• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಹ್ಯಾರಿಸ್ ರೌಫ್‌ಗೆ ಸಹಿ ಮಾಡಿದ ಟೀಂ ಇಂಡಿಯಾದ ಜೆರ್ಸಿ ನೀಡಿದ ವಿರಾಟ್ ಕೊಹ್ಲಿ

|
Google Oneindia Kannada News

ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಕದನ ಎಂಬಂತೆಯೇ ಬಿಂಬಿಸಲಾಗುತ್ತದೆ. ಎರಡೂ ತಂಡಗಳ ಅಭಿಮಾನಿಗಳಿಗೆ ಇದು ಪ್ರತಿಷ್ಠೆಯ ವಿಚಾರ. ಸೋತ ತಂಡದ ಅಭಿಮಾನಿಗಳನ್ನು ಗೆದ್ದ ತಂಡದ ಅಭಿಮಾನಿಗಳು ಟ್ರೋಲ್ ಮಾಡುವುದನ್ನು ಕೂಡ ನೋಡಬಹುದು.

ಎರಡೂ ತಂಡಗಳ ನಡುವೆ ಪಂದ್ಯದ ಸಮಯದಲ್ಲಿ ಆಟಗಾರರ ಮಧ್ಯೆ ವಾಗ್ವಾದ, ಕಾವೇರುವ ವಾತಾವರಣ ನಡೆದಿದ್ದವು. ಆದರೆ ಈ ಬಾರಿ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡದ ಆಟಗಾರರು ಪ್ರೌಢಿಮೆ ಮೆರೆದರು. ಎರಡೂ ದೇಶಗಳ ನಡುವಿನ ರಾಜಕೀಯ ಏನೇ ಇದ್ದರೂ, ನಾವು ಕ್ರೀಡಾಸ್ಪೂರ್ತಿ ಬಿಡುವುದಿಲ್ಲ ಎಂದು ಸಂದೇಶ ನೀಡಿದರು.

100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು

ಆಟದಲ್ಲಿ ಸೋಲು-ಗೆಲುವು ಸಾಮಾನ್ಯ, ಆದರೆ ಎರಡೂ ತಂಡಗಳ ಆಟಗಾರರ ನಡವಳಿಕೆ ಎಲ್ಲರ ಮನ ಗೆದ್ದಿದೆ. ಎರಡೂ ತಂಡಗಳ ನಡುವೆ ಸಾಮರಸ್ಯ ಸಾರುವ ಹಲವು ಘಟನೆಗಳು ಪಂದ್ಯದ ವೇಳೆ ನಡೆದವು. ವಿಕೆಟ್ ಬಿದ್ದಾಗ ಯಾವ ಆಟಗಾರನೂ ಅತಿಯಾಗಿ ಸಂಭ್ರಮಿಸಲಿಲ್ಲ, ಗೆದ್ದಾಗಲೂ ಕೂಡ ಉದ್ರೇಕದ ವರ್ತನೆ ತೋರಲಿಲ್ಲ. ಪ್ರಬುದ್ಧತೆ ತೋರಿದ ಎರಡೂ ತಂಡದ ಆಟಗಾರರು ಕ್ರೀಡಾ ಮನೋಭಾವ ತೋರಿದರು.

 ಹ್ಯಾರಿಸ್‌ ರೌಫ್‌ಗೆ ಸಹಿ ಮಾಡಿದ ಜೆರ್ಸಿ ಕೊಟ್ಟ ಕೊಹ್ಲಿ

ಹ್ಯಾರಿಸ್‌ ರೌಫ್‌ಗೆ ಸಹಿ ಮಾಡಿದ ಜೆರ್ಸಿ ಕೊಟ್ಟ ಕೊಹ್ಲಿ

ಪಂದ್ಯ ಮುಗಿದ ನಂತರ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ, ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ತಮ್ಮ ಸಹಿ ಮಾಡಿದ್ದ ಭಾರತೀಯ ಕ್ರಿಕೆಟ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಜೆರ್ಸಿಯ ಮೇಲೆ ಸಹಿ ಮಾಡಿ ಹ್ಯಾರಿಸ್ ರೌಫ್‌ಗೆ ನೀಡುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಆಟಗಾರರ ಕ್ರೀಡಾ ಮನೋಭಾವಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂದಿದೆ.

 ವಿರಾಟ್ ಮೇಲೆ ಬಾಬರ್ ಅಜಮ್ ಗೌರವ

ವಿರಾಟ್ ಮೇಲೆ ಬಾಬರ್ ಅಜಮ್ ಗೌರವ

ಕ್ರೀಡಾಂಗಣದಲ್ಲಿ ಮಾತ್ರವಲ್ಲಿ ಆಟದ ಹೊರತಾಗಿಯೂ ಎರಡೂ ತಂಡಗಳ ಆಟಗಾರರು ಪರಸ್ಪರ ಗೌರವ ಹೊಂದಿದ್ದಾರೆ. ಭಾರತ ತಂಡದ ಅಭ್ಯಾಸದ ಸಮಯದಲ್ಲಿ ವಿರಾಟ್ ಕೊಹ್ಲಿ-ಬಾಬರ್ ಅಜಮ್ ಭೇಟಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಈ ಮೊದಲು ಮಾತನಾಡಿದ್ದ ಬಾಬರ್ ಅಜಮ್ ಕೊಹ್ಲಿಯನ್ನು ಶ್ರೇಷ್ಠ ಆಟಗಾರ ಎಂದು ಕರೆದಿದ್ದರು.

ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಬಾಬರ್ ಅಜಮ್ ಟ್ವೀಟ್ ಕೂಡ ಮಾಡಿದ್ದರು. ಈ ಕೆಟ್ಟ ಸಮಯ ಕಳೆದುಹೋಗುತ್ತದೆ ಎಂದು ಹೇಳಿದ್ದರು.

 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಕೊಹ್ಲಿ

100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಕೊಹ್ಲಿ

ಪಾಕಿಸ್ತಾನದ ವಿರುದ್ಧ ಟಿ20 ಆಡುವ ಮೂಲಕ ವಿರಾಟ್ ಕೊಹ್ಲಿ ತಮ್ಮ 100ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಆಟಗಾರ ಎನ್ನುವ ಮೈಲಿಗಲ್ಲು ಸ್ಥಾಪಿಸಿದರು.
ಎಲ್ಲಾ ಮಾದರಿಯಲ್ಲಿ 100 ಪಂದ್ಯಗಳನ್ನಾಡಿದ ಭಾರತದ ಮೊದಲ ಆಟಗಾರ ಎನ್ನುವ ಕೀರ್ತಿಗೆ ವಿರಾಟ್ ಕೊಹ್ಲಿ ಭಾಜನರಾದರು. ರಾಸ್ ಟೇಲರ್ ನಂತರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ನೂರನೇ ಪಂದ್ಯದಲ್ಲಿ 34 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 35 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಸಹಕಾರಿಯಾದರು.

 ಪಾಂಡ್ಯಗೆ ಮುತ್ತುಕೊಟ್ಟ ಆಫ್ಘಾನಿಸ್ತಾನ ಅಭಿಮಾನಿ

ಪಾಂಡ್ಯಗೆ ಮುತ್ತುಕೊಟ್ಟ ಆಫ್ಘಾನಿಸ್ತಾನ ಅಭಿಮಾನಿ

ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸುತ್ತಿದ್ದಂತೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂದಿದೆ. ಅದರಲ್ಲೂ ಸಂಕಷ್ಟದ ಸಮಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂತಿಮ ಓವರ್ ನಲ್ಲಿ 7 ರನ್ ಬೇಕಿದ್ದಾಗ ಮೊದಲನೇ ಎಸೆತದಲ್ಲೇ ರವೀಂದ್ರ ಜಡೇಜಾ ಔಟ್ ಆದರು ನಂತರ ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ ಒಂದು ರನ್ ಓಡುವ ಮೂಲಕ ಹಾರ್ದಿಕ್ ಪಾಂಡ್ಯಗೆ ಸ್ಟ್ರೈಕ್‌ ನೀಡಿದರು. ಕೊನೆಯ ಓವರ್ ನ ಮೂರನೇ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ ಆದರೆ ನಾಲ್ಕನೇ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ಐದು ವಿಕೆಟ್‌ಗಳ ಜಯ ತಂದುಕೊಟ್ಟರು. ಹಾರ್ದಿಕ್ ಪಾಂಡ್ಯ ಸಿಕ್ಸ್ ಹೊಡೆಯುತ್ತಿದ್ದಂತೆ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ಆಫ್ಘಾನಿಸ್ತಾನದ ಅಭಿಮಾನಿಯೊಬ್ಬ ಭಾರತದ ಗೆಲುವಿಗೆ ಸಂಭ್ರಮಿಸಿದ್ದಾನೆ. ಟಿವಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮುತ್ತುಕೊಟ್ಟಿದ್ದು ವಿಡಿಯೋ ವೈರಲ್ ಆಗಿದೆ.

English summary
There was a lot of love on display off the pitch as Indian cricketing great Virat Kohli gifted Pakistan pacer Haris Rauf a signed Indian cricket team jersey in a heartwarming moment. BCCI Share This Video in Twitter Later its went Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X