ಸಚಿವ ಕಿಮ್ಮನೆ ಸ್ಥಾನಕ್ಕೆ ಕಾಗೋಡು ತಿಮ್ಮಪ್ಪ ಬರ್ತಾರೆ?

ಶಿವಮೊಗ್ಗ, ಮೇ 14 : ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಮಾತು ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ಹಬ್ಬಿದೆ. ಪಕ್ಷ ಸಂಘಟನೆಯಲ್ಲಿ ವಿಫಲವಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಲೆದಂಡವಾಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.

ಸಾಗರ ಕ್ಷೇತ್ರದ ಶಾಸಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರಿಗೆ ಮಂತ್ರಿ ಪದವಿ ದೊರೆಯಲಿದೆ ಎಂಬ ಮಾತುಗಳು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕೇಳಿಬಂದಿತ್ತು. ಆದರೆ, ಜಿಲ್ಲೆಯಿಂದ ಕಿಮ್ಮನೆ ರತ್ನಾಕರ್ ಅವರಿಗೆ ಸಚಿವ ಸ್ಥಾನ ನೀಡಿ, ಕಾಗೋಡು ಅವರನ್ನು ಸ್ಪೀಕರ್ ಮಾಡಲಾಗಿತ್ತು. [ಫಲಿತಾಂಶದ ನಂತರ ಕಾಗೋಡು ಪದಚ್ಯುತಿ]

Kagodu Thimmappa

ಸದ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಸಚಿವ ಕಿಮ್ಮನೆ ರತ್ನಾಕರ್ ಅವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಸರಿಯಾಗಿ ತೊಡಗಿಸಿಕೊಂಡಿಲ್ಲ. ತಮ್ಮ ಕ್ಷೇತ್ರ ತೀರ್ಥಹಳ್ಳಿಗೆ ಮಾತ್ರ ಅವರು ಸೀಮಿತರಾಗಿದ್ದಾರೆ ಎಂಬ ಮಾತುಗಳಿವೆ. ಆದ್ದರಿಂದ ಅವರನ್ನು ಕೆಳಗಿಳಿಸಿ, ಕಾಗೋಡು ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. [ಸಚಿವರ ಖಾತೆಗಳಲ್ಲಿ ಬದಲಾವಣೆ]

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಈ ಕುರಿತು ಪಕ್ಷ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿ ಎರಡು ಅಥವ ಮೂರನೇ ಸ್ಥಾನಕ್ಕೆ ಕುಸಿದರೆ ಕಿಮ್ಮನೆ ರತ್ನಾಕರ್ ತಲೆದಂಡವಾಗುವುದು ಖಚಿತ ಎಂಬುದು ಶಿವಮೊಗ್ಗ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಕಿಮ್ಮನೆ ರತ್ನಾಕರ್ ಪ್ರಾಮಾಣಿಕರು, ದಕ್ಷರು ಎಂಬುದು ಸತ್ಯ ಆದರೆ, ಪಕ್ಷ ಸಂಘಟನೆ ಮಾಡಿಲ್ಲ, ಕ್ಷೇತ್ರಕ್ಕೆ ವಿಶೇಷ ಅನುದಾನ ತಂದಿಲ್ಲ ಎಂದು ಹಲವಾರು ವೈಫಲ್ಯಗಳನ್ನು ಜಿಲ್ಲಾ ಕಾಂಗ್ರೆಸ್ ನಾಯಕರು ಪಟ್ಟಿ ಮಾಡಿದ್ದಾರೆ. ಆದ್ದರಿಂದ ಕಾಗೋಡು ಅವರಿಗೆ ಮಂತ್ರಿ ಸ್ಥಾನ ನೀಡಿ ಕಿಮ್ಮನೆ ಅವರನ್ನು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸಕ್ಕೆ ನಿಯೋಜಿಸುವುದು ನಾಯಕರ ಆಲೋಚನೆಯಾಗಿದೆ.

ಕೃಷ್ಣ ಬಣದ ಸದಸ್ಯರು : ಕಿಮ್ಮನೆ ರತ್ನಾಕರ್ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತವನ್ನು ಆಧಾರವಾಗಿಟ್ಟುಕೊಂಡು ಕಿಮ್ಮನೆ ಅವರನ್ನು ಕೆಳಗಿಳಿಸಬಹುದು ಎಂಬ ಮಾತುಗಳಿವೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಕಳುಹಿಸಿರುವ ತಂಡ ಸಿದ್ಧಪಡಿಸಿದ ವರದಿಯಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಅವರ ಹೆಸರಿದೆ. ಲೋಕಸಭೆ ಚುನಾವಣೆ ನಂತರ ಸಚಿವರ ಖಾತೆ ಬದಲಾವಣೆಯಾಗುತ್ತದೆ ಎಂಬ ಮಾತು ಕೆಪಿಸಿಸಿ ವಲಯದಲ್ಲೂ ಗಾಢವಾಗಿ ಹಬ್ಬಿದೆ. ಸಚಿವರ ಕಾರ್ಯ ವೈಖರಿ ವರದಿ ರಾಹುಲ್ ಗಾಂಧಿ ಕೈ ಸೇರಿದ್ದು, ಅದರ ಅನ್ವಯ ಅವರು ಮುಂದಿನ ಕ್ರಮ ಕೈಗೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+