್ ತಂಡಕ್ಕೆ ಕೇವಲ 192 ರನ್‌ಗಳ ಗುರಿ ನೀಡಿದ್ದಾರೆ.

145ಕ್ಕೆ ಮನೆಗೆ ನಡೆದ ಇಂಗ್ಲೆಂಡ್
2ನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ, ಆರಂಭದಲ್ಲೇ ಭಾರತ ಬೌಲರ್‌ಗಳ ಏಟಿಗೆ ನಲುಗಿ ಹೋಗಿತ್ತು. ಅದರಲ್ಲೂ ಇಂಗ್ಲೆಂಡ್ ತಂಡದ ಪರ ಝಾಕ್ ಕ್ರಾಲಿ ಅವರನ್ನು ಬಿಟ್ಟರೆ, ಇನ್ಯಾವುದೇ ಆಟಗಾರ ಕೆಚ್ಚೆದೆಯ ಹೋರಾಟ ತೋರಿಸಲೇ ಇಲ್ಲ. ಹೀಗಾಗಿ ತನ್ನ ಸಾಲು ಸಾಲು ವಿಕೆಟ್ ಕಳೆದುಕೊಂಡಿತು ಇಂಗ್ಲೆಂಡ್ ಕ್ರಿಕೆಟ್ ತಂಡ, 19 ರನ್ ಆಗಿದ್ದಾಗಲೇ ತನ್ನ ಮೊದಲ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್. ನೋಡ ನೋಡುತ್ತಲೇ ಕೇವಲ 145ಕ್ಕೆ ಆಲೌಟ್ ಆಗಿ ಗೂಡು ಸೇರಿದೆ. ಇನ್ನು ಭಾರತ ತಂಡ ಕೂಡ ಬೌಲಿಂಗ್ ಪಿಚ್‌ನಲ್ಲಿ ಇದೀಗ ಎಚ್ಚರಿಕೆಯ ಆಟವನ್ನು ಶುರು ಮಾಡಿದೆ.
ಭಾರತ ತಂಡಕ್ಕೆ ಗೆಲುವು ಗ್ಯಾರಂಟಿ?
ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ ಈಗಾಗಲೇ, ಸಾಲು ಸಾಲು ಗೆಲುವು ದಾಖಲಿಸಿ ಮಿಂಚುತ್ತಿದೆ. ಅದೇ ರೀತಿ ಇದೀಗ 4ನೇ ಟೆಸ್ಟ್ ಪಂದ್ಯದಲ್ಲಿ ಕೂಡ ಭಾರತ ಗೆಲ್ಲುವುದು ಪಕ್ಕಾ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಭಾರತಕ್ಕೆ ಕೇವಲ 192 ರನ್‌ಗಳ ಗುರಿ ನೀಡಲಾಗಿದೆ. ಹೀಗಾಗಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಅಬ್ಬರ ಕೂಡ ಬಲು ಜೋರಾಗಿದೆ.

ಜುರೆಲ್ ಆಟವಂತೂ ಭರ್ಜರಿ ಗುರೂ!
ರಾಂಚಿಯ ಜೆಎಸ್‍ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಧ್ರುವ್ ಜುರೆಲ್ 149 ಬಾಲ್ ಆಡಿ, 6 ಬೌಂಡರಿ & 4 ಸಿಕ್ಸರ್ ಸಿಡಿಸಿದರು. ಈ ಮೂಲಕ ಬರೋಬ್ಬರಿ 90 ರನ್ ಸಿಡಿಸಿದ ಧ್ರುವ್ ಜುರೆಲ್ ಸ್ವಲ್ಪದರಲ್ಲೇ ಸೆಂಚ್ಯುರಿ ಮಿಸ್ ಮಾಡಿಕೊಂಡರು. ಹೀಗೆ ಶತಕ ವಂಚಿತರಾದ ಕೀಪರ್ ಧ್ರುವ್ ಜುರೆಲ್ ಅವರು ಭಾರತ ತಂಡವನ್ನು ಇಂಗ್ಲೆಂಡ್ ವಿರುದ್ಧ ಹೀನಾಯವಾದ ಸೋಲಿನಿಂದ ಬಚಾವ್ ಮಾಡಿದ್ದಾರೆ. ಅಕಸ್ಮಾತ್ ಧ್ರುವ್ ಜುರೆಲ್ ಗಟ್ಟಿಯಾಗಿ ನಿಲ್ಲದಿದ್ದರೆ, ಭಾರತ ತಂಡ ಕೇವಲ 200 ರನ್ ಒಳಗೆ ಆಲೌಟ್ ಆಗುವ ಭಯ ಎದುರಾಗಿತ್ತು.
ಹೀಗೆ ಜುರೆಲ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಬಲ ತುಂಬಿದ ಕಾರಣ ಇಂಗ್ಲೆಂಡ್ ಟೀಂ 2ನೇ ಇನ್ನಿಂಗ್ಸ್‌ನಲ್ಲಿ ಬೇಗ ಗೂಡು ಸೇರಿತು. ಹೀಗಾಗಿ ಜುರೆಲ್‌ಗೆ ಫ್ಯಾನ್ಸ್ ಸಲಾಂ ಹೇಳಿದ್ದಾರೆ. ಒಟ್ನಲ್ಲಿ ಭಾರತ ಕ್ರಿಕೆಟ್ ತಂಡದ ಹವಾ ಕಂಡು ಇಂಗ್ಲೆಂಡ್ ತಂಡ ಶಾಕ್ ಆಗಿದೆ. ಪರಿಸ್ಥಿತಿ ಕೂಡ ಸಂಪೂರ್ಣ ಭಾರತದ ಹಿಡಿತಕ್ಕೆ ಸಿಕ್ಕಿದೆ. ಇಂಗ್ಲೆಂಡ್ ಬೌಲರ್‌ಗಳು ವಿಕೆಟ್ ತೆಗೆಯಲು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಭಾರತ ತಂಡ ಇಂಗ್ಲೆಂಡ್ ತಂಡದ ಬೌಲಿಂಗ್ ಪಡೆಗೆ ಇದೀಗ ಕ್ರಿಕೆಟ್ ಪಾಠ ಕೂಡ ಹೇಳಿಕೊಡುತ್ತಿದೆ.












Click it and Unblock the Notifications