ಕೈಕೊಟ್ಟ ಹೆಂಡತಿ, ಬೆನ್ನಿಗೆ ಚೂರಿ ಹಾಕಿದ್ದ ಸ್ನೇಹಿತ: ದಿನೇಶ್ ಕಾರ್ತಿಕ್ ನೋವುಗಳನ್ನ ಗೆದ್ದು ನಿಂತಿದ್ದು ಹೇಗೆ?
ದಿನೇಶ್ ಕಾರ್ತಿಕ್ ಐಪಿಎಲ್ ಕ್ರಿಕೆಟ್ ಜೀವನಕ್ಕೆ ಗುಡ್‌ಬೈ ಹೇಳಿದ್ದಾರೆ. ಆರ್‌ಸಿಬಿ ಬೆಂಗಳೂರು ತಂಡಕ್ಕೆ ಅದೆಷ್ಟೋ ಬಾರಿ ನೆರವಿಗೆ ಬಂದಿದ್ದ ಡಿಕೆ ಇನ್ಮುಂದೆ ಐಪಿಎಲ್ ಟೂರ್ನಿ ಬಂದಾಗ ಬ್ಯಾಟ್ ಹಿಡಿದು ಫೀಲ್ಡ್‌ಗೆ ಬರಲ್ಲ. ಇದೇ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರ ವೈಯಕ್ತಿಕ ಜೀವನ & ಅವರ ಹೆಂಡತಿ ಮಾಡಿದ ಮೋಸದ ಬಗ್ಗೆ ಚರ್ಚೆ ಶುರುವಾಗಿದೆ.
ದಿನೇಶ್ ಕಾರ್ತಿಕ್ ಅವರು ಈಗ ದೀಪಿಕಾ ಪಳ್ಳಿಕಲ್ ಅವರನ್ನ ಮದುವೆಯಾಗಿ, ಭರ್ಜರಿ ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ. ಆದರೆ ದೀಪಿಕಾ ಪಳ್ಳಿಕಲ್ ಅವರು ದಿನೇಶ್ ಕಾರ್ತಿಕ್ ಜೀವನಕ್ಕೆ ಎಂಟ್ರಿ ಆಗುವ ಮೊದಲು ದಿನೇಶ್ ಕಾರ್ತಿಕ್ ಸೂಸೈಡ್ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳೋಕೆ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಯಾಕಂದ್ರೆ ದಿನೇಶ್ ಕಾರ್ತಿಕ್ ಅವರ ಮೊದಲ ಹೆಂಡತಿ ಅವರಿಗೆ ಮೋಸ ಮಾಡಿದ್ದರಂತೆ, ಅದರಲ್ಲೂ ಭಾರತ ಕ್ರಿಕೆಟ್ ಟೀಂ ಸ್ಟಾರ್ ಪ್ಲೇಯರ್ ಹಾಗೂ ದಿನೇಶ್ ಕಾರ್ತಿಕ್ ಗೆಳೆಯನೇ ಹೀಗೆ ಮಹಾಮೋಸ ಮಾಡಿದ್ದರಂತೆ.

2007ರಲ್ಲಿ ಮೊದಲ ಮದುವೆ
ಅಂದಹಾಗೆ 2007 ರಲ್ಲಿ ದಿನೇಶ್ ಕಾರ್ತಿಕ್ ಅವರು ತಮ್ಮ ಬಾಲ್ಯದ ಗೆಳತಿಯ ಜೊತೆಯಲ್ಲಿ ಮದುವೆ ಆಗಿದ್ದರು. ಆಗ ತಾನೆ ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು ಈ ದಿನೇಶ್ ಕಾರ್ತಿಕ್ ಅವರು. ಹೀಗೆ ಡಿಕೆ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟ ನಂತರ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು. ಹೀಗಿದ್ದಾಗಲೇ ದಿನೇಶ್ ಕಾರ್ತಿಕ್ ಅವರ ಹೆಂಡತಿ ಜೊತೆಗೆ ಸಲುಗೆಯನ್ನು ಬೆಳೆಸಿಕೊಂಡಿದ್ದ ಮುರಳಿ ವಿಜಯ್, ಆಕೆ ಜೊತೆಗೆ ಹೋದರು ಎಂಬ ಆರೋಪ ಕೇಳಿಬಂತು. ಆ ನಂತರ ದಿನೇಶ್ ಕಾರ್ತಿಕ್ ಕ್ರಿಕೆಟ್ ಜೀವನ ಕೂಡ ಕುಗ್ಗಿ ಹೋಗಿತ್ತು.
ದೀಪಿಕಾ ಪಳ್ಳಿಕಲ್ ಎಂಟ್ರಿ ಹೇಗೆ?
ಮೊದಲ ಹೆಂಡತಿ ಮಾಡಿದ ಮಹಾಮೋಸ & ದಿನೇಶ್ ಕಾರ್ತಿಕ್ ಇದರಿಂದಾಗಿ ಕುಗ್ಗಿಹೋದ ಸಮಯದಲ್ಲೇ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರ ಎಂಟ್ರಿ ಆಗಿತ್ತು. ಈ ಮೂಲಕ ದಿನೇಶ್ ಕಾರ್ತಿಕ್ ಅವರು ತಮ್ಮ ಬದುಕಿನಲ್ಲಿ 2ನೇ ಇನ್ನಿಂಗ್ಸ್ ಆರಂಭ ಮಾಡಿದ್ದರು. ಇದು ದಿನೇಶ್ ಕಾರ್ತಿಕ್ ಅವರಿಗೆ ಆತ್ಮಸ್ಥೈರ್ಯ ತುಂಬಿತ್ತು. ದಿನೇಶ್ ಮತ್ತೊಮ್ಮೆ ತಮ್ಮ ಜೀವನ ಆರಂಭಿಸುವ ಮನಸ್ಸು ಮಾಡಿದರು.
ಹೀಗೆ ನೋಡ ನೋಡುತ್ತಲೇ ಇಬ್ಬರ ಬಾಂಧವ್ಯ ಗಟ್ಟಿಯಾಗಿ, ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರೀ ಎಂಟ್ರಿ ಕೊಟ್ಟಿದ್ದರು ದಿನೇಶ್ ಕಾರ್ತಿಕ್. ಡಿಕೆ ಕೊನೆಗೆ ಆರ್‌ಸಿಬಿ ತಂಡಕ್ಕೂ ಬಂದು ಮಿಂಚಿದ್ದರು. ಆದರೆ ಇದೀಗ ಐಪಿಎಲ್ ಟೂರ್ನಿಗಳಿಗೆ ವಿದಾಯ ಹೇಳಿದ್ದಾರೆ. ಇದು ಆರ್‌ಸಿಬಿ ಬೆಂಗಳೂರು ಅಭಿಮಾನಿಗಳ ಎದೆಯಲ್ಲಿ ಬೇಸರದ ಬಿರುಗಾಳಿ ಎಬ್ಬಿಸಿದೆ. ಈ ನಡುವೆ 'ಯಾರ್ ನಮ್ ಬಾಸು' ಅಂತಾ ಆರ್‌ಸಿಬಿ ಅಭಿಮಾನಿಗಳು ಇನ್ನುಮುಂದೆ ಹೇಳಲು ಆಗಲ್ಲ ಎನ್ನುವ ಬೇಸರ ಕೂಡ ಅಭಿಮಾನಿಗಳಿಗೆ ಕಾಡುತ್ತಿದೆ.












Click it and Unblock the Notifications