ಐಸಿಸಿ ವಿಶ್ವಕಪ್ ಸಮಯದಲ್ಲೇ 6 ಬಾಲ್‌ಗೆ 6 ವಿಕೆಟ್ ತೆಗೆದ ಬೆಂಕಿ ಬೌಲರ್ ಈತ!

ಜಗತ್ತಿನ ಪ್ರತಿಯೊಂದು ದೇಶವೂ ಈಗ ಭಾರತದ ಕಡೆ ಗಮನ ಇಟ್ಟು ಕೂತಿದೆ. ಯಾಕಂದ್ರೆ ಒಂದು ಕಡೆ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ ಐಸಿಸಿ ವಿಶ್ವಕಪ್ 2023ರ ಸೆಮಿಫೈನಲ್ ಈಗ ಸಮೀಪಿಸಿದೆ. ಹಾಗೇ ಮತ್ತೊಂದ್ಕಡೆ ಭಾರತ ತಂಡ ಈ ಬಾರಿ ಐಸಿಸಿ ವಿಶ್ವಕಪ್ ಟೋರ್ನಿಗೆ ಮುತ್ತಿಡುವುದು ಪಕ್ಕಾ ಆಗಿದೆ. ಹೀಗಿದ್ದಾಗಲೆ ಇಲ್ಲೊಂದು ಅಚ್ಚರಿಯ ಬೆಳವಣಿಗೆ ನಡೆದು, ಆಸ್ಟ್ರೇಲಿಯಾದ ಬೌಲರ್ ಒಬ್ಬ ಒಂದೇ ಓವರ್‌ನ 6 ಬಾಲ್‌ಗೆ 6 ವಿಕೆಟ್ ಉರುಳಿಸಿದ್ದಾನೆ.

ಹೌದು, ಕ್ರಿಕೆಟ್ ಅಂದ್ರೆ ಅಚ್ಚರಿಗಳ ಕ್ರೀಡೆ. ಇಲ್ಲಿ ಒಂದು ಕಾಲದಲ್ಲಿ ರಾಜನಾಗಿದ್ದ ವ್ಯಕ್ತಿಗೆ ವಿಲನ್ ಪಟ್ಟವೂ ಸಿಗುತ್ತೆ. ಹಾಗೇ ಒಂದು ಬಾರಿ ಕಳಪೆ ಆಟಗಾರ ಎಂಬ ಪಟ್ಟದಲ್ಲಿದ್ದವ, ಹೀರೋ ಆಗುವುದಕ್ಕೂ ಅವಕಾಶ ಸಿಗುತ್ತದೆ. ಇಂತಹ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ಈಗ ನಡೆದಿದೆ. 179 ರನ್‌ ಗುರಿ ಬೆನ್ನತ್ತಿದ ತಂಡವೊಂದು, 174 ರನ್‌ಗೆ ಕೇವಲ 4 ವಿಕೆಟ್ ಕಳೆದುಕೊಂಡಿತ್ತು. ಹೀಗೆ ತನ್ನ ಗುರಿ ಮುಟ್ಟಲು ಇನ್ನು 1 ಓವರ್ ಬಾಕಿ ಇದ್ದ ಸಮಯಕ್ಕೆ ಮಿಂಚಿನಂತೆ ಬಂದ ಬೌಲರ್ ಒಬ್ಬ ಒಂದೇ ಓವರ್‌ನ 6 ಬಾಲ್‌ಗೆ 6 ವಿಕೆಟ್ ಪಡೆದಿದ್ದಾನೆ. ಈ ಮೂಲಕ ಎದುರಾಳಿ ತಂಡವನ್ನು ಉಡೀಸ್ ಮಾಡಿದ್ದಾನೆ. ಹಾಗಾದರೆ ಈ ಐತಿಹಾಸಿಕ ಘಟನೆ ನಡೆದಿದ್ದು ಎಲ್ಲಿ?

6-wickets-in-single-over-of-the-cricket-match

ತಂಡದ ನಾಯಕನೇ ಇಲ್ಲಿ ಹೀರೋ!

ಅಂದಹಾಗೆ ಇಂತಹದ್ದೊಂದು ಘಟನೆ ನಡೆದಿದ್ದು, ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿನ ಕ್ರಿಕೆಟ್ ಪಂದ್ಯದಲ್ಲಿ. ಮೂರನೇ ಡಿವಿಷನ್‌ ಕ್ರಿಕೆಟ್‌ ಕ್ಲಬ್‌ ಒಂದರ ಬೌಲರ್‌, ಒಂದು ಓವರ್‌ನ 6 ಎಸೆತಗಳಲ್ಲಿ 6 ವಿಕೆಟ್‌ ಪಡೆದು ಚರಿತ್ರೆ ಬರೆದಿದ್ದಾರೆ. ಮಡ್‌ಗೀರಬ ತಂಡದ ನಾಯಕನಾದ ಗ್ಯಾರೆತ್‌ ಮಾರ್ಗನ್‌ ಇಂತಹ ಸಾಧನೆ ಮಾಡಿದ್ದಾರೆ. ಗೋಲ್ಡ್‌ ಕೋಸ್ಟ್‌ ಪ್ರಿಮಿಯರ್‌ ಲೀಗ್‌ನ‌ಲ್ಲಿ 3ನೇ ಡಿವಿಷನ್ ಟೂರ್ನಿಯಲ್ಲಿ, ಸರ್ಫರ್ಸ್‌ ಪ್ಯಾರಡೈಸ್ ಕ್ರಿಕೆಟ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಈ ಪಂದ್ಯದಲ್ಲಿ ಎಲ್ಲವೂ ದಾಖಲೆ!

179 ರನ್‌ ಗುರಿ ಬೆನ್ನತ್ತಿದ್ದ ಸರ್ಫರ್ಸ್‌ ಪ್ಯಾರಡೈಸ್ ತಂಡವು 39 ಓವರ್‌ನಲ್ಲಿ 4 ವಿಕೆಟ್‌ಗಳಿಗೆ 174 ರನ್‌ ಗಳಿಸಿತ್ತು. ಈ ಪಂದ್ಯವನ್ನು 40 ಓವರ್‌ಗೆ ಫಿಕ್ಸ್ ಮಾಡಲಾಗಿತ್ತು. ಹೀಗಿದ್ದಾಗಲೇ ಇನ್ನೇನು ಮ್ಯಾಚ್ ಸೋತು ಹೋದ್ವಿ ಅಂತಾ ಗ್ಯಾರೆತ್‌ ಮಾರ್ಗನ್‌ ತಂಡ ಡಿಸೈಡ್ ಆಗಿತ್ತು. ಆದರೆ ಆಗಲೇ ನೋಡಿ ಕಮಾಲ್ ನಡೆದಿದ್ದು. ಕೊನೆ ಓವರ್ ಮಾಡಿದ ಗ್ಯಾರೆತ್‌ ಮಾರ್ಗನ್‌ ಅವರು, 40ನೇ ಓವರ್‌ನ ಅಷ್ಟೂ ಬೌಲ್‌ಗಳಲ್ಲಿ ವಿಕೆಟ್ ಉರುಳಿಸಿಬಿಟ್ಟರು. 6 ಎಸೆತಗಳಲ್ಲಿ 6 ವಿಕೆಟ್‌ ಬೀಳಿಸಿ ಚರಿತ್ರೆ ಸೃಷ್ಟಿ ಮಾಡಿಬಿಟ್ಟರು. ಈ ಮೂಲಕ ಮಡ್‌ಗೀರಬ ಟೀಂ ಭರ್ಜರಿ ಗೆಲುವು ಸಾಧಿಸಿ ಬೀಗಿತು. ಸರ್ಫರ್ಸ್‌ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಡಕ್ ಔಟ್ ಆಗಿ, ಮತ್ತೊಂದು ಇತಿಹಾಸ ನಿರ್ಮಿಸಿದರು.

ಒಟ್ನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಗ್ಯಾರೆತ್‌ ಮಾರ್ಗನ್‌ ಈ ಮೂಲಕ ಇತಿಹಾಸ ನಿರ್ಮಿಸಿ ಮಿಂಚಿ ಜಗತ್ತಿನ ಗಮನ ಸೆಳೆದಿದ್ದಾರೆ. ಅದರಲ್ಲೂ ಕೊನೆಯ ಓವರ್‌ನಲ್ಲಿ ಇಂತಹ ಸಾಧನೆಯನ್ನು ಮಾಡಿರುವುದು ಕ್ರಿಕೆಟ್ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ. ಈ ನಡುವೆ ಐಸಿಸಿ ವಿಶ್ವಕಪ್‌ನ ಸಮಯದಲ್ಲೇ ಇಂತಹ ಚರಿತ್ರೆ ನಿರ್ಮಾಣವಾಗಿರುವುದು ವಿಶೇಷ. ಇನ್ನೇನು ಈ ಪಂದ್ಯದ ಫಲಿತಾಂಶದಲ್ಲಿ ನಮಗೆ ಸೋಲು ಗ್ಯಾರಂಟಿ ಅಂತಾ ಡಿಸೈಡ್ ಆಗಿದ್ದ ಮಡ್‌ಗೀರಬ ತಂಡ, ಕೊನೇ ಓವರ್‌ನಲ್ಲಿ ಗೆಲುವು ಸಾಧಿಸಿ ಕುಣಿದು ಕುಪ್ಪಳಿಸಿದೆ. ಹಾಗೇ ತಂಡದ ಆಟಗಾರರು ಕೂಡ, ಎದುರಾಳಿ ತಂಡದ ಐದು ವಿಕೆಟ್ ಕಿತ್ತ ನಾಯಕ ಗ್ಯಾರೆತ್‌ ಮಾರ್ಗನ್‌ ಅವರನ್ನು ಎತ್ತಿ ಕುಣಿದಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+