
ದೇವಸೂಗೂರು: ಕರಾಟೆಯಲ್ಲಿ ಅಣ್ಣ-ತಂಗಿಯ ಅದ್ಭುತ ಸಾಧನೆ, ಹಳ್ಳಿಯಿಂದ ದಿಲ್ಲಿವರೆಗೂ ಕ್ರೀಡಾ ಪಯಣ
ರಾಯಚೂರು, ಡಿಸೆಂಬರ್, 4: ತಾಲೂಕಿನ ದೇವಸೂಗೂರು ಗ್ರಾಮದ ಬ್ಲೆಸ್ಡ ಆಲ್ಪೋನ್ಸ್ ಶಾಲೆಯ ವಿದ್ಯಾರ್ಥಿಗಳಿಬ್ಬರು ಕರಾಟೆ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾ ರಾಷ್ಟ್ರ ಮಟ್ಟಕ್ಕೆ ತಲುಪಿ ಗಮನ ಸೆಳೆದಿದ್ದಾರೆ. ಯುಕ್ತ ಪ್ರಸಾದ್ ಮತ್ತು ನಿಖಿಲ್ ಪ್ರಸಾದ್ ಎನ್ನುವ ಇಬ್ಬರು ಅಣ್ಣತಂಗಿಯರು ಕರಾಟೆ ಕ್ರೀಡೆಯಲ್ಲಿ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ತಲುಪಿದ ಪ್ರತಿಭಾನ್ವಿತರಾಗಿದ್ದಾರೆ.
4ನೇ ತರಗತಿಯಲ್ಲಿ ಓದುತ್ತಿರುವ ಗ್ರಾಮೀಣ ಕ್ರೀಡಾಪಟು ಯುಕ್ತ ಪ್ರಸಾದ್ 12ನೇ ವಯಸ್ಸಿನಲ್ಲಿಯೇ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾಳೆ. ಈ ಮೂಲಕ ಚಾಂಪಿಯನ್ ಟ್ರೋಪಿ, ಚಿನ್ನ ಸೇರಿದಂತೆ ಹಲವು ಪದಕಗಳನ್ನು ತನ್ನದಾಗಿಸಿಕೊಂಡು ದೇವಸೂಗೂರು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ಕಟಾ ವಿಭಾಗದಲ್ಲಿ ಏಳು ಚಿನ್ನದ ಪದಕ ಹಾಗೂ ಕುಮಟೆ ವಿಭಾಗದಲ್ಲಿ 6 ಚಿನ್ನದ ಪದಕ, ಒಂದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ. ಬಾಲಕಿಯರ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚಾಂಪಿಯನ್‌ಶಿಪ್ ರನ್ನರ್ ಆಫ್ ಪ್ರಶಸ್ತಿ ಪಡೆದದು ಗಮನ ಸೆಳೆದಿದ್ದಾಳೆ.
ರಾಯಚೂರು ಎಪಿಎಂಸಿಯಲ್ಲಿ ಶೀಘ್ರವೇ ಆರಂಭವಾಗಲಿದೆ ಮೆಣಸಿನಕಾಯಿ ಹರಾಜು ಪ್ರಕ್ರಿಯೆ
ಗ್ರಾಮೀಣ ಪ್ರತಿಭೆಗಳ ದಿಲ್ಲಿವರೆಗಿನ ಸಾಧನೆ
ಎಲೆ ಮರೆಕಾಯಿಯಂತೆ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆಗೆ ತಾಲೂಕು ಮತ್ತು ಜಿಲ್ಲಾಡಳಿತ ಪ್ರೋತ್ಸಾಹಿಸಿದೆ. ಹೀಗೆ ಗ್ರಾಮೀಣ ಕ್ರೀಡಾಪಟುವಿಗೆ ತುಂಬಬೇಕು ಎಂಬುದು ಪ್ರತಿಯೊಬ್ಬರ ಅಶಯವಾಗಿದೆ. ಇನ್ನು ಅದೇ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ನಿಖಿಲ್ ಪ್ರಸಾಸ್ ಕೂಡ ಕರಾಟೆ ಸ್ಕೂಲ್‌ನಲ್ಲಿ ತರಬೇತಿ ಪಡೆದಿದ್ದಾನೆ. ತರಬೇತುದಾರ ಶಿವು ಅವರಿಂದ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಗ್ರಾಮದ ಯುವಕರಿಗೆ ಮಾದರಿಯಾಗಿದ್ದಾನೆ. ಕಟಾ ಹಾಗೂ ಕುಮಟೆ ವಿಭಾಗದಲ್ಲಿ 6 ಚಿನ್ನದ ಪದಕ, 6 ಬೆಳ್ಳಿಯ ಪದಕ ಮತ್ತು 2 ಕಂಚಿನ ಪದಕವನ್ನು ಪಡೆದಿದ್ದಾನೆ. ಅಲ್ಲದೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗ್ರ್ಯಾಂಡ್ ಚಾಂಪಿಯನ್ ಶಿಪ್ ರನ್ನರ್ ಆಫ್ ಪ್ರಶಸ್ತಿ ಪಡೆದಿದ್ದಾನೆ.
ಹಲವು ಜಿಲ್ಲೆಗಳಲ್ಲಿ ಪ್ರತಿಭೆ ಪ್ರದರ್ಶನ
ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಇಬ್ಬರು ಅಣ್ಣ ತಂಗಿಯರು ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇಬ್ಬರ ಮಕ್ಕಳ ತಾಯಿಯಾದ ಶಿಕ್ಷಕಿ ಶೀಲಾಭಟ್ ದೇವಸೂಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಲಕರೇ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದ್ದಾರೆ. ಇನ್ನು ಕರಾಟೆಯ ಶಿಕ್ಷಕರಾದ ಸೂಗಪ್ಪ ಮತ್ತು ಶಿವು ಅವರು ಯುಕ್ತ ಪ್ರಸಾದ್ ಮತ್ತು ನಿಖಿಲ್ ಪ್ರಸಾದ್ ಅವರಿಗೆ ತರಬೇತುದಾರರಾಗಿದ್ದಾರೆ.

ನಂತರ ಈ ಬಗ್ಗೆ ತರಬೇತುದಾರ ಶಿವು ಮಾತನಾಡಿ, "ಚಿಕ್ಕ ವಯಸ್ಸಿನಲ್ಲಿಯೇ ಇಬ್ಬರು ಹಲವು ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇನ್ನೂ ಹೆಚ್ಚಿನ ತರಬೇತಿ ನೀಡಿ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸುವಂತೆ ಮಾಡಲಾಗುವುದು," ಎಂದರು. ನಂತರ ತಾಯಿ ಶೀಲ್ ಭಟ್ ಮಾತನಾಡಿ, "ಎಷ್ಟೇ ಕಷ್ಟವಾದರೂ ಕೂಡ ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ತರಬೇತಿ ಕೊಡಿಸಲಾಗುವುದು. ಶಾಲೆಯ ಜೊತೆಗೆ ಸರ್ವಾಜನಿಕರು ಪ್ರೋತ್ಸಾಹಿಸಬೇಕು," ಎಂದು ಕೋರಿದರು.