ಉಕ್ಕು ಕಾರ್ಖಾನೆ ಉಳಿಸಲು ಸರ್ವ ಪ್ರಯತ್ನ, ಜಾತಿ ಆಧಾರಿತ ಹೇಳಿಕೆಗಳಿಗೆ ಬೆಲೆ ಇಲ್ಲ

ಮಹತ್ವದ ಕಾರ್ಖಾನೆಯಾದ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (VISL) ಅನ್ನು ಉಳಿಸಲು ಸರ್ವ ಪ್ರಯತ್ನ ಮಾಡಲಾಗುವುದು. ಜಾತಿ ಆಧಾರಿತ ಹೇಳಿಕೆಗಳಿಗೆ ಬೆಲೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇಕೆ?

ಶಿವಮೊಗ್ಗ, ಫೆಬ್ರವರಿ 08: ಮಹತ್ವದ ಕಾರ್ಖಾನೆಯಾದ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (VISL) ಅನ್ನು ಉಳಿಸಲು ಸರ್ವ ಪ್ರಯತ್ನಗಳನ್ನು ನಾವು ಮಾಡಲಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (VISL) ಕಾರ್ಮಿಕರ ನಿಯೋಗದೊಂದಿಗೆ ಮಾತನಾಡಿದ ಅವರು ಈ ಭರವಸೆಯನ್ನು ನೀಡಿದರು. ಜಾಗತೀಕರಣದ ಪರಿಣಾಮವಾಗಿ ಸಾಕಷ್ಟು ಸಾರ್ವಜನಿಕ ಸಂಸ್ಥೆಗಳು ಮುಚ್ಚಿವೆ . ಅದೇ ರೀತಿ ಈ ಕಾರ್ಖಾನೆ ಸಹ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದಿಂದ ಉಳಿದುಕೊಂಡು ಸಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಡಿಸ್ಇನ್ವೆಸ್ಟ್ ಮೆಂಟ್ ಯೊಜನೆ ಅಡಿಯಲ್ಲಿ ಈ ಕಾರ್ಖಾನೆ ಮುಚ್ಚಲು ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ‌ ಇದೆ. ಜಿಂದಾಲ್ ಸಂಸ್ಥೆ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರಬೇಕಾದರೆ, ಈ ಸಂಸ್ಥೆ ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಕ್ಲೋಸರ್ ಪ್ರಕ್ರಿಯೆ ನಿಲ್ಲಿಸಲು ಪ್ರಯತ್ನ ಮಾಡಲಾಗುವುದು. ಬೇರೆ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.

Efforts To Save Visvesvaraya Steel And Iron Factory, Caste-Based Statements Are Priceless

ಜಾತಿ ಆಧಾರದ ಹೇಳಿಕೆಗಳಿಗೆ ಬೆಲೆ ಇಲ್ಲ: ಸಿಎಂ

ಕರ್ನಾಟಕ ರಾಜ್ಯ ರಚನೆಯಾಗಿ 75 ವರ್ಷ ಕಳೆದಿದ್ದೇವೆ. ಜನ ಜಾತಿ ಆಧಾರದ ಮೇಲೆ ಮಾಡಿದ ಹೇಳಿಕೆಗಳಿಗೆ ಕಿಮ್ಮತ್ತು ನೀಡುವುದಿಲ್ಲ. ಆದ್ದರಿಂದ ಜನರಿಗೆ ಹಿಡಿಸದೇ ಇರುವುದನ್ನು ಮಾತನಾಡಬಾರದು. ಅಂತಹ ಹೇಳಿಕೆಗಳಿಗೆ ನಾವು ಬೆಲೆ ಕೊಡುವುದಿಲ್ಲ ಎಂದರು.

ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರ ಜಾತಿ ಆಧಾರಿತ ಹೇಳಿಕೆಗಳಿಗೆ ಉತ್ತರಿಸಲ್ಲ. ನಾಡಿನ ಜನರು ಬಿಜೆಪಿ ಕಾರ್ಯವೈಖರಿ ನೋಡಿದ್ದಾರೆ. ಅವರೇ ಎಲ್ಲವನ್ನು ತೀರ್ಮಾನ ಮಾಡುತ್ತಾರೆ. ತಮ್ಮ ಬದುಕಿಗೆ ಯಾರು ಸಹಾಯ ಮಾಡಿದ್ದಾರೆಂದು ಜನರಿಗೆ ಗೊತ್ತಿದೆ. ಮತದಾರರು ಬುದ್ಧಿವಂತರು, ಪ್ರಬುದ್ಧರು. ಮತದಾರರ ಮುಂದೆ ಸಣ್ಣ ಪುಟ್ಟ ಜಾತಿ ಮಾತುಗಳು ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿರುಗೇಟು ವ್ಯಂಗ್ಯವಾಡಿದರು.

Efforts To Save Visvesvaraya Steel And Iron Factory, Caste-Based Statements Are Priceless

ಜಾರಿ ಆಧಾರತಿ ಹೇಳಿಕೆಗಳಿಂದ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಸಿರಿಯಾ ಮತ್ತು ಟರ್ಕಿಯಲ್ಲಿ ನಡೆದ ಭೂಕಂಪದಲ್ಲಿ ಸಂಸತ್ರಸ್ತರಾಗಿರುವ ಕನ್ನಡಿಗರಿಗೆ ಸಹಾಯ ಮಾಡಲು ಈಗಾಗಲೇ ಸಹಾಯವಾಣಿ ಸ್ಥಾಪನೆಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅವರು ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+