ನಂದಿತಾ ಸಾವಿಗೆ ಕಂಬನಿ ಮಿಡಿದ ತೀರ್ಥಹಳ್ಳಿ
ಶಿವಮೊಗ್ಗ, ನ.5 : 'ಈ ತೀರ್ಥಹಳ್ಳಿ ಕೇಸ್ ಎಲ್ಲಿಗೆ ಬಂತೋ' ಇದು ತೀರ್ಥಹಳ್ಳಿ ಮತ್ತು ಸುತ್ತ ಮುತ್ತಲಿನ ಊರಿನ ಜನರ ನಿತ್ಯದ ಮಾತಾಗಿದೆ. ಅಪ್ಪಟ ಮಲೆನಾಡಿನ ಶಾಂತಿಪ್ರಿಯ ಸ್ಥಳ ತೀರ್ಥಹಳ್ಳಿ 8ನೇ ತರಗತಿ ಬಾಲಕಿ ಅಪಹರಣ ಮತ್ತು ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದಿದೆ. ಅದರಲ್ಲೂ ಬಾಲಕಿ ಸಾವಿನ ನಂತರ ನಡೆದ ಘಟನಾವಳಿಗಳು ಮತ್ತು ಆರೋಪ ಪ್ರತ್ಯಾರೋಪಗಳು ಸ್ಥಳೀಯ ಜನರಿಗೆ ಅಸಮಾಧಾನ ಮೂಡಿಸಿವೆ.
ಅಕ್ಟೋಬರ್ ತಿಂಗಳಿನಿಂದ ಮೂರು ತಿಂಗಳ ಕಾಲ ತೀರ್ಥಹಳ್ಳಿ ಜನರಿಗೆ ಕಾಡು ಹರಟೆ ಹೊಡೆಯಲು ಸಮಯ ವಿರುವುದಿಲ್ಲ. ಏಕೆಂದರೆ, ಅಡಿಕೆ ಫಸಲು ಕೈಗೆ ಬಂದಿರುತ್ತದೆ. ಜೊತೆಗೆ ಮಳೆಯ ಕಾಟ ಬೇರೆ 'ನಮ್ಮದು ಎರಡು ಕೊಯ್ಲು ಮುಗೀತು ಕಣೋ, ರೇಟು ಸಿಕ್ಕಿದ್ರೆ ಆಗ್ತಿತ್ತು' ಎಂದು ಜನರು ಮಾತನಾಡಿಕೊಂಡು ತೀರ್ಥಹಳ್ಳಿ ಪಟ್ಟಣಕ್ಕೆ ಬಂದು ಗಡಿಬಿಡಿಯಲ್ಲಿ ವಾಪಸ್ ಮನೆಗೆ ಮರಳುತ್ತಾರೆ. [ತೀರ್ಥಹಳ್ಳಿಯ ಸಾರ್ಥಕ ಪ್ರವಾಸ]

ಅ.29ರಂದು ತೀರ್ಥಹಳ್ಳಿಯ ಆನಂದಗಿರಿ ಗುಡ್ಡದಲ್ಲಿ ನಂದಿತಾ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದಾಗ ಇಷ್ಟು ದೊಡ್ಡ ಗಲಾಟೆ ಆಗುತ್ತದೆ ಎಂದು ಯಾರು ಅಂದುಕೊಂಡಿರಲಿಲ್ಲ. ಶನಿವಾರ ನಂದಿತಾ ಮೃತದೇಹ ತೀರ್ಥಹಳ್ಳಿ ತಲುಪಿದ ಬಳಿಕ. ಜನರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದರು.ಸೋಮವಾರ ಗಲಾಟೆ ಜೋರಾಯಿತು ವಾರಗಳ ಕಾಲ ನಿಷೇಧಾಜ್ಞೆ ಜಾರಿಗೆ ಬಂದಿತು. [ತೀರ್ಥಹಳ್ಳಿ ಸಹಜ ಸ್ಥಿತಿಗೆ, ಸಿಐಡಿ ತನಿಖೆ ಆರಂಭ]
ಪ್ರತಿ ಸೋಮವಾರ ನಡೆಯುವ ಸಂತೆ ನಿಂತುಹೋಯಿತು. ಅಕ್ಕಪಕ್ಕದ ಸಾಗರ, ಕೊಪ್ಪ, ಹೊಸನಗರ ಮುಂತಾದ ಊರುಗಳಿಂದ ತೀರ್ಥಹಳ್ಳಿಗೆ ಬರಲು ಸಾಧ್ಯವಾಗದೇ ಜನರು ಪರದಾಡಿದರು. ಕಳೆದ ವರ್ಷ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ರಸ್ತೆಯಲ್ಲೇ ಹತ್ಯೆಯಾಗಿದ್ದು, ಸುದ್ದಿಯಾಗಿತ್ತು. ಅದು ಬಿಟ್ಟರೆ ಈ ಗಲಾಟೆಯೇ ದೊಡ್ಡ ಗಲಾಟೆ ಎನ್ನಬಹುದು.
ತೀರ್ಥಹಳ್ಳಿಯ ಪ್ರಮುಖ ಆಕರ್ಷಣೆಯಾದ ರಾಮೇಶ್ವರ ದೇವರ ಜಾತ್ರೆ ಸಮಯ ಬಿಟ್ಟರೆ ಇಷ್ಟೊಂದು ಪೊಲೀಸರನ್ನು ಪಟ್ಟಣದಲ್ಲಿ ನೋಡುವುದು ಸಾಧ್ಯವಿರಲಿಲ್ಲ. ನಂದಿತಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡು ಅವರು ಮಾಡಿದ್ದಂತೆ, ಇವರು ಮಾಡಿಸಿದ್ದಂತೆ, ಇವರ ಬೆಂಬಲವಿದೆಯಂತೆ ಎಂದು ಜನರು ಮಾತನಾಡಿಕೊಳ್ಳುತ್ತಾ ನಾಲ್ಕ ದಿನ ಕಳೆದಿದ್ದು, ಸದ್ಯ ಪಟ್ಟಣದ ಜನಜೀವನ ಸಹಜ ಸ್ಥಿತಿಗೆ ಬಂದಿದೆ.
ತೀರ್ಥಹಳ್ಳಿ ಎಂದರೆ ನೆನಪಾಗುವುದು ಮಳೆ, ಅಡಿಕೆ, ಸಾಹಿತ್ಯ ಚಟುವಟಿಕೆಗಳು, ಹಚ್ಚ ಹಸಿರಿನ ವಾತಾವರಣ ಮತ್ತು ಸಿನಿಮಾ ಧಾರವಾಹಿಗಳ ಶೂಟಿಂಗ್. ಶಾಂತಿಯುತವಾದ ವಾತಾವರಣದಲ್ಲಿ ಬದುಕುವ ಜನರು ಅಪರಾಧ ಚುಟುವಟಿಕೆ, ಕೊಲೆ ಎಂದರೆ ಹೌದಂತಾ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಶಾಲಾ ಬಾಲಕಿ ಮೃತಪಟ್ಟಿರುವುದು ಜನರಿಗೂ ಬೇಸರ ಮೂಡಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಸೋತು ಕಿಮ್ಮನೆ ರತ್ನಾಕರ್ ಶಾಸಕರಾದರು. ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದರು, ಆಗ ಜನರು ಸಂತಸ ಪಟ್ಟಿದ್ದರು. ಈಗ ಅವರ ಅವಧಿಯಲ್ಲಿ ಇಂತಹ ದೊಡ್ಡ ಗಲಾಟೆ ನಡೆದಿದೆ. ನಂದಿತಾ ಸಾವಿನ ನಿಗೂಢತೆ ಇನ್ನೂ ಮುಂದುವರೆದಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications