ಬೆಳಗಾವಿ: ಕ್ರಿಕೆಟ್‌ ದೇವರ ಭೇಟಿ ನಂತರ ದುಪ್ಪಟ್ಟಾಯ್ತು ಚಹಾ ಅಂಗಡಿ ವ್ಯಾಪಾರ

ಬೆಳಗಾವಿ, ನವೆಂಬರ್ 10: ಕ್ರಿಕೆಟ್‌ ಲೋಕದ ದಂತಕತೆಯಾಗಿರುವ ಸಚಿನ್‌ ತೆಂಡೂಲ್ಕರ್‌ ಕಳೆದ ವಾರ ತಮ್ಮ ಕುಟುಂಬದ ಜೊತೆಗೆ ಗೋವಾಕ್ಕೆ ಪ್ರವಾಸ ಹೋಗುತ್ತಿದ್ದ ವೇಳೆ ಬೆಳಗಾವಿಯ ರಸ್ತೆ ಬದಿಯ ಅಂಗಡಿಗೆ ಭೇಟಿ ನೀಡಿದ್ದರು. ಅಲ್ಲಿ ಟೀ ಕುಡಿಯುತ್ತಿದ್ದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲಾತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು.

ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿರುವ ವೈಜು ನಿಟ್ಟೂರ್ಕರ್ ಎಂಬುವರ ಫೌಜಿ ಅಂಗಡಿಯಲ್ಲಿ ಚಹಾ ಸವಿದಿದ್ದರು. ಕುಟುಂಬ ಸಮೇತ ಕೊಲ್ಹಾಪುರದ ನರಸಿಂಹವಾಡಿಗೆ ಹೋಗಿದ್ದರು. ಅಲ್ಲಿಂದ ಗೋವಾಕ್ಕೆ ಹೋಗುವಾಗ ಬೆಳಗ್ಗೆ 8 ಗಂಟೆ ಸಮಯದಲ್ಲಿ ಮಜಗಾವಿಯಲ್ಲಿ ಚಹಾ ಸವಿದಿದ್ದರು.

ಇನ್ನು ಸಚಿನ್‌ ನೋಡುತ್ತಿದ್ದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಯಾರಿಗೂ ನಿರಾಶೆ ಮೂಡಿಸದ ಸಚಿನ್ ಫೋಟೋಗೆ ಪೋಸ್‌ ನೀಡಿದ್ದಲ್ಲದೆ ಎಲ್ಲರೊಂದಿಗೂ ಮಾತನಾಡಿದ್ದಾರೆ. ಅಂಗಡಿ ಮಾಲಿಕನೊಂದಿಗೆ ಮಾತನಾಡಿ ಆತನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

ನೋಟಿನ ಮೇಲೆ ಆಟೋಗ್ರಾಫ್

ನೋಟಿನ ಮೇಲೆ ಆಟೋಗ್ರಾಫ್

ಇನ್ನು ಸಚಿನ್‌ ಹಾಗೂ ಜೊತೆಯಲ್ಲಿದ್ದವರು ಟೀ ಕುಡಿದ ಬಿಲ್‌ 175 ಆಗಿತ್ತು. ಸಚಿನ್‌ 200 ರೂ ನೋಟನ್ನು ನೀಡಿದರು. ಅಂಗಡಿ ಮಾಲಿಕ ಬಿಲ್‌ ಬೇಡ ಅಂದ್ರೂ ಕೂಡ ಸಚಿನ್‌ ನಿಮ್ಮದೇನು ಫೈವ್‌ ಸ್ಟಾರ್ ಹೋಟೆಲ್‌ ಅಲ್ವ ಎಂದು ಹೇಳಿ ಬಿಲ್‌ ಪಾವತಿಸಿದರು. ನಂತರ ಅಂಗಡಿ ಮಾಲಿಕ ಫೈಜಿ ನಿಟ್ಟೂರ್ಕರ್‌ ಆ ನೋಟಿನ ಮೇಲೆ ಆಟೋಗ್ರಾಫ್‌ ನೀಡುವಂತೆ ಕೇಳಿಕೊಂಡಿದ್ದಾರೆ. ಮುಗುಳ್ನಕ್ಕ ಸಚಿನ್‌ ನೋಟಿನ ಸಹಿ ಮಾಡಿ ಕೊಟಿದ್ದಾರೆ.

ಸಚಿನ್ ಫೋಟೋಗಳೆಳನ್ನ ಬ್ಯಾನರ್‌ ಮಾಡಿಸಿಕೊಂಡ ವೈಜು

ಸಚಿನ್ ಫೋಟೋಗಳೆಳನ್ನ ಬ್ಯಾನರ್‌ ಮಾಡಿಸಿಕೊಂಡ ವೈಜು

ಸಚಿನ್ ಬಿಲ್‌ ಕೊಟ್ಟ ನಂತರ ನಿಟ್ಟೂರ್ಕರ್ ಸೆಲ್ಫಿಗಾಗಿ ಮನವಿ ಮಾಡಿಕೊಂಡರು. ಇದಕ್ಕೂ ನಿರಾಕರಿಸಿದ ಕ್ರಿಕೆಟ್ ದೇವರು ತಾವೇ ಸೆಲ್ಫಿ ತೆಗೆದಿದ್ದಾರೆ. ಸ್ವಲ್ಪ ಹೊತ್ತು ಸಮಯ ಕಳೆದ ಸಚಿನ್‌ ಅಲ್ಲಿಂದ ಗೋವಾಕ್ಕೆ ತೆರಳಿದ್ದಾರೆ. ಇನ್ನು ತಮ್ಮ ಅಂಗಡಿಗೆ ವಿಶ್ವವಿಖ್ಯಾತ ಕ್ರಿಕೆಟರ್ ಭೇಟಿ ನೀಡಿದ ಕ್ಷಣವನ್ನು ಸದಾ ನೆನಪಿನಲ್ಲಿಡುವುದಕ್ಕಾಗಿ ಚಹಾ ಅಂಗಡಿ ಮಾಲಿಕ ಸಚಿನ್‌ ಭೇಟಿಯ ಎಲ್ಲಾ ಫೋಟೋಗಳನ್ನು ಬ್ಯಾನರ್ ಮಾಡಿ ಅಂಗಡಿಯಲ್ಲಿ ಹಾಕಿಸಿಕೊಂಡಿದ್ದಾರೆ.

ತೆಂಡೂಲ್ಕರ್ ಭೇಟಿ ನಂತರ ಉತ್ತಮ ವ್ಯಾಪಾರ

ತೆಂಡೂಲ್ಕರ್ ಭೇಟಿ ನಂತರ ಉತ್ತಮ ವ್ಯಾಪಾರ

ಇನ್ನು ಸಚಿನ್‌ ತೆಂಡೂಲ್ಕರ್ ಫೌಜಿ ಅಂಗಡಿಗೆ ಭೇಟಿ ನೀಡಿದ ನಂತರ ಚಹಾ ಅಂಗಡಿ ಭಾರಿ ಪ್ರಸಿದ್ಧಿಯಾಗಿದೆ. ಮೊದಲಿಗಿಂತ ವ್ಯಾಪಾರ ದುಪ್ಪಟ್ಟಾಗಿದೆ ಎಂದು ಅಂಗಡಿ ಮಾಲಿಕ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾನ್ ಕ್ರಿಕೆಟಿಗ ನನ್ನ ಅಂಗಡಿ ಬಂದದ್ದ ನನ್ನ ಸೌಭಾಗ್ಯ, ಸಚಿನ್ ಅಭಿಮಾನಿಗಳು ನನ್ನ ಅಂಗಡಿ ಬರಲು ಶುರು ಮಾಡಿದ್ದಾರೆ ಎಂದು ನಿಟ್ಟೂರ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿನ್‌ ನೀಡಿದ ನೋಟನ್ನು ಸಹಾ ಅಂಗಡಿ ಮಾಲಿಕ ಫೋಟೋ ಪ್ರೇಮ್ ಮಾಡಿಸುವುದಕ್ಕೆ ನೀಡಿದ್ದಾರೆ.

ಗೋವಾ ಬೀಚ್‌ನಲ್ಲಿ ಮೀನೂಟ ಸವಿದ ಸಚಿನ್

ಗೋವಾ ಬೀಚ್‌ನಲ್ಲಿ ಮೀನೂಟ ಸವಿದ ಸಚಿನ್

ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಪ್ರವಾಸ ಕೈಗೊಂಡಿದ್ದು, ಕಡಲ ತೀರದಲ್ಲಿ ಎಂಜಾಯ್ ಮಾಡಿದ್ದಾರೆ. ಸ್ಥಳೀಯ ಮೀನುಗಾರರೊಂದಿಗೆ ಮಾತನಾಡುತ್ತಾ ಮೀನುಗಾರಿಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಬೀಚ್‌ ರೆಸ್ಟೋರೆಂಟ್‌ನಲ್ಲಿ ಮೀನಿನ ತಿನಿಸುಗಳ ರುಚಿಯನ್ನು ಸವಿದಿದ್ದಾರೆ. ಇದೆಲ್ಲಾ ವಿಡಿಯೋಗಳನ್ನು ಸಚಿನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+