ಸ್ವಂತ ಮಗನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಕ್ರೂರ ತಾಯಿ!
ಶಿವಮೊಗ್ಗ, ಜೂನ್ 7: ಪರಪುರುಷನೊಂದಿಗೆ ತಾನು ಹೊಂದಿರುವ ಅನೈತಿಕ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಾನೆಂದು ಸ್ವಂತ ಮಗನನ್ನೇ ತಾಯಿ ಸುಪಾರಿ ಕೊಟ್ಟು ಸಾಯಿಸಿದ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದಿದೆ.
ಎರಡನೇ ತರಗತಿ ಓದುತ್ತಿದ್ದ ಪ್ರಮೋದ್ (7) ಕೊಲೆಯಾದ ದುರ್ದೈವಿ. ಜೂನ್ 2, ಶುಕ್ರವಾರದಂದು ಪ್ರಮೋದನನ್ನು ಅಪಹರಿಸಿ, ಕೊಲೆಮಾಡಿ ಚೋರಡಿಯ ಕುಮದ್ವತಿ ನದಿಯ ಬಳಿ ಮೃತದೇಹವನ್ನು ಎಸೆಯಲಾಗಿತ್ತು.[ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ]

ಬಾಲಕನ ಅನುಮಾನಾಸ್ಪದ ಸಾವಿನ ಹಿನ್ನೆಲೆ ಹುಡುಕಿದ ಪೊಲೀಸರಿಗೆ ಹುಡುಗನ ತಾಯಿ ರೇಖಾ ಮತ್ತು ತಿಮ್ಮನ ಗೌಡ ಎಂಬ ಪುರುಷನಿಗೂ ಇರುವ ಅನೈತಿಕ ಸಂಬಂಧದ ಕುರಿತು ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ತಿಮ್ಮನ ಗೌಡ ತಪ್ಪೊಪ್ಪಿಕೊಂಡಿದ್ದು, ರೇಖಾಳೇ ತನ್ನ ಮಗನನ್ನು ಸಾಯಿಸಲು ಸುಪಾರಿ ನೀಡಿದ್ದಾಗಿಯೂ, ಪ್ರಮೋದನನ್ನು ತಾನೇ ಸಾಯಿಸಿದ್ದಾಗಿಯೂ ಹೇಳಿದ್ದಾನೆ.
ಇದೀಗ ರೇಖಾ ಮತ್ತು ತಿಮ್ಮನ ಗೌಡ ಇಬ್ಬರನ್ನೂ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಹತ್ತು ವರ್ಷದ ಹಿಂದೆ ಹಿರೇಕೆರೂರಿನ ವೀರಭದ್ರ ಎಂಬುವವರನ್ನು ಮದುವೆಯಾಗಿದ್ದ ರೇಖಾ ಆರೇ ತಿಂಗಳಲ್ಲಿ ಪತಿಯನ್ನು ತೊರೆದಿದ್ದರು.












Click it and Unblock the Notifications