ತಂದೆ ಸಾವಿನ ಅನುಕಂಪದಿಂದ ಶಾಸಕನಾದ ಮಧು ಬಂಗಾರಪ್ಪ: ಬಿವೈ ರಾಘವೇಂದ್ರ

ಶಿಕಾರಿಪುರ, ಜುಲೈ 26: ಸಂಸದ ಯಡಿಯೂರಪ್ಪ ಅವರ ವಿರುದ್ಧ ಮಾತಾಡುವ ನೈತಿಕ ಹಕ್ಕು ಮೊನ್ನೆಯಷ್ಟೇ ಸೊರಬ ಶಾಸಕನಾದ ಮಧು ಬಂಗಾರಪ್ಪಗೆ ಇಲ್ಲ ಎಂದು ತಮ್ಮ ತಂದೆ ಪರವಾಗಿ ಶಾಸಕ ಬಿವೈ ರಾಘವೇಂದ್ರ ಧ್ವನಿ ಎತ್ತಿದ್ದಾರೆ.

ಇಲ್ಲಿನ ಮಂಗಳ ಭವನದಲ್ಲಿ ಬಿಜೆಪಿ ವಿಸ್ತಾರಕರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಿದ್ದರು. ಪಂಪ್ ಸೆಟ್‌ಗೆ ಉಚಿತ ವಿದ್ಯುತ್‌ ವಿತರಣೆ, ಸುವರ್ಣ ಭೂಮಿ ಯೋಜನೆಯಂಥ ಹಲವು ರೈತಪರ ಯೋಜನೆಗಳನ್ನು ನೀಡಿದ್ದಾರೆ ಎಂದರು.

Madhu became MLA by his father death sympathy

ಆದರೆ, ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾದವರು ಹೆಂಡದ ದೊರೆಗಳ ಸಾಲ ಮನ್ನಾ ಮಾಡಿದ್ದರು ಎಂದು ಎಸ್.ಬಂಗಾರಪ್ಪ ಅವರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ಅಪ್ಪನ ಸಾವಿನ ನಂತರದ ಅನುಕಂಪದಿಂದಾಗಿ ಶಾಸಕನಾಗಿ ಮಧು ಬಂಗಾರಪ್ಪ ಗೆದ್ದು ಬಂದಿದ್ದಾರೆ ಎಂದರು.

ಜಿಲ್ಲೆ ಹಾಗೂ ತಾಲೂಕಿನಲ್ಲಿ ಬಿಜೆಪಿ ವಿಸ್ತಾರಕ ಯೋಜನೆ ಅನುಷ್ಠಾನ ಯಶಸ್ವಿಯಾಗಿ ನಡೆದಿದೆ. ರಾಜ್ಯದಲ್ಲಿ ಮತ್ತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದು, ಪಕ್ಷ ಸಂಘಟನೆಗೆ ಕಾರ್ಯಕರ್ತರು ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+