ಶಿವಮೊಗ್ಗ: ಗುಂಪು ಘರ್ಷಣೆ, ನಿಷೇಧಾಜ್ಞೆ ಜಾರಿ
ಶಿವಮೊಗ್ಗ, ಫೆ. 19: ಶಿವಮೊಗ್ಗ ನಗರದಲ್ಲಿ ಗುರುವಾರ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು ಶುಕ್ರವಾರ ಬೆಳಗಿನವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪು ಘರ್ಷಣೆ ನಡೆದಿದೆ.
ನಗರದ ಅಮೀರ್ ಅಹಮದ್ ವೃತ್ತದ ಬಳಿ ಗುಂಪು ಘರ್ಷಣೆ ನಡೆದಿದ್ದು, ಗಾಂಧಿ ನಗರದಲ್ಲಿ ಕಲ್ಲು ತೂರಾಟವಾಗಿದೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ಮಾಡಿದ್ದಾರೆ.[ಶಿವಮೊಗ್ಗ: ಶಿವರಾತ್ರಿಗೆ ಹೋದ ಬಾಲಕರು ತುಂಗೆ ಪಾಲು]

ಮೆರವಣಿಗೆ ವೇಳೆ ಆಕ್ಷೇಪಾರ್ಹ ಘೊಷಣೆ ಕೂಗಿದ್ದೇ ಘಟನೆಗೆ ಮೂಲ ಕಾರಣ. ಆಕ್ಷೇಪಾರ್ಹ ಘೊಷಣೆಗೆ ಪ್ರತಿರೋಧ ತೋರಿದ ಇನ್ನೊಂದು ಗುಂಪಿನ ಜನರು ಮತ್ತು ಮೆರವಣಿಗೆ ನಿರತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಘರ್ಷಣೆಗೆ ತಿರುಗಿದೆ.
ನಗರದ ಬಸ್ ನಿಲ್ದಾಣದಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿಎಚ್ ರಸ್ತೆ ಮಾರ್ಗವಾಗಿ ಮೆರವಣಿಗೆ ಹಮ್ಮಿಕೊಂಡಿತ್ತು. ಸೈನ್ಸ್ ಮೈದಾನದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಕ್ಷೇಪಾರ್ಹ ಘೋಷಣೆ ಕೂಗಿದ್ದರಿಂದ ಘರ್ಷಣೆ ಸಂಭವಿಸಿದೆ.

ಗಾಂಧಿ ಬಜಾರ್ ನಲ್ಲಿ ಕಲ್ಲು ತೂರಾಟ ನಡೆದಿದ್ದು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್ ತಕ್ಷಣ ನಿಷೇಧಾಜ್ಞೆ ಜಾರಿ ಮಾಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.












Click it and Unblock the Notifications