MS Dhoni: ಐಪಿಎಲ್‌ಗಾಗಿ ಅಭ್ಯಾಸ ಆರಂಭಿಸಿದ ಎಂಎಸ್ ಧೋನಿ

ಭಾರತೀಯ ಕ್ರಿಕೆಟ್ ದಿಗ್ಗಜ ಎಂಎಸ್ ಧೋನಿ ಮತ್ತೊಮ್ಮೆ ಮೈದಾನದಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ತನ್ನ ಕೊನೆಯ ಐಪಿಎಲ್ ಪಂದ್ಯಾವಳಿಗಾಗಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ಜಾರ್ಖಂಡ್‌ನ ದಿಯೋರಿ ಮಾ ದೇವಸ್ಥಾನಕ್ಕೆ ಭೇಟಿ ನೀಡಿದ ಒಂದು ದಿನದ ನಂತರ, ಎಂಎಸ್ ಧೋನಿ ನೆಟ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಿಎಸ್‌ಕೆ ತಂಡ ಅಧಿಕೃತ ಹಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ ಪೋಸ್ಟ್‌ನಲ್ಲಿ, ಎಂಎಸ್‌ ಧೋನಿ ನೆಟ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು.

 CSK Captain MS Dhoni Starts Preparations for IPL Campaign in 2024

ಕಳೆದ ಐಪಿಎಲ್ ಋತುವಿನಲ್ಲಿ ಎಂಎಸ್ ಧೋನಿ ಗಾಯಗೊಂಡಿದ್ದರು, ಆದರೆ ಅದನ್ನು ಲೆಕ್ಕಿಸದೆ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಪ್ರಶಸ್ತಿ ಗೆದ್ದುಕೊಂಡಿತ್ತು. ಐಪಿಎಲ್ ಮುಕ್ತಾಯದ ಬಳಿಕ ಎಂಎಸ್ ಧೋನಿ ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶಸ್ತ್ರಚಿಕಿತ್ಸೆಯ ನಂತರ, ಧೋನಿ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರ ಮೊಣಕಾಲು ಬ್ಯಾಂಡೇಜ್ ಮಾಡಲಾಗಿತ್ತು. ಅವರ ಮೊಣಕಾಲಿನ ಸಮಸ್ಯೆಗಳು ಈಗ ಪರಿಹರಿಸಲ್ಪಟ್ಟಂತೆ ತೋರುತ್ತಿದೆ, ಅವರು ಪೂರ್ಣ ತೀವ್ರತೆಯಿಂದ ನೆಟ್‌ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿಎಸ್‌ಕೆ ತಂಡಕ್ಕಾಗಿ ದಾಖಲೆಯ 6 ನೇ ಪ್ರಶಸ್ತಿಯನ್ನು ಗೆಲ್ಲಲು ಮತ್ತು ಅವರ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ನೋಡುತ್ತಿದ್ದಾರೆ.

ಕೊನೆಯ ಐಪಿಎಲ್ ಆಗುತ್ತಾ?

ಎಂಎಸ್ ಧೋನಿ 2023ರ ಐಪಿಎಲ್ ಬಳಿಕ ನಿವೃತ್ತಿ ಹೊಂದುತ್ತಾರೆ ಎನ್ನುವ ಸುದ್ದಿ ಇತ್ತು. ಅದಕ್ಕಾಗಿ ಅವರು ಹೋದಲ್ಲೆಲ್ಲಾ ಅಭಿಮಾನಿಗಳು ಅದ್ಭುತ ಬೆಂಬಲ ನೀಡಿದ್ದರು. ಎಲ್ಲಾ ತಂಡಗಳ ಅಭಿಮಾನಿಗಳು ಕೂಡ ಧೋನಿಗೆ ಗೌರವ ನೀಡಿದ್ದರು.

ಆದರೆ ಎಲ್ಲರ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಎಂಎಸ್ ಧೋನಿ ಅಭಿಮಾನಿಗಳಿಗಾಗಿ ಮತ್ತೊಂದು ಸೀಸನ್‌ನಲ್ಲಿ ಆಡುತ್ತೇನೆ ಎನ್ನುವ ಮೂಲಕ ಅಭಿಮಾನಿಗಳ ಖುಷಿಯನ್ನು ಡಬಲ್ ಮಾಡಿದ್ದರು.

ಐಪಿಎಲ್ 2024ರ ಮಿನಿ ಹರಾಜಿಗೆ ಮುನ್ನ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಐಪಿಎಲ್‌ನಿಂದ ಹೊರನಡೆದಿದ್ದರು. ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ, ಡೇರಿಲ್ ಮಿಚೆಲ್ ಸೇರಿದಂತೆ ಪ್ರಮುಖ ಆಟಗಾರರನ್ನು ಖರೀದಿ ಮಾಡಿರುವ ಸಿಎಸ್‌ಕೆ ಈ ಬಾರಿ ಕೂಡ ಬಲಿಷ್ಠ ತಂಡವಾಗಿ ಕಾಣುತ್ತಿದೆ.

2024ರ ಐಪಿಎಲ್‌ಗೆ ಸಿಎಸ್‌ಕೆ ತಂಡ

ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾನಾ, ಅಜಿಂಕ್ಯ ರಹಾನೆ, ಶೇಕ್ ರಷೀದ್, ಮಿಚೆಲ್ ಸ್ಯಾಂಟ್ನರ್, ಸಮರ್ ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+