ಭಾರತಕ್ಕೆ ಭರ್ಜರಿ ಸುದ್ದಿ, ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಇಂಡಿಯಾ?

ಭಾರತೀಯರಿಗೆ ಭರ್ಜರಿ ಸುದ್ದಿ ಸಿಕ್ಕಿದೆ, ಟಿ20 ವಿಶ್ವಕಪ್ 2024ರ ಸೆಮಿಫೈನಲ್ ಮ್ಯಾಚ್ ಆರಂಭಕ್ಕೆ ಮೊದಲೇ ಭಾರತದ ಪರವಾಗಿ ಬಂದಂತೆ ಕಾಣುತ್ತಿದೆ. ಯಾಕಂದ್ರೆ ಭಾರತಕ್ಕೆ ಮಳೆಯ ಬೆಂಬಲ ಸಿಕ್ಕಿದ್ದು, ಭಾರತ ತಂಡ ಬಹುತೇಕ ಟಿ20 ವಿಶ್ವಕಪ್ 2024ರ ಫೈನಲ್ ತಲುಪಿದಂತೆ ಆಗಿದೆ. ಹಾಗಾದರೆ ಇದು ಹೇಗೆ? ಮಳೆ ಹೇಗೆ ಭಾರತ ತಂಡಕ್ಕೆ ಸಹಾಯ ಮಾಡುತ್ತಿದೆ? ಬನ್ನಿ ತಿಳಿಯೋಣ.

ಭಾರತ & ಇಂಗ್ಲೆಂಡ್ ಸೆಮಿಫೈನಲ್​​ ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದೆ. ಈಗ ಗಯಾನಾದಲ್ಲಿ ಭರ್ಜರಿ ಮಳೆ ಬೀಳುತ್ತಿದ್ದು, ಕಳೆದ 24 ಗಂಟೆಯಿಂದ ಸತತ ಮಳೆ ಆಗುತ್ತಿದೆ. ಹೀಗಾಗಿ, ಮ್ಯಾಚ್ ಇನ್ನೂ ಆರಂಭ ಆಗಿಲ್ಲ, ಇಂದು 8:30ಕ್ಕೆ ಆರಂಭ ಆಗಬೇಕಿದ್ದ ಮ್ಯಾಚ್ ಇನ್ನೂ ಶುರು ಆಗಿಲ್ಲ. ಇದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆತಂಕ ತರಿಸಿದೆ, ಯಾಕಂದ್ರೆ ಹೀಗೆ ಮಳೆ ಸುರಿದು ಮ್ಯಾಚ್ ಕ್ಯಾನ್ಸಲ್ ಆಗೋದರೆ ಭಾರತ ನೇರವಾಗಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯಕ್ಕೆ ಎಂಟ್ರಿ ಕೊಡಲಿದೆ. ಏನಿದು ಲೆಕ್ಕಾಚಾರ ಅಂದ್ರಾ? ಮುಂದೆ ಓದಿ.

India VS England Match India Will Go Final Directly If Rain Will Not Stop

ಭಾರತ ಫೈನಲ್‌ಗೆ.. ಇಂಗ್ಲೆಂಡ್ ಮನೆಗೆ..!

ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಮಳೆ ನಿಲ್ಲುವುದು ಬಹುತೇಕ ಅನುಮಾನ. ಹೀಗಿದ್ದರೂ ಪಂದ್ಯಕ್ಕೆ 250 ನಿಮಿಷಗಳ ಹೆಚ್ಚುವರಿ ಸಮಯ ಇದೆ. 5 ಓವರ್ ಅಥವಾ ಸೂಪರ್​ ಓವರ್​ ಆಡಲು ಅವಕಾಶ ಸಿಕ್ಕರೂ ಮ್ಯಾಚ್ ನಡೆಯಲಿದೆ. ಆದರೆ ಭಾರತ & ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಹೀಗಾಗಿ ಸೆಮಿಫೈನಲ್ ಪಂದ್ಯ ಕ್ಯಾನ್ಸಲ್ ಆಗೋದರೆ ಸೂಪರ್​​-8 ಗ್ರೂಪ್-1 ರಲ್ಲಿ ಮೊದಲ ಸ್ಥಾನ ಪಡೆದಿದ್ದ ಭಾರತ ನೇರವಾಗಿ ಫೈನಲ್‌ಗೆ ಹೋಗಲಿದೆ. ಹಾಗೇ ಇಂಗ್ಲೆಂಡ್ ತಂಡಕ್ಕೆ ಮನೆಯ ದಾರಿ ತೋರಿಸಲಾಗುವುದು.

ಭಾರತಕ್ಕೆ ಸೇಡಿನ ಪಂದ್ಯ!

ಇಂಗ್ಲೆಂಡ್ ತಂಡಕ್ಕೆ ಬುದ್ಧಿ ಕಲಿಸಲು ಭಾರತ ತಂಡಕ್ಕೆ ಮತ್ತೊಂದು ಅವಕಾಶ ಇದೀಗ ಸಿಕ್ಕಿದೆ. ಯಾಕಂದ್ರೆ ಈ ಹಿಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂದ್ರೆ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿತ್ತು ಇದೇ ಕಾರಣಕ್ಕೆ ಈಗ ಸೇಡಿನ ಸಮಯ ಬಂದಿದೆ.

2022 ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವೇ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತ್ತು. ಆದರೂ ಇಂಗ್ಲೆಂಡ್ ತಂಡ ಈ ಗುರಿಯನ್ನ ಕೇವಲ 16 ಓವರ್‌ಗೆ ತಲುಪಿತ್ತು. ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ನಲ್ಲಿ ಇಂಗ್ಲೆಂಡ್ 170 ರನ್ ಗಳಿಸಿತ್ತು. ಈ ಮೂಲಕ ಭಾರತ ವಿರುದ್ಧ ಇಂಗ್ಲೆಂಡ್ 10 ವಿಕೆಟ್ ಗೆಲುವು ದಾಖಲಿಸಿತ್ತು. ಇದೀಗ ಆ ಸೋಲಿನ ಸೇಡು ಗ್ಯಾರಂಟಿ ಅನ್ನೋದು ಭಾರತೀಯರ ಮಾತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+