Yash Dayal: ಲೈಂಗಿಕ ದೌರ್ಜನ್ಯ; ಆರ್‌ಸಿಬಿ ಸ್ಟಾರ್ ಬೌಲರ್ ಯಶ್ ದಯಾಳ್ ಕೆಲವೇ ಕ್ಷಣಗಳಲ್ಲಿ ಬಂಧನ..
Yash Dayal: ಐಪಿಎಲ್ ಟ್ರೋಫಿ ಗೆದ್ದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದಲ್ಲ ಒಂದು ಆಘಾತಗಳು ಎದುರಾಗುತ್ತಲಿವೆ. ಯುವತಿಯೊಬ್ಬಳು ಮಾಡಿದ ಗಂಭೀರ ಆರೋಪ ಸಂಬಂಧಿಸಿದಂತೆ ಆರ್‌ಸಿಬಿ ಗೆಲುವಿನ ರುವಾರಿ ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಾಗಾದ್ರೆ ಏನದು ದೂರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದ ಮಾರನೇ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರತಂ ಸಂಭವಿಸಿದ ಬಳಿಕ ತಂಡಕ್ಕೆ ಒಂದಲ್ಲ ಒಂದು ಆಪತ್ತುಗಳು ಎದುರಾಗುತ್ತಿದ್ದು, ಇದೀಗ ಆರ್‌ಸಿಬಿ ಮಾರಕ ಬೌಲರ್ ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಯುವತಿಯೊಬ್ಬಳು ಮಾಡಿದ ಗಂಭೀರ ಆರೋಪದ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 69ರ ಅಡಿಯಲ್ಲಿ ಘಾಜಿಯಾಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಾಜಿಯಾಬಾದ್ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಗೂ ಸಂತ್ರಸ್ತೆ ಪತ್ರ ಬರೆದು ದೂರು ಕೊಟ್ಟಿದ್ದಳು. ಇದೀಗ ಸಿಎಂ ಕಚೇರಿ ಸೂಚನೆ ಮೇರೆಗೆ ಪೊಲೀಸರು ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಬಂದಿದೆ. ಯಶ್ ದಯಾಳ್ ಮಾಜಿ ಪ್ರೆಯಸಿ ಎನ್ನಲಾದ ಯುವತಿ ಗಂಭೀರ ಆರೋಪ ಮಾಡಿದವಳು.
ಯಶ್ ದಯಾಳ್ ಹಾಗೂ ನಾನು ಕಳೆದ 5 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವು. ಈ ವೇಳೆ ದಯಾಳ್, ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಈಗ ನನ್ನನ್ನು ದೂರ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಳು. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಯಶ್ ದಯಾಳ್ ಮಾಡಿರುವ ವಿಡಿಯೋ ಕರೆಯಲ್ಲಿ ಮಾತನಾಡಿರುವ ಕುರಿತು ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಳು. ಇದನ್ನು ಪರಿಗಣಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಇದೀಗ ದಯಾಳ್ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಸಂಸ್ತ್ರಸ್ತೆ ಮಾಡಿದ ಆರೋಪ ಸಂಬಂಧ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣನಾದ ಯಶ್ ದಯಾಳ್ ಬಂಧನವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದುವರೆಗೂ ಈ ಆರೋಪದ ಬಗ್ಗೆ ಯಶ್ ದಯಾಳ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಮುಂದಿನ ದಿನಗಳಲ್ಲಾದರೂ ಪ್ರತಿಕ್ರಿಯಿಸುತ್ತಾರಾ ಎಂದು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ ಅಂದ್ರೆ ಇದಕ್ಕೆ ಪ್ರಮುಖ ಕಾರಣನೇ ಯಶ್ ದಯಾಳ್ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ತಂಡ ಸೋಲಿಗೆ ಸುಳಿಗೆ ಸಿಕ್ಕಂತಹ ಸಂದರ್ಭದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಿತ್ತು ಗೆಲವುವಿಗೆ ಪ್ರಮುಖ ಕಾರಣರಾದರು. ಈ ನಡುವೆಯೇ ಸಂಸ್ತ್ರಸ್ತೆ ಮಾಡಿದ ಆರೋಪ ಸಬೀತಾದ್ರೆ, ಯಶ್ ದಯಾಳ್ ಬಂಧನವಾಗುವ ಸಾಧ್ಯತೆಯಿದೆ. ಇದರಿಂದ ಆರ್‌ಸಿಬಿ ತಂಡಕ್ಕೆ ದೊಡ್ಡ ಪೆಟ್ಟು ಬೀಲುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications