Kohli & Naveen Ul Haq: ಕನ್ನಡಿಗರ ಗುಣ ವಿರಾಟ್ ಕೊಹ್ಲಿಗೂ ಬಂತಾ?
ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್, ಕ್ರಿಕೆಟ್ ಮ್ಯಾಚ್ ಅಂದ್ರೆ ಕೊಹ್ಲಿ ಇರಲೇಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಚಿನ್ ತೆಂಡೂಲ್ಕರ್ ನಂತರ ಭಾರತೀಯರು ಕೊಹ್ಲಿಗೆ ದೊಡ್ಡ ಸ್ಥಾನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಏನೇ ಮಾಡಿದರೂ ದಾಖಲೆಗಳು ಕ್ರಿಯೇಟ್ ಆಗ್ತಿದೆ. ಅಲ್ಲದೆ ಸಚಿನ್ ಅವರ ದಾಖಲೆ ಸರಿಗಟ್ಟಲು ಇರುವ ಏಕೈಕ ಆಟಗಾರ ಕೊಹ್ಲಿ ಎಂಬ ಮಾತು ಓಡಾಡುತ್ತಿವೆ. ಈ ನಡುವೆ ಇಡೀ ಜಗತ್ತು ಹೆಮ್ಮೆಪಡುವ ಕೆಲಸ ಮಾಡಿದ್ದಾರೆ ಕೊಹ್ಲಿ.
ಹೌದು ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ ಟೂರ್ನಿಯಲ್ಲಿ ಭಾರಿ ದೊಡ್ಡ ಕಿರಿಕ್ ನಡೆದು ಹೋಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಲಖನೌ ಸೂಪರ್ ಗೈಂಟ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ & ಅಫ್ಘಾನಿಸ್ತಾನದ ಆಟಗಾರ ನವೀನ್ ಉಲ್ ಹಕ್ ನಡುವೆ ಫುಲ್ ಕಿರಿಕ್ ಆಗಿತ್ತು. ಪಂದ್ಯ ಮುಗಿದ ನಂತರ, ಆಟಗಾರರು ಶೇಕ್ ಹ್ಯಾಂಡ್ಸ್ ನೀಡುವ ವೇಳೆ ಕೊಹ್ಲಿ-ನವೀನ್ ನಡುವೆ ಜಗಳ ನಡೆದಿತ್ತು. ಆಗ ಮೈದಾನಕ್ಕೆ ಆಗಮಿಸಿದ್ದ ಲಖನೌ ಮೆಂಟರ್ ಗೌತಮ್ ಗಂಭೀರ್, ಕೊಹ್ಲಿ ವಿರುದ್ಧ ಜಗಳಕ್ಕೆ ನಿಂತರು. ಈ ವೇಳೆ ಒಬ್ಬರಿಗೊಬ್ಬರು ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿಬಿಟ್ಟರು. ಅಮಿತ್ ಮಿಶ್ರಾ & ಕೆ.ಎಲ್. ರಾಹುಲ್ ಪರಿಸ್ಥಿತಿ ನಿಯಂತ್ರಿಸಿ ಇಬ್ಬರನ್ನೂ ಸಮಾಧಾನ ಮಾಡಿದ್ದರು.

ಇವತ್ತು ಏನಾಯ್ತು ಗೊತ್ತಾ?
ಅಂದಹಾಗೆ ಆವತ್ತು ಕಿರಿಕ್ ಮಾಡಿದ್ದ ನವೀನ್ ಉಲ್ ಹಕ್ ಇದೀಗ ಭಾರತಕ್ಕೆ ಬಂದಿದ್ದಾರೆ. ಈ ಮಧ್ಯೆ ಭಾರತದ ವಿರುದ್ಧ ಅಫ್ಘಾನಿಸ್ತಾನ ತಂಡ ವಿಶ್ವಕಪ್ ಪಂದ್ಯ ಆಡುತ್ತಿತ್ತು. ಹೀಗಾಗಿ ನಮ್ಮ ಕೊಹ್ಲಿ ಫ್ಯಾನ್ಸ್ ಕೂಡ ನವೀನ್ ಉಲ್ ಹಕ್ ಅವರಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟರು. ಇಷ್ಟೆಲ್ಲದರ ನಡುವೆ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಮತ್ತೆ ಗಲಾಟೆ ಆಗುತ್ತೆ. ಇವತ್ತು ಎರಡರಲ್ಲಿ ಒಂದು ಆಗೋದು ಪಕ್ಕಾ, ಅಂತೆಲ್ಲಾ ಫ್ಯಾನ್ಸ್ ಡಿಸೈಡ್ ಆಗಿಯೇ ಬಂದಿದ್ರು. ಆದ್ರೆ ಕ್ರಿಕೆಟ್ ಮೈದಾನದಲ್ಲಿ ಆಗಿದ್ದೇ ಬೇರೆ. ಜಗಳ ಆಗುತ್ತೆ ಅಂದುಕೊಂಡಿದ್ದವರ ಕಣ್ಣ ಎದುರಲ್ಲಿ ನಡೆದಿದ್ದೇನು ಗೊತ್ತಾ?
ಕುಚ್ಚಿಕು.. ಕುಚ್ಚಿಕು.. ಕುಚ್ಚಿಕು..!
ಹೀಗೆ ಇವತ್ತು ಅಫ್ಘಾನ್ ಮತ್ತು ಭಾರತದ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಜಗಳ ನಡೆಯುತ್ತೆ ಅಂತಾ ಊಹೆ ಮಾಡಿದ್ದ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿತ್ತು. ವಿರಾಟ್ ಕೊಹ್ಲಿ ಮೈದಾನಕ್ಕೆ ಬ್ಯಾಟಿಂಗ್ ಮಾಡಲು ಬಂದ ನಂತರ, ಇಬ್ಬರೂ ಖುಷಿ ಖುಷಿಯಾಗಿ ಮಾತನಾಡಿದರು. ಅಲ್ಲದೆ ಕೈ ಕೈ ಹಿಡಿದು ನಗೆ ಬೀರಿದರು. ಇದನ್ನು ನೋಡುತ್ತಿದ್ದ ಫ್ಯಾನ್ಸ್ ಕೂಡ ಒಂದು ಕ್ಷಣ ಶಾಕ್‌ಗೆ ಒಳಗಾದರು. ಅರೆರೆ ಇಲ್ಲಿ ಏನು ನಡೆಯುತ್ತಿದೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಆದರೆ ಇದೇ ವಾಸ್ತವ ಎಂಬುದು ಅವರಿಗೆ ನಂತರ ಅರಿವಿಗೆ ಬಂತು. ಇದೀಗ ವಿರಾಟ್ ಕೊಹ್ಲಿ & ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ನಗು ನಗುತ್ತಾ ಮಾತನಾಡಿದ ಫೋಟೋಗಳು ವೈರಲ್ ಆಗಿವೆ.
ಗೆದ್ದು ಬೀಗಿದ ಭಾರತ ತಂಡ
ಅಫ್ಘಾನಿಸ್ತಾನ ವಿರುದ್ಧದ ವರ್ಲ್ಡ್ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಮೂಲಕ ದೊಡ್ಡ ಅಂತರದ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಅಫ್ಘಾನ್ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಿದರೂ, ದೆಹಲಿ ಅರುಣ್ ಜೆಟ್ಲಿ ಮೈದಾನದ ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗಿತ್ತು. ಹೀಗಾಗಿ 273 ರನ್ ಗುರಿ ನೀಡಿದ್ರೂ ಭಾರತ ಗೆದ್ದು ಬೀಗಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ರೋಹಿತ್ ಶರ್ಮಾ ಇಂದು ಅಫ್ಘಾನ್ ವಿರುದ್ಧ ಶತಕ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದರು. 84 ಬಾಲ್‌ಗಳಲ್ಲಿ 131 ರನ್ ಚಚ್ಚಿದ ರೋಹಿತ್ ಶರ್ಮಾ, 16 ಬೌಂಡರಿ ಸೇರಿದಂತೆ 5 ಸಿಕ್ಸಸ್ ಬಾರಿಸಿದರು. ಈ ಮೂಲಕ ಟೀಂ ಇಂಡಿಯಾದ ಭರ್ಜರಿ ಗೆಲುವಿಗೆ ಕಾರಣರಾದರು.

ಸಚಿನ್ ದಾಖಲೆ ಮುರಿದ ರೋಹಿತ್
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಇಂದು ಕೂಡ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ಭಾರತದ ಗೆಲುವಿಗೆ ಸಾಥ್ ನೀಡಿದರು. ಆಸ್ಟ್ರೇಲಿಯಾ ವಿರುದ್ಧ ಮೊದಲನೆ ಪಂದ್ಯದಲ್ಲಿ ಕೊಹ್ಲಿ ಆಟ ಭಾರತ ತಂಡವನ್ನ ಕಾಪಾಡಿತ್ತು. ಇಂದು ಕೊಹ್ಲಿ 56 ಬಾಲ್‌ಗಳಲ್ಲಿ 55 ರನ್ ಗಳಿಸಿದರು. ಈ ಅರ್ಧ ಶತಕದಲ್ಲಿ 6 ಬೌಂಡರಿ ಸೇರಿದ್ದವು. ಹಾಗೇ ರೋಹಿತ್ ಶರ್ಮಾ ಇಂದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ವಿಶ್ವಕಪ್‌ನಲ್ಲಿ ಸಚಿನ್ ಅವರ ದಾಖಲೆ ಹಿಂದಿಕ್ಕಿದ ರೋಹಿತ್ ಶರ್ಮಾ, 7ನೇ ಶತಕ ದಾಖಲಿಸಿದ್ದಾರೆ. ಸಚಿನ್ 5 ವಿಶ್ವಕಪ್ ಟೂರ್ನಿಗಳಲ್ಲಿ 6 ಶತಕ ಸಿಡಿಸಿದ್ದರು. ಆದ್ರೆ ರೋಹಿತ್ 3 ವಿಶ್ವಕಪ್ ಟೂರ್ನಿಗಳಲ್ಲೇ ಈ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.












Click it and Unblock the Notifications