• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಕರ್ನಾಟಕ ಸಂಘದ 2013ರ ಪ್ರಶಸ್ತಿ ಘೋಷಣೆ

|
Google Oneindia Kannada News

ಶಿವಮೊಗ್ಗ, ಜೂ.13 : ಶಿವಮೊಗ್ಗದ ಕರ್ನಾಟಕ ಸಂಘವು 2013ನೇ ಸಾಲಿನ ಪುಸ್ತಕ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಕುವೆಂಪು ಪ್ರಶಸ್ತಿಗೆ ಸುಶೀಲಾ ಡೋಣೂರ ಅವರನ್ನು, ಎಂ.ಕೆ. ಇಂದಿರಾ ಪ್ರಶಸ್ತಿಗೆ ಬಿ.ವಿ.ಭಾರತಿ ಅವರನ್ನು, ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿಯನ್ನು ತಾರಿಣಿ ಶುಭದಾಯಿನಿ ಅವರಿಗೆ ನೀಡಲಾಗಿದೆ.

ಕರ್ನಾಟಕ ಸಂಘದ ಕಾರ್ಯದರ್ಶಿ ಡಾ. ನಾಗಭೂಷಣ ಪ್ರಶಸ್ತಿ ಬಿಡುಗಡೆ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಶಸ್ತಿಯು ತಲಾ ರೂ.5000 ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಈ ಪ್ರಶಸ್ತಿಗಳನ್ನು ಜುಲೈ 5ರಂದು ನಡೆಯುವ ಸಮಾರಂಭದಲ್ಲಿ ಲೇಖಕರಿಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ.

* ರಾಷ್ಟ್ರಕವಿ ಕುವೆಂಪು ಪ್ರಶಸ್ತಿ (ಕಾದಂಬರಿ) - ಸುಶೀಲಾ ಡೋಣೂರರವರ ನ್ಯಾನ್ಸಿ ಕಾದಂಬರಿ
* ಡಾ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ (ಅನುವಾದ) - ಆರ್.ಪಿ. ಹೆಗಡೆ ಆದಿ ಅನಾದಿ ಕೃತಿ
* ಎಂ. ಕೆ. ಇಂದಿರಾ ಪ್ರಶಸ್ತಿ (ಮಹಿಳಾ ಲೇಖಕಿ) - ಬಿ.ಬಿ.ಭಾರತಿ ಸಾಸಿವೆ ತಂದವಳು ಕೃತಿ
* ಪಿ.ಲಂಕೇಶ್‍ ಪ್ರಶಸ್ತಿ (ಮುಸ್ಲಿಂ ಲೇಖಕ) - ಗಿರಿರಾಜ್ ಕನಕಗಿರಿ ನೂರು ಗಲ್
* ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ ( ಕವನ ಸಂಕಲನ) - ತಾರಿಣಿ ಶುಭದಾಯಿನಿ ಅವರ ಪೂರ್ವಭಾಷಿ ಕವನ ಸಂಕಲ
* ಡಾ. ಹಾ.ಮಾ. ನಾಯಕ್ ಪ್ರಶಸ್ತಿ (ಅಂಕಣ ಬರಹ) - ಕೀರ್ತಿ ಕೋಲ್ಗಾರ್‍ ತೇಜಸ್ವಿ ಬದುಕಿದ್ದಾರೆ
* ಯು.ಆರ್.ಅನಂತಮೂರ್ತಿ ಪ್ರಶಸ್ತಿ ( ಸಣ್ಣ ಕಥೆ ) - ಮೌನೇಶ ಬಡಿಗೇರ ಮಾಯಾ ಕೋಲಾಹಲ ಕೃತಿ
* ಡಾ. ಕೆ.ವಿ. ಸುಬ್ಬಣ ಪ್ರಶಸ್ತಿ (ನಾಟಕ) - ಡಾ. ಪ್ರಕಾಶ ಗರುಡರವರ ಬೆತ್ತಲಾಟ ನಾಟಕ
* ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ (ಪ್ರವಾಸ ಕಥನ) - ಜಿ.ಎನ್. ಅಶೋಕವರ್ಧನ ಕುಮಾರ ಪರ್ವತದ ಸುತ್ತ ಮುತ್ತ
* ಹಸೂಡಿ ವೆಂಕಟ ಶಾಸ್ತ್ರಿ ಪ್ರಶಸ್ತಿ (ವೈಜ್ಞಾನಿಕ ಕೃತಿ) - ಡಾ. ಬಿ. ಎಸ್. ಶೈಲಜಾ ಬಾಲಂಕೃತ ಚುಕ್ಕಿ ಧೂಮಕೇತು
* ಡಾ. ನಾ. ಡಿಸೋಜ ಪ್ರಶಸ್ತಿ (ಮಕ್ಕಳ ಸಾಹಿತ್ಯ) - ಹ.ಸ. ಬ್ಯಾಕೋಡ ಹಾರದಿರಲಿ ಪ್ರಾಣಪಕ್ಷಿ
* ಡಾ. ಹೆಚ್.ಜಿ. ಚಂದ್ರಪ್ಪಗೌಡ ಪ್ರಶಸ್ತಿ (ವೈದ್ಯ ಸಾಹಿತ್ಯ) - ಡಾ. ಅಶಾ ಬೆನಕಪ್ಪ ಅಂತಃಕರಣ

English summary
Shimoga Karnataka Sangha announced 2013 Literary awards. Awards will be presented on July 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X