ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ಆಟಗಾರನಿಗೆ 8 ವರ್ಷಗಳ ಜೈಲು ಶಿಕ್ಷೆ ಕೊಟ್ಟ ಕಠ್ಮಂಡು ನ್ಯಾಯಾಲಯ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಆಟಗಾರ, ನೇಪಾಳದ ಸ್ಪಿನ್ನರ್ ಸಂದೀಪ್ ಲಮಿಚಾನೆ ಅತ್ಯಾಚಾರದ ಆರೋಪದ ಮೇಲೆ ಕಠ್ಮಂಡು ನ್ಯಾಯಾಲಯವು ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಕಠ್ಮಂಡು ಪೋಸ್ಟ್ ಪ್ರಕಾರ, 18 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ನಂತರ ಕಠ್ಮಂಡು ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ. ಏಕಸದಸ್ಯ ಪೀಠವು 23 ವರ್ಷದ ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರಿಗೆ ₹ 3,00,000 ದಂಡವನ್ನು ವಿಧಿಸಿತು ಮತ್ತು ಸಂತ್ರಸ್ತೆಗೆ ರೂ 2,00,000 ಪರಿಹಾರವನ್ನು ನೀಡುವಂತೆ ಆದೇಶ ನೀಡಿದೆ.

Former Nepal cricket star Sandeep Lamichhane receives eight-year jail term for rape

ಸಂದೀಪ್ ಲಮಿಚಾನೆ ಪರ ವಕೀಲ ಸರೋಜ್ ಘಿಮಿರೆ ಅವರು ಉನ್ನತ ನ್ಯಾಯಾಲಯದಲ್ಲಿ ನಿರ್ಧಾರವನ್ನು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ, ಕಠ್ಮಂಡು ಪೊಲೀಸರು ಲಮಿಚಾನೆಗಾಗಿ ಬಂಧನ ವಾರಂಟ್ ಹೊರಡಿಸಿದರು, ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ನೇಪಾಳದ ನಾಯಕನಾಗಿ ಅವರನ್ನು ಅಮಾನತುಗೊಳಿಸಿತು.

ನಿರಪರಾಧಿ ಎಂದಿದ್ದ ಲಮಿಚಾನೆ

ಸಂದೀಪ್ ಲಮಿಚಾನೆ ಜಮೈಕಾ ತಲ್ಲವಾಸ್‌ಗಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದರೂ, ಫ್ರಾಂಚೈಸ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಬಿಡುಗಡೆ ಮಾಡಿತು, ಅವರು ಕಠ್ಮಂಡುವಿಗೆ ಹಿಂತಿರುಗಿದರು, ಅಲ್ಲಿ ಅವರನ್ನು ಬಂಧಿಸಲಾಯಿತು.

ಲಮಿಚಾನೆ ತನ್ನ ಬಂಧನಕ್ಕೂ ಮುನ್ನ ನಿರಪರಾಧಿ ಎಂದು ಮನವಿ ಮಾಡಿದರು ಮತ್ತು ತನಿಖೆಯ ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಸಹಕರಿಸುತ್ತೇನೆ ಮತ್ತು ನನ್ನ ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ಇದನ್ನು ಪಿತೂರಿ ಎಂದ ಅವರು ಸುಮ್ಮನೆ ಆರೋಪ ಮಾಡಲಾಗಿದೆ ಎಂದಿದ್ದರು.

2023 ಫೆಬ್ರವರಿಯಲ್ಲಿ ಸ್ವದೇಶದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಲೀಗ್ 2 ತ್ರಿಕೋನ ಸರಣಿಯ ಸಮಯದಲ್ಲಿ ನೇಪಾಳಕ್ಕಾಗಿ ಅವರನ್ನು ತಂಡಕ್ಕೆ ಕರೆತರುವ ಬಗ್ಗೆ ಚಿಂತಿಸಿದರೂ, ವರ್ಷದ ನಂತರ ದುಬೈನಲ್ಲಿ ನಡೆದ ವಿಶ್ವಕಪ್ ಲೀಗ್ 2 ತ್ರಿಕೋನ ಸರಣಿಗೆ ಅವರನ್ನು ಗಾಯದ ಬದಲಿಯಾಗಿ ತಂಡಕ್ಕೆ ಮತ್ತೆ ಸೇರಿಸುವ ನಿರ್ಧಾರ ಕೈಬಿಡಲಾಯಿತು.

ಲಾಮಿಚಾನೆ ಕಳೆದ ಜೂನ್-ಜುಲೈನಲ್ಲಿ ಜಿಂಬಾಬ್ವೆಯಲ್ಲಿ ನಡೆದ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನೇಪಾಳದ ಪರವಾಗಿ ಆಡಿದ್ದಾರೆ, ನಂತರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ನಲ್ಲಿ ಆಡಿದ್ದಾರೆ.

ಲಮಿಚಾನೆ ನೇಪಾಳಕ್ಕಾಗಿ 100 ಕ್ಕೂ ಹೆಚ್ಚು ವೈಟ್-ಬಾಲ್ ಪಂದ್ಯಗಳಲ್ಲಿ 100 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 2018-20 ರ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ್ದಾರೆ, ಒಂಬತ್ತು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+