ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಾಖಲೆ ಮುರಿದ ಗ್ಲೆನ್ ಮ್ಯಾಕ್ಸ್‌ವೆಲ್!

ಐಸಿಸಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇಂದು ಆಸ್ಟ್ರೇಲಿಯಾ ಟೀಂಗೆ ಸರ್ಪ್ರೈಸ್ ಸಿಕ್ಕಿದೆ. ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಹತ್ತಾರು ರೋಚಕ ತಿರುವು ಪಡೆಯುತ್ತಿದೆ. ಅದರಲ್ಲೂ ಇಂದು ನಡೆದ ಅಫ್ಘಾನಿಸ್ತಾನ VS ಆಸ್ಟ್ರೇಲಿಯಾ ಪಂದ್ಯದಲ್ಲಿ, ಕ್ರಿಕೆಟ್ ದೇವರು ಭಾರತದ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ, ಆಸ್ಟ್ರೇಲಿಯಾದ ಈ ಆಟಗಾರ.

ಹೌದು, ಇಂದು ವಾಣಿಜ್ಯ ನಗರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ & ಆಸ್ಟ್ರೇಲಿಯಾ ಮಧ್ಯೆ ನಡೆದ ಪಂದ್ಯದಲ್ಲಿ ಭಾರಿ ತಿರುವು ಎದುರಾದವು. ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು 291 ರನ್ ಗಳಿಸಿತ್ತು. ಆದರೆ ಈ ಗುರಿ ಬೆನ್ನುಹತ್ತಿದ್ದ ಆಸ್ಟ್ರೇಲಿಯಾ ತಂಡ, ಸೋತು ಸುಣ್ಣವಾಗಿ ಹೋಗುವ ಮುನ್ಸೂಚನೆ ಸಿಕ್ಕಿತ್ತು. ಒಂದು ಹಂತದಲ್ಲಿ ಕೇವಲ 91 ರನ್‌ಗೆ 7 ವಿಕೆಟ್‌ಗಳನ್ನ ಕಳೆದುಕೊಂಡಿದ್ದ ಆಸಿಸ್ ಪಡೆ, ನೋಡ ನೋಡುತ್ತಲೇ ಪಂದ್ಯವನ್ನೇ ಗೆದ್ದುಬಿಟ್ಟಿದೆ. ಇದು ಮಾತ್ರವಲ್ಲದೆ ಆಸ್ಟ್ರೇಲಿಯಾದ ಆಟಗಾರ ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಿ, ಹೊಸ ಇತಿಹಾಸ ಬರೆದಿದ್ದಾನೆ.

glenn-maxwell-got-first-double-ton-in-odi

ಗ್ಲೆನ್ ಮ್ಯಾಕ್ಸ್‌ವೆಲ್ ಡಬಲ್ ಸೆಂಚ್ಯುರಿ!

ನೋಡ ನೋಡಲುತ್ತಲೆ ಆಸ್ಟ್ರೇಲಿಯಾ ತಂಡ ಕುಸಿದು ಇನ್ನೇನು 100 ರನ್ ಒಳಗೆ ಆಲೌಟ್ ಆಗುತ್ತೆ ಅನ್ನೋ ಮುನ್ಸೂಚನೆ ಇಂದು ಸಂಜೆ ಸಿಕ್ಕಿತ್ತು. ಆದ್ರೆ 6ನೇ ಕ್ರಮಾಂಕದಲ್ಲಿ ಎಂಟ್ರಿ ಕೊಟ್ಟಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮದೇ ತಂಡದ 9ನೇ ಕ್ರಮಾಂಕದ ಆಟಗಾರನಾದ ಪ್ಯಾಟ್ ಕಮ್ಮಿನ್ಸ್ ಜೊತೆ ಕೈಜೊಡಿಸಿದರು. ಅಲ್ಲಿಯ ತನಕ ಒಂದೊಂದು ರನ್ ಗಳಿಸುವುದಕ್ಕೂ ಈ ಆಸ್ಟ್ರೇಲಿಯಾ ತಂಡದ ಆಟಗಾರರು ನರಳಾಡುತ್ತಿದ್ರು. ಆದ್ರೆ ನೋಡ ನೋಡುತ್ತಿದ್ದಂತೆಯೇ ಗ್ಲೆನ್ ಮ್ಯಾಕ್ಸ್‌ವೆಲ್ ಬೌಂಡರಿ, ಸಿಕ್ಸರ್ ಮಳೆ ಸುರಿಸಿದರು.

ಗಾಯದ ಸಮಸ್ಯೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್

ಅಫ್ಘಾನಿಸ್ತಾನ ತಂಡದ ಬೌಲಿಂಗ್ ಪಡೆಯನ್ನು ಪ್ಲ್ಯಾನ್ ಮಾಡಿ ಖೆಡ್ಡಾಗೆ ಕೆಡವಿದ ಆಸಿಸ್ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಚೆಂಡು ಅಫ್ಘಾನಿಸ್ತಾನದ ಆಟಗಾರರಿಗೆ ಸಿಗದ ರೀತಿ ಬೌಂಡರಿ ಲೈನ್‌ಗೆ ತಳ್ಳಿದರು. ಹೀಗೆ ಮಾಡಿ, ಮಾಡಿ ನೋಡ ನೋಡುತ್ತಲೇ ಅದ್ಭುತವಾದ ಶತಕ ಗಳಿಸಿದರು ಗ್ಲೆನ್ ಮ್ಯಾಕ್ಸ್‌ವೆಲ್. ಅಷ್ಟೊತ್ತಿಗೆ ಆಸಿಸ್ ಸೋಲಿನ ದವಡೆಯಿಂದ ಗ್ರೇಟ್ ಎಸ್ಕೇಪ್ ಎನ್ನುವಷ್ಟರಲ್ಲಿ, ಗಾಯದ ಸಮಸ್ಯೆಯಿಂದ ಮ್ಯಾಕ್ಸ್‌ವೆಲ್ ಒದ್ದಾಡಿಬಿಟ್ಟರು. ಈ ಸಮಯದಲ್ಲಿ ಮತ್ತೆ ಭಯ ಶುರುವಾಗಿತ್ತು.

glenn-maxwell-got-first-double-ton-in-odi

ಹೇಗಿತ್ತು ಮ್ಯಾಕ್ಸ್‌ವೆಲ್ ಡಬಲ್ ಸೆಂಚ್ಯುರಿ?

ಎಷ್ಟೇ ಕಷ್ಟವಾದರೂ ಫೀಲ್ಡ್ ಬಿಟ್ಟು ಹೋಗದ ಗ್ಲೆನ್ ಮ್ಯಾಕ್ಸ್‌ವೆಲ್ ಗಟ್ಟಿಯಾಗಿ ನಿಂತರು. ಅಲ್ಲದೆ ಅಫ್ಘಾನಿಸ್ತಾನ ತಂಡದ ಬೌಲಿಂಗ್ ಪಡೆಗೆ ಬುದ್ಧಿ ಕಲಿಸಿ, ಆಸ್ಟ್ರೇಲಿಯಾದ ಭರ್ಜರಿ ಗೆಲುವಿಗೆ ಕಾರಣರಾದರು. ಹೀಗೆ ಅಫ್ಘಾನಿಸ್ತಾನ ನೀಡಿದ್ದ 292 ರನ್ ಗುರಿ ಬೆನ್ನುಹತ್ತಿದ್ದ ಆಸಿಸ್ ಪಡೆ, ಗ್ಲೆನ್ ಮ್ಯಾಕ್ಸ್‌ವೆಲ್ ಅವರ 201 ರನ್‌ಗಳ ಕೊಡುಗೆಯಿಂದ 293 ರನ್‌ಗಳನ್ನ ಗಳಿಸಿತು. ಕೇವಲ 46.5 ಓವರ್‌ಗೆ ಮ್ಯಾಚ್ ಮಗಿಸಿತು. ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 128 ಬೌಲ್‌ನಲ್ಲಿ 21 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸಿದರು. 181 ನಿಮಿಷಗಳ ಕಾಲ ಸ್ಕ್ರೀಸ್ ಒಳಗೆ ನಿಂತು ಆಸ್ಟ್ರೇಲಿಯಾ ತಂಡವನ್ನು ಕಾಪಾಡಿ ಬಿಟ್ಟರು. ಹಾಗೆಯೇ ಸಚಿನ್ ಅವರು ನಿರ್ಮಿಸಿದ್ದ ದಾಖಲೆ ಕೂಡ ಮುರಿದರು ಗ್ಲೆನ್ ಮ್ಯಾಕ್ಸ್‌ವೆಲ್.

ಮೊದಲ ಬಾರಿಗೆ ಸಚಿನ್ ದ್ವಿಶತಕ

ಸಚಿನ್ ತೆಂಡೂಲ್ಕರ್ ಇಡೀ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ದ್ವಿಶತಕದ ಸಾಧನೆ ಮಾಡಿದ್ದರು. ಹೀಗೆ ಡಬಲ್ ಸೆಂಚ್ಯುರಿ ಬಾರಿಸಿದ್ದ ಸಚಿನ್, ಸರಿಯಾಗಿ 200 ರನ್ ಗಳಿಸಿ ಔಟಾಗದೆ ಉಳಿದಿದ್ದರು. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಈ ಸಾಧನೆ ಮಾಡಿದ್ದರು. ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಸಚಿನ್ ದಾಖಲೆ ಸರಿಗಟ್ಟಿ, 201 ರನ್ ಗಳಿಸಿದ್ದು ಔಟಾಗದೆ ಉಳಿದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಡಬಲ್ ಸೆಂಚ್ಯುರಿ ಮಾಡಿರುವ 11ನೇ ಆಟಗಾರನಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಹೊಮ್ಮಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 264 ರನ್ ಗಳಿಸಿದ್ದ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿ ಇದ್ದಾರೆ.

ಒಟ್ನಲ್ಲಿ ಭಾರತದ ಆಟಗಾರರು ಜಗತ್ತಿನ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಅದರಲ್ಲೂ ಹೊಸ ತಲೆಮಾರಿನ ಆಟಗಾರರು ಈ ಹಿಂದೆ ನಿರ್ಮಾಣವಾಗಿದ್ದ ದಾಖಲೆಗಳನ್ನು ಸರಿಗಟ್ಟಿ, ಮುನ್ನುಗ್ಗುತ್ತಿದ್ದಾರೆ. ವಿರಾಟ್ ಕೊಹ್ಲಿ, ರೊಹಿತ್ ಶರ್ಮಾ, ಕೆ.ಎಲ್.ರಾಹುಲ್ ಸೇರಿದಂತೆ ಹಲವು ಆಟಗಾರರು ಜಾಗತಿಕ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಇದೀಗ ದ್ವಿಶತಕವನ್ನು ಬಾರಿಸಿರುವ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಶುಭ ಕೋರುತ್ತಾ, ಭಾರತದ ಆಟಗಾರರು ಕೂಡ ಮತ್ತಷ್ಟು ದ್ವಿಶತಕ ಬಾರಿಸಲಿ ಎಂದು ಆಶಿಸೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+