Ind vs WI: ಫೈನಲ್‌ನಲ್ಲಿ ಭಾರತ vs ವೆಸ್ಟ್ ಇಂಡೀಸ್ ಹಣಾಹಣಿ; ಪ್ಲೇಯಿಂಗ್ ಇಲೆವೆನ್
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 2025ರ ಆವೃತ್ತಿಯ ಫೈನಲ್ ಪಂದ್ಯ ಮಾರ್ಚ್ 16 ರಂದು ಭಾನುವಾರ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿದ್ದು ದಿಗ್ಗಜರ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಯುವರಾಜ್ ಸಿಂಗ್, ಡ್ವೇನ್ ಸ್ಮಿತ್, ಸೇರಿದಂತೆ ಅನೇಕ ಆಟಗಾರರನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಮತ್ತೆ ಸಿಕ್ಕಿದೆ.
ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಭಾನುವಾರ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡವು ಬಲಿಷ್ಠವಾಗಿದ್ದು ಬ್ರಿಯಾನ್ ಲಾರಾ ನಾಯಕತ್ವದ ವೆಸ್ಟ್ ಇಂಡೀಸ್ ತಂಡಕ್ಕೆ ಸವಾಲಾಕಲಿದೆ.

ಬಲಿಷ್ಠವಾಗಿದೆ ಇಂಡಿಯಾ ಮಾಸ್ಟರ್ಸ್
ಇಡೀ ಆವೃತ್ತಿಯಲ್ಲಿ ಇಂಡಿಯಾ ಮಾಸ್ಟರ್ಸ್ ಅಮೋಘ ಪ್ರದರ್ಶನ ನೀಡಿದೆ. ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಭಾರತ ಸೋತಿತ್ತು. ಸಚಿನ್ ತೆಂಡೂಲ್ಕರ್, ಗುರುಕೀರತ್ ಸಿಂಗ್, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಫೈನಲ್ ಪಂದ್ಯದಲ್ಲೂ ಬೃಹತ್ ರನ್‌ಗಳ ಗುರಿಯನ್ನು ನಿರೀಕ್ಷೆ ಮಾಡಬಹುದು. ವಿನಯ್ ಕುಮಾರ್, ಶಹಬಾಜ್ ನದೀಮ್, ಅಭಿಮನ್ಯು ಮಿಥುನ್ ತಂಡದ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದಾರೆ.
ವೆಸ್ಟ್ ಇಂಡೀಸ್‌ನಲ್ಲೂ ಬಲಿಷ್ಠ ಬ್ಯಾಟರ್
ಮತ್ತೊಂದು ಕಡೆ ವೆಸ್ಟ್ ಇಂಡೀಸ್ ಕೂಡ ಬಲಿಷ್ಠವಾಗಿದೆ. ಡ್ವೇನ್ ಸ್ಮಿತ್, ಲೆಂಡಲ್ ಸಿಮನ್ಸ್, ದಿನೇಶ್ ರಾಮ್‌ದಿನ್, ಚಾಡ್ವಿಕ್ ವಾಲ್ಟನ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದರೆ, ಆಶ್ಲೆ ನರ್ಸ್, ರವಿ ರಾಮ್‌ಪಾಲ್ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದಾರೆ.
ಭಾನುವಾರ ಸಂಜೆ 7.30ಕ್ಕೆ ಫೈನಲ್ ಪಂದ್ಯ ಆರಂಭವಾಗಲಿದ್ದು, ಜಿಯೋ ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು. ರಾಯ್‌ಪುರ ಪಿಚ್ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು ಬೃಹತ್ ಮೊತ್ತವನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದು. ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟರ್ ಇದ್ದು ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಇಂಡಿಯಾ ಮಾಸ್ಟರ್ಸ್: ಸಚಿನ್ ತೆಂಡೂಲ್ಕರ್ (ನಾಯಕ), ಅಂಬಟಿ ರಾಯುಡು (ವಿಕೆಟ್ ಕೀಪರ್), ಗುರುಕೀರತ್ ಸಿಂಗ್ ಮಾನ್, ಯೂಸುಫ್ ಪಠಾಣ್, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಪವನ್ ನೇಗಿ, ಶಹಬಾಜ್ ನದೀಮ್, ಧವಳ್ ಕುಲಕರ್ಣಿ, ವಿನಯ್ ಕುಮಾರ್.
ವೆಸ್ಟ್ ಇಂಡೀಸ್ ಮಾಸ್ಟರ್ಸ್: ಡ್ವೇನ್ ಸ್ಮಿತ್, ವಿಲಿಯಂ ಪರ್ಕಿನ್ಸ್, ಲೆಂಡಲ್ ಸಿಮ್ಮನ್ಸ್, ಬ್ರಿಯಾನ್ ಲಾರಾ (ನಾಯಕ), ಆಶ್ಲೇ ನರ್ಸ್, ಚಾಡ್ವಿಕ್ ವಾಲ್ಟನ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಟಿನೋ ಬೆಸ್ಟ್, ಜೆರೋಮ್ ಟೇಲರ್, ಸುಲೈಮಾನ್ ಬೆನ್, ರವಿ ರಾಮ್‌ಪಾಲ್.












Click it and Unblock the Notifications