ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ

ಶಿವಮೊಗ್ಗ, ಏಪ್ರಿಲ್ 8; ನೈಋತ್ಯ ರೈಲ್ವೆ ಮೈಸೂರು-ತಾಳಗುಪ್ಪ ನಡುವೆ ಮತ್ತೊಂದು ರೈಲನ್ನು ಓಡಿಸಲಿದೆ. ಏಪ್ರಿಲ್ 10ರಿಂದ ಈ ರೈಲು ಸಂಚಾರ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ 10ರಿಂದ ಕರ್ನಾಟಕದಲ್ಲಿ ವಿವಿಧ ಹೊಸ ರೈಲುಗಳನ್ನು ನೈಋತ್ಯ ರೈಲ್ವೆ ಆರಂಭಿಸುತ್ತಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ ರೈಲುಗಳಿಗೆ ಮತ್ತೆ ಚಾಲನೆ ನೀಡಲಾಗುತ್ತಿದೆ.

 SWR To Run Talguppa Mysuru Special Train From April 10

ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ ತಾಳಗುಪ್ಪ ನಡುವೆ ಹೊಸ ರೈಲನ್ನು ಓಡಿಸಲಾಗುತ್ತಿದೆ. ಟಿಕೆಟ್ ಕೌಂಟರ್‌ಗಳಲ್ಲಿಯೂ ಈ ರೈಲಿಗೆ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ.

ವೇಳಾಪಟ್ಟಿ; ತಾಳಗುಪ್ಪ-ಮೈಸೂರು ರೈಲು ಮೈಸೂರಿನಿಂದ ಬೆಳಗ್ಗೆ 10.15ಕ್ಕೆ ಹೊರಡಲಿದ್ದು, ಸಂಜೆ 6 ಗಂಟೆಗೆ ತಾಳಗುಪ್ಪವನ್ನು ತಲುಪಲಿದೆ.

12.25ಕ್ಕೆ ಹಾಸನ, 1.20ಕ್ಕೆ ಅರಸೀಕೆರೆ, 2.40ಕ್ಕೆ ತರೀಕೆರೆ, 3 ಗಂಟೆಗೆ ಭದ್ರಾವತಿ, 3.30ಕ್ಕೆ ಶಿವಮೊಗ್ಗ ತಲುಪಲಿದೆ. 3.35ಕ್ಕೆ ಶಿವಮೊಗ್ಗದಿಂದ ಹೊರಟು 6 ಗಂಟೆಗೆ ತಾಳಗುಪ್ಪ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳಗ್ಗೆ 8.45ಕ್ಕೆ ತಾಳಗುಪ್ಪದಿಂದ ಹೊರಡುವ ರೈಲು, 10.55ಕ್ಕೆ ಶಿವಮೊಗ್ಗ ತಲುಪಲಿದೆ. 11.10ಕ್ಕೆ ನಗರದಿಂದ ಹೊರಡುವ ರೈಲು 4.50ಕ್ಕೆ ಮೈಸೂರು ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+