IPL 2025: ಗುಜರಾತ್ ಟೈಟಾನ್ಸ್ ವೇಗಿಯ ಮೇಲಿದ್ದ ನಿಷೇಧ ತೆರವು; ಐಪಿಎಲ್‌ನಲ್ಲಿ ಆಡಲು ಸಜ್ಜು

ದಕ್ಷಿಣ ಆಫ್ರಿಕಾ ಮತ್ತು ಗುಜರಾತ್ ಟೈಟಾನ್ಸ್ ತಂಡದ ಮಾರಕ ವೇಗಿ ಕಗಿಸೋ ರಬಾಡ ಮೇಲಿದ್ದ ನಿಷೇಧ ತೆರವಾಗಿದ್ದು ಎರಡೂ ತಂಡಗಳು ನಿಟ್ಟುಸಿರುವ ಬಿಟ್ಟಿವೆ. ಮಾದಕ ದ್ರವ್ಯ ಸೇವನೆಯ ಚಿಕಿತ್ಸೆಗೆ ಒಳಗಾದ ಬಳಿಕ ಅವರ ಮೇಲಿದ್ದ ಒಂದು ತಿಂಗಳ ಅಮಾನತು ಪೂರ್ಣಗೊಂಡಿದ್ದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2025 ಮತ್ತು ಐಪಿಎಲ್ 2025 ರ ಉಳಿದ ಪಂದ್ಯಗಳಲ್ಲಿ ಆಡಲು ಅರ್ಹರಾಗಿದ್ದಾರೆ.

ಮಾದಕ ದ್ರವ್ಯ ಸೇವನೆ ಖಚಿತವಾದ ಬಳಿಕ ರಬಾಡ ಅವರನ್ನು ಕ್ರಿಕೆಟ್‌ನಿಂದ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರವಾಗಿ ಆಡುತ್ತಿದ್ದ ಅವರು ವೈಯಕ್ತಿಕ ಕಾರಣಗಳಿಂದ ತವರಿಗೆ ವಾಪಸ್ ಆಗಿದ್ದರು. ಆರಂಭದಲ್ಲಿ ತಮ್ಮ ಮೇಲಿದ್ದ ತಾತ್ಕಾಲಿಕ ನಿಷೇಧದ ವಿಚಾರವನ್ನು ಮರೆಮಾಡಿದ್ದ ಅವರು, ಬಳಿಕ ಸುದೀರ್ಘ ಟಿಪ್ಪಣಿಯ ಮೂಲಕ ಅದನ್ನು ತಿಳಿಸಿದ್ದರು.

gujarat titans bowler kagiso rabada ban lifted play in ipl 2025 wtc final

ಇದು ಅವರ ಮೊದಲ ಅಪರಾಧ, ಐಸಿಸಿ ಅವರನ್ನು ಕೇವಲ ಒಂದು ತಿಂಗಳ ಅಮಾನತು ಮತ್ತು ದಂಡ ವಿಧಿಸಲಾಗಿತ್ತು. WADA (ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ) ಮನರಂಜನಾ ಮಾದಕ ದ್ರವ್ಯ ಸೇವನೆಗಾಗಿ ಕನಿಷ್ಠ ಮೂರು ತಿಂಗಳ ಅಮಾನತು ಹೊಂದಿದ್ದರೂ, ಅದನ್ನು ಒಂದು ತಿಂಗಳಿಗೆ ಇಳಿಸಬಹುದು. ರಬಾಡ ಸ್ಪರ್ಧೆಯ ಹೊರಗೆ ಮನರಂಜನೆಗಾಗಿ ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಸಾಬೀತುಪಡಿಸಬೇಕು ಮತ್ತು ಕ್ರೀಡಾಪಟು ದಕ್ಷಿಣ ಆಫ್ರಿಕಾದ ಡ್ರಗ್-ಫ್ರೀ ಸ್ಪೋರ್ಟ್ ಸಂಸ್ಥೆ (SAIDS) ಅನುಮೋದಿಸಿದ ಮಾದಕ ದ್ರವ್ಯ ಸೇವನೆಯ ಚಿಕಿತ್ಸಾ ಕಾರ್ಯಕ್ರಮವನ್ನು ತೃಪ್ತಿಕರವಾಗಿ ಪೂರ್ಣಗೊಳಿಸಬೇಕು.

ರಬಾಡ ಯಾವ ಮಾದಕ ವಸ್ತು ಸೇವಿಸಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲದಿದ್ದರೂ, ದಕ್ಷಿಣ ಆಫ್ರಿಕಾದ ಡ್ರಗ್-ಫ್ರೀ ಸ್ಪೋರ್ಟ್ ಸಂಸ್ಥೆ (SAIDS) ಅವರನ್ನು ಆಡಲು ಅನುಮತಿ ನೀಡಿದೆ. ಜನವರಿ 21 ರಂದು ಎಸ್‌ಎ20 ನಲ್ಲಿ ನಡೆದ ಎಂಐ ಕೇಪ್ ಟೌನ್ vs ಡರ್ಬನ್ ಸೂಪರ್ ಜೈಂಟ್ಸ್ ಪಂದ್ಯದ ನಂತರ ಈ ಮಾದಕ ವಸ್ತು ಪರೀಕ್ಷೆ ನಡೆಯಿತು. ಏಪ್ರಿಲ್ 1 ರಂದು ಫಲಿತಾಂಶಗಳು ಬಂದಂತೆ, ರಬಾಡ ಅವರನ್ನು ಅಮಾನತುಗೊಳಿಸಲಾಗಿದೆ.

"ದಕ್ಷಿಣ ಆಫ್ರಿಕಾದ ಮಾದಕ ವಸ್ತು ಸೇವನೆ ವಿರೋಧಿ ನಿಯಮಗಳ ಪ್ರಕಾರ, ನಿರ್ದಿಷ್ಟವಾಗಿ ದುರುಪಯೋಗದ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ, ಆಟಗಾರನಿಗೆ ಮಾದಕ ವಸ್ತು ಸೇವನೆ ಚಿಕಿತ್ಸಾ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಅವಕಾಶವನ್ನು ನೀಡಲಾಯಿತು. ರಬಾಡ ಅವರ ಚಿಕಿತ್ಸಾ ಕಾರ್ಯಕ್ರಮದ ಎರಡು ಅವಧಿಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ ನಂತರ, ಅವರ ತಾತ್ಕಾಲಿಕ ಅಮಾನತು ಕೊನೆಗೊಂಡಿತು. ಆಟಗಾರನು ಒಂದು ತಿಂಗಳ ಅನರ್ಹತೆಯ ಅವಧಿಯನ್ನು ಪರಿಣಾಮಕಾರಿಯಾಗಿ ಪೂರೈಸಿದ್ದಾರೆ ಮತ್ತು ಈಗ ಕ್ರೀಡೆಯಲ್ಲಿ ಭಾಗವಹಿಸುವಿಕೆಯನ್ನು ಪುನರಾರಂಭಿಸಬಹುದು," ಎಂದು ದಕ್ಷಿಣ ಆಫ್ರಿಕಾದ ಡ್ರಗ್-ಫ್ರೀ ಸ್ಪೋರ್ಟ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಜೂನ್ 11 ರಿಂದ ಆರಂಭವಾಗುತ್ತದೆ. ರಬಾಡ ಈಗಾಗಲೇ ತಮ್ಮ ಅಮಾನತನ್ನು ಪೂರೈಸಿದ್ದು ಫೈನಲ್‌ನಲ್ಲಿ ಆಡಲಿದ್ದಾರೆ. ಅವರು ಗುಜರಾತ್ ಟೈಟಾನ್ಸ್ ಪರವಾಗಿ ಕೂಡ ಅವಕಾಶವಿದ್ದು ಮುಂದಿನ ಪಂದ್ಯಗಳಲ್ಲಿ ಆಡುತ್ತಾರಾ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+