Breaking: ಶಿವಮೊಗ್ಗದಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆ
ಶಿವಮೊಗ್ಗ, ಜುಲೈ 14: ನಗರದಲ್ಲಿ ಬೆಳ್ಳಂ ಬೆಳಗ್ಗೆ ಲಾಂಗು ಮಚ್ಚು ಝಳಪಿಸಿದ್ದು, ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿಯನ್ನು ಐದಾರು ಮಂದಿ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬವಾಗಿ ಹತ್ಯೆ ಮಾಡಿದ್ದಾರೆ.
ನಗರದ ವಿನೋಬನಗರ ಚೌಕಿ ಬಳಿ ಇನ್ನೋವಾ ಕಾರಿನಲ್ಲಿ ಬಂದಂತಹ ಆರು ಮಂದಿ ದುಷ್ಕರ್ಮಿಗಳು ಹಂದಿ ಅಣ್ಣಿ ಮೇಲೆ ದಾಳಿ ಮಾಡಿದ್ದಾರೆ. ತಲೆ ಭಾಗಕ್ಕೆ ಗುರಿಯಾಗಿಸಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ ರೌಡಿ ಶೀಟರ್ ಸ್ಥಳದಲ್ಲೇ ಸಾವೀಗೀಡಾಗಿದ್ದಾನೆ.
ಮನೋಸೋ ಇಚ್ಛೆ ದಾಳಿ ಮಾಡಿದ ನಂತ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. 2006ರಲ್ಲಿ ಲವ-ಕುಶ ಎಂಬುವವರನ್ನು ಹತ್ಯೆ ಮಾಡಿ ಹಂದಿ ಅಣ್ಣಿ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಮಲೆನಾಡಿನ ಜನರನ್ನು ಬೆಚ್ಚಿ ಬೀಳಿಸಿದ್ದ ಲವ-ಕುಶ ಸಹೋದರರನ್ನುತನ್ನ 20 ರ ಆಸುಪಾಸಿನಲ್ಲಿದ್ದಾಗಲೇ ತನ್ನ ಯುವ ಗ್ಯಾಂಗ್ ಮೂಲಕ ಸಾಗರ ರಸ್ತೆಯ ಗ್ಯಾರೇಜ್ ವೊಂದರಲ್ಲಿ ಲವ-ಕುಶರನ್ನು ಹಾಡ ಹಗಲೇ ಕೊಚ್ಚಿ ಹಾಕಿದ್ದನು.

ಎರಡು ವರ್ಷಗಳ ಹಿಂದೆ ಈತನ ತಮ್ಮ ಗಿರಿಯನ್ನು ರೌಡಿ ಅಜ್ರು ತಂಡ ಹತ್ಯೆಗೈದಿತ್ತು. ತನ್ನ ತಮ್ಮನನ್ನು ಕೊಂದ ಅಜ್ರು ಮತ್ತು ಆತನ ತಂಡವನ್ನು ಕೊಲೆ ಮಾಡಿ ತಮ್ಮನ ಆತ್ಮಕ್ಕೆ ಶಾಂತಿ ದೊರೆಕಿಸುತ್ತೇನೆ ಎಂದು ಶಪತ ಮಾಡಿದ್ದರು. ಆದರೆ ಇದೀಗ ತಾನೇ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದಾನೆ. ಇಷ್ಟು ದಿನ ಶಾಂತಿಯುತವಾಗಿದ್ದ ಶಿವಮೊಗ್ಗ ನೆಲದಲ್ಲಿ ಮತ್ತೆ ನೆತ್ತರು ಹರಿದಿದ್ದು, ಮತ್ತೆ ರಕ್ತಪಾತಕ್ಕೆ ದಾರಿ ಮಾಡಿಕೊಡಲಿದಿಯೇ ಎನ್ನುವ ಆತಂಕ ಎದುರಾಗಿದೆ.












Click it and Unblock the Notifications