• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ವಿಶ್ವದ ಶ್ರೀಮಂತ ಲೀಗ್ ಆಗಲಿದೆ: ಲಲಿತ್ ಮೋದಿ ವಿಶ್ವಾಸ

|
Google Oneindia Kannada News

2023-27ರ ಅವಧಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಧ್ಯಮ ಹಕ್ಕುಗಳಿಗಾಗಿ ಬಿಸಿಸಿಐ 48,000 ಕೋಟಿ ರು.ಗಿಂತ ಹೆಚ್ಚಿನ ಮೊತ್ತವನ್ನು ಪಡೆದಿದೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಐಪಿಎಲ್ ನಂ. ವಿಶ್ವದ 1 ಕ್ರೀಡಾ ಲೀಗ್ ಆಗಲಿದೆ ಎಂದು ಹೇಳಿದ್ದಾರೆ. ಮುಂದಿನ ಬಾರಿ ಪ್ರಸಾರ ಹಕ್ಕುಗಳ ಮಾರಾಟದ ವೇಳೆ ಈ ಮೊತ್ತ ದ್ವಿಗುಣಗೊಳ್ಳಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಐಪಿಎಲ್ ಯಾವಾಗಲೂ ಲಾಭದಾಯಕವಾಗಿರುತ್ತದೆ. ವೀಕ್ಷಕರ ಸಂಖ್ಯೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಹೀಗಾಗಿಯೇ ಐಪಿಎಲ್ ಲಾಭ ಮಾಡುತ್ತಿದೆ. ಈಗ ಬಹುಶಃ ಪ್ರತಿ ಆಟಕ್ಕೆ ವೀಕ್ಷಕರ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ ಐಪಿಎಲ್‌ಗೆ ಹೊಸ ಅಭಿಮಾನಿಗಳು ಸೇರಿಕೊಳ್ಳುತ್ತಿದ್ದಾರೆ ಎಂದರು.

ಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟ

ನಾವು ಎಚ್ಚರಿಕೆಯಿಂದ ಮುಂದುವರಿಯಬೇಕು, ಏಕೆಂದರೆ ಯುವ ಪೀಳಿಗೆಯು ಬಹಳ ವಿವೇಚನಾಶೀಲರಾಗಿದ್ದಾರೆ ಮತ್ತು ಅವರು ಹೆಚ್ಚಾಗಿ ಡಿಜಿಟಲ್‌ನಲ್ಲಿದ್ದಾರೆ. ಅದಕ್ಕಾಗಿಯೇ ಡಿಜಿಟಲ್ ಹಕ್ಕುಗಳ ಬೆಲೆಯಲ್ಲಿ ಮಹತ್ತರವಾಗಿ ಏರಿಕೆಯಾಗಿದೆ ಎಂದು ಹೇಳಿದರು. ಜಿಯೋ ಪ್ಲಾಟ್‌ಫಾರ್ಮ್ ಹೆಚ್ಚು ಬಳಕೆದಾರ ಸ್ನೇಹಿಯಾಗಿಲ್ಲ. ದನ್ನು ನಿರ್ದಿಷ್ಟ ವೇದಿಕೆಯಲ್ಲಿ ವೀಕ್ಷಿಸಲು ಸಾಧ್ಯವಾಗುವಷ್ಟು ಉತ್ತಮವಾಗಿಲ್ಲ ಎಂದು ಹೇಳಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ ಬಗ್ಗೆ ಲಲಿತ್ ಮೋದಿ ಪ್ರತಿಕ್ರಿಯೆ

ಸ್ಪಾಟ್‌ ಫಿಕ್ಸಿಂಗ್‌ ಬಗ್ಗೆ ಲಲಿತ್ ಮೋದಿ ಪ್ರತಿಕ್ರಿಯೆ

ಇನ್ನು ಐಪಿಎಲ್‌ನಲ್ಲಿ ಫಿಕ್ಸಿಂಗ್, ಭ್ರಷ್ಟಾಚಾರದ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಈಗ ಐಪಿಎಲ್ ಹೆಚ್ಚು ಪಾರದರ್ಶಕವಾಗಿದೆ. ಗುಜರಾತ್ ಟೈಟಾನ್ಸ್‌ನ ಮೊದಲ ಸೀಸನ್‌ನಲ್ಲೇ ಗೆಲುವು ಕಂಡಿದೆ, ಇನ್ನು ಮುಂದೆ ಯಾವುದೇ ಫಿಕ್ಸಿಂಗ್ ಇಲ್ಲ ಎಂದು ಇದರಿಂದ ವೀಕ್ಷಕರು ನಂಬುವಂತಾಗಿದೆ ಎಂದರು.

ಈ ಮೊದಲು ಐಪಿಎಲ್‌ನಲ್ಲಿ ಭ್ರಷ್ಟಾಚಾರ, ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಫಿಕ್ಸಿಂಗ್ ಆರೋಪದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಎರಡು ವರ್ಷ ಐಪಿಎಲ್‌ನಿಂದ ಅಮಾನತುಗೊಂಡಿದ್ದವು.

ಐಪಿಎಲ್ ಆಡದಂತೆ ತುಂಬಾ ಜನ ಸಲಹೆ ನೀಡಿದ್ದರು: ಜಾನಿ ಬೈರ್ ಸ್ಟೋವ್ಐಪಿಎಲ್ ಆಡದಂತೆ ತುಂಬಾ ಜನ ಸಲಹೆ ನೀಡಿದ್ದರು: ಜಾನಿ ಬೈರ್ ಸ್ಟೋವ್

ಅಹಮದಾಬಾದ್‌ನಲ್ಲೇ ಫೈನಲ್ ಯಾಕೆ

ಅಹಮದಾಬಾದ್‌ನಲ್ಲೇ ಫೈನಲ್ ಯಾಕೆ

ಇನ್ನು ಗುಜರಾತ್‌ನ ಅಹಮದಾಬಾದ್‌ನಲ್ಲೇ ಫೈನಲ್ ಆಡಿಸಿದ್ದರ ಬಗ್ಗೆ ಲಲಿತ್ ಮೋದಿ ಮಾತನಾಡಿದ್ದಾರೆ. ಗುಜರಾತ್ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ನೋಡಲು ಹಲವು ವರ್ಷಗಳಿಂದ ಕಾತರರಾಗಿದ್ದರು.

ಅಹಮದಾಬಾದ್‌ನಲ್ಲಿ ನಿರ್ಮಿಸಲಾದ ನರೇಂದ್ರ ಮೋದಿ ಕ್ರೀಡಾಂಗಣವು ಸಂಪೂರ್ಣವಾಗಿ ವಿಶ್ವ ದರ್ಜೆಯ ಆಟವನ್ನು ವೀಕ್ಷಿಸಲು ಸಹಾಯ ಮಾಡಿದೆ. ಈ ಬಾರಿ ಫೈನಲ್‌ನಲ್ಲಿ ದಾಖಲೆಯ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಸೇರಿದ್ದೇ ಇದಕ್ಕೆ ಸಾಕ್ಷಿ ಎಂದರು.

ಇನ್ನೂ ಹಲವು ವಿಶ್ವ ದರ್ಜೆಯ ಕ್ರಿಡಾಂಗಣ ಬೇಕು

ಇನ್ನೂ ಹಲವು ವಿಶ್ವ ದರ್ಜೆಯ ಕ್ರಿಡಾಂಗಣ ಬೇಕು

ನಾವು ವಿಶ್ವ ದರ್ಜೆಯ ಗುಣಮಟ್ಟದ ಕ್ರೀಡಾಂಗಣಗಳನ್ನು ನಿರ್ಮಿಸಬೇಕಿದೆ. 15 ವರ್ಷಗಳಲ್ಲಿ ಐಪಿಎಲ್ ಬಿಸಿಸಿಐಗೆ 1 ಲಕ್ಷ ಕೋಟಿ ನೀಡಿದೆ. ಆದರೆ ಮೂಲ ಸೌಕರ್ಯವನ್ನು ಉತ್ತೇಜಿಸಲು ಬಿಸಿಸಿಐ ಏನು ಮಾಡಿದೆ ಎಂದು ಲಲಿತ್ ಮೋದಿ ಪ್ರಶ್ನಿಸಿದರು.

ದೆಹಲಿಯ ಕೋಟ್ಲಾ ಕ್ರೀಡಾಂಗಣವನ್ನು ಕೆಡವಬೇಕು. ಬಿಸಿಸಿಐ ತನ್ನ ಹೆಚ್ಚಿನ ಕ್ರೀಡಾಂಗಣಗಳನ್ನು ಕೆಡವಬೇಕು ಮತ್ತು ಹೊಸದಾಗಿ ನಿರ್ಮಿಸಬೇಕಿದೆ. ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಹವಾನಿಯಂತ್ರಣ, ಉತ್ತಮ ಶೌಚಾಲಯಗಳು, ಉತ್ತಮ ನೈರ್ಮಲ್ಯ ಆಹಾರದ ಸ್ಥಳಗಳು, ಉತ್ತಮ ವೀಕ್ಷಕರ ಅನುಭವ, ಉತ್ತಮ ಆಸನಗಳ ವ್ಯವಸ್ಥೆ ಮಾಡಬೇಕಿದೆ. ಐಪಿಎಲ್ ನೀಡುತ್ತಿರುವ ಹಣದಿಂದ ವಿಶ್ವ ದರ್ಜೆಯ ಕ್ರೀಡಾಂಗಣಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ.

ಅಭಿಮಾನಿಗಳೇ ಈ ಯಶಸ್ಸಿಗೆ ಕಾರಣ

ಅಭಿಮಾನಿಗಳೇ ಈ ಯಶಸ್ಸಿಗೆ ಕಾರಣ

ಅಭಿಮಾನಿ ಬಳಗದ ಪ್ರೋತ್ಸಾಹದಿಂದ ಇದೆಲ್ಲ ಸಾಧ್ಯವಾಗಿದೆ. ಪ್ರತಿ 3-4 ವರ್ಷಗಳಿಗೊಮ್ಮೆ ವೀಕ್ಷಕರ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಮಾಧ್ಯಮ ಹಕ್ಕುಗಳ ವಿಷಯದಲ್ಲಿ ಐಪಿಎಲ್‌ನ ಬೆಲೆ ದ್ವಿಗುಣಗೊಳ್ಳುತ್ತಲೇ ಇರುತ್ತದೆ. ಅಭಿಮಾನಿಗಳ ಬಳಗವೇ ಬೆಲೆಯನ್ನು ನಿರ್ದೇಶಿಸುತ್ತದೆ. ಪ್ರಸಾರಕರು ಅದನ್ನು ಲಾಭಪಡೆಯದಿದ್ದರೆ ಇಷ್ಟೊಂದು ಹಣವನ್ನು ಬಂಡವಾಳವಾಗಿ ಹೂಡಲು ಮುಂದೆ ಬರುವುದಿಲ್ಲ ಎಂದರು.

ವಿಶ್ವದ ಮೊದಲ ಲೀಗ್ ಎನ್‌ಎಫ್‌ಎಲ್‌ ಆಗಿದ್ದು, ಇದನ್ನು ಐಪಿಎಲ್‌ ಹಿಂದಿಕ್ಕಲಿದೆ ಎಂದು ಲಲಿತ್ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಮನ್‌ವೆಲ್ತ್‌ನಲ್ಲಿ ಕ್ರಿಕೆಟ್‌ ಸೇರಿಸಿರುವುದರ ಬಗ್ಗೆ ಲಲಿತ್ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳಾ ಕ್ರಿಕೆಟ್ ತಂಡಗಳಿಗೆ ಪ್ರೋತ್ಸಾಹ ನೀಡುವುದು, ಐಪಿಎಲ್‌ ಮಹಿಳಾ ಪಂದ್ಯಗಳನ್ನು ಹೆಚ್ಚು ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Former IPL chairman Lalit Modi Siad IPL Will Be No.1 Sports Property In The World. He believes that IPL media rights valuation will double again in the next cycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X