MS Dhoni: ಎಂಎಸ್ ಧೋನಿ ನಿವೃತ್ತಿ ಬಗ್ಗೆ ಸಿಎಸ್‌ಕೆ ಕೋಚ್ ಸ್ಪಷ್ಟನೆ
ಐಪಿಎಲ್ 2025ರ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಸೋಲಿನ ಸರಣಿ ಮುಂದುವರೆದಿದೆ. ಮೊದಲ ಪಂದ್ಯದದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ್ದ ಸಿಎಸ್‌ಕೆ ಎರಡನೇ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಸೋಲು ಕಂಡಿತ್ತು. ಅದಾದ ಬಳಿಕ ಸತತ ಎರಡು ಪಂದ್ಯಗಳಲ್ಲೂ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಸತತವಾಗಿ ಮೂರು ಪಂದ್ಯಗಳನ್ನು ಸೋತಿದ್ದು ಅಭಿಮಾನಿಗಳು ಸಿಟ್ಟಾಗಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಿಎಸ್‌ಕೆ ವಿರುದ್ಧ 25 ರನ್‌ಗಳಿಂದ ಗೆಲುವು ಕಂಡಿದೆ. 15 ವರ್ಷಗಳ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಕಂಡಿದೆ.

ಎಂಎಸ್ ಧೋನಿ ನಿವೃತ್ತಿ?
ಪಂದ್ಯದ ಆರಂಭಕ್ಕೆ ಮುನ್ನ ಸಿಎಸ್‌ಕೆ ತಂಡದ ದಿಗ್ಗಜ ಆಟಗಾರ, ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನುವ ವದಂತಿಗಳು ಹರಿದಾಡಿದ್ದವು. ಇದಕ್ಕೆ ಪೂರಕ ಎನ್ನುವಂತೆ ಇದೇ ಮೊದಲ ಬಾರಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಧೋನಿ ಅವರ ತಂದೆ- ತಾಯಿ ಕಾಣಿಸಿಕೊಂಡಿದ್ದರು. ಪಂದ್ಯಕ್ಕೆ ಮುನ್ನ ಧೋನಿ ತಂದೆ ತಾಯಿ ಆಶೀರ್ವಾದ ಪಡೆದುಕೊಂಡಿದ್ದರು.
ಇದನ್ನು ನೋಡಿದ್ದ ಅಭಿಮಾನಿಗಳು ಧೋನಿ ಏನೋ ಮಹತ್ವದ ನಿರ್ಧಾರ ಮಾಡುವ ಸಾಧ್ಯತೆ ಇದೆ ಎಂದು ಊಹೆ ಮಾಡಿದ್ದರು. 12ನೇ ಓವರ್ ನಲ್ಲೇ ಕ್ರೀಸ್‌ಬಂದ ಧೋನಿ 26 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 30 ರನ್ ಗಳಿಸಿದರು. ಧೋನಿ ನಿಧಾನಗತಿಯ ಬ್ಯಾಟಿಂಗ್, ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದಿಂದ ಸಿಎಸ್‌ಕೆ 184 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದೆ ಸೋಲೊಪ್ಪಿಕೊಂಡರು.
ಧೋನಿ ನಿವೃತ್ತಿ ಬಗ್ಗೆ ಕೋಚ್ ಹೇಳಿದ್ದೇನು?
ಎಂಎಸ್ ಧೋನಿ ನಿವೃತ್ತಿ ಬಗ್ಗೆ ಸಿಎಸ್‌ಕೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್ ಎಂಎಸ್ ಧೋನಿ ನಿವೃತ್ತಿ ಹೊಂದುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅವರು ಇನ್ನೂ ಬಲಿಷ್ಠವಾಗಿದ್ದಾರೆ ನಾನು ಅವರ ಭವಿಷ್ಯದ ಯೋಜನೆಗಳ ಬಗ್ಗೆ ಎಂದಿಗೂ ಕೇಳುವುದಿಲ್ಲ ಎಂದಿದ್ದಾರೆ.
ಧೋನಿ ಬ್ಯಾಟಿಂಗ್ ಬಗ್ಗೆ ಟೀಕೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಂಎಸ್ ಧೋನಿ ಆಡಿದ ರೀತಿಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ಮೇಲೆ ಗೆಲ್ಲುವ ಒತ್ತಡವಿದ್ದರೂ ಧೋನಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಆಡಲೇ ಇಲ್ಲ ಎಂದಿದ್ದಾರೆ. ಓವರ್ ಗೇ 14-15 ರನ್ ಬೇಕಿದ್ದರೂ ಧೋನಿ ಬೌಂಡರಿ ಹೊಡೆಯುವ ಪ್ರಯತ್ನ ಮಾಡದೇ ಇರುವುದು, ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.












Click it and Unblock the Notifications