ಮುರುಡೇಶ್ವರ:ಸಮುದ್ರದಲ್ಲಿ ಈಜಲು ಹೋಗಿ ಬೆಂಗಳೂರು ಯುವಕ ಸಾವು
ಬೆಂಗಳೂರು, ಜು.28: ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಯುವಕ ಸಮುದ್ರದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ಒಟ್ಟು ಒಂಭತ್ತು ಮಂದಿ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು, ಕಿರಣ್ ಕುಮಾರ್(18) ಮೃತ ಯುವಕ, ಸಮುದ್ರಕ್ಕಿಳಿದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಒಂಭತ್ತು ಜನರ ಪೈಕಿ ನಾಲ್ವರು ಸಮುದ್ರಕ್ಕೆ ಇಳಿದು ಅಲೆಗಳೊಡನೆ ಆಟವಾಡುತ್ತಿದ್ದರು. ಆಗ ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ಇಬ್ಬರು ಅಪಾಯದಲ್ಲಿ ಸಿಲುಕಿದ್ದಾರೆ
.

ಇದನ್ನು ಗಮನಿಸಿದ ಸ್ಥಳೀಯರು ಹಾಗೂ ರಕ್ಷಣಾ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿದ್ದು ಕಾರ್ತಿಕ್ ಮುನಿರಾಜು (20) ಎನ್ನುವ ಒಬ್ಬನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ,. ಆದರೆ ಕಿರಣ್‌ಕುಮಾರ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಬೆಂಗಳೂರಿನ ಯಲಹಂಕದ ಮೂಲದ ಕಿರಣಕುಮಾರ್ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications