ಭಾರತೀಯ ದಂತ ವೈದ್ಯಕೀಯ ಶಿವಮೊಗ್ಗ ಘಟಕದ ಪದಾಧಿಕಾರಿಗಳ ಆಯ್ಕೆ

ಶಿವಮೊಗ್ಗ, ಫೆಬ್ರವರಿ 11: ಭಾರತೀಯ ದಂತ ವೈದ್ಯಕೀಯ ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಡಾ.ಶಿವಕುಮಾರ್, ಕಾರ್ಯದರ್ಶಿಯಾಗಿ ಡಾ.ಕ್ಸೇವಿಯರ್ ಪ್ರದೀಪ್ ಡಿಮೆಲ್ಲೋ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಡಾ.ಅರವಿಂದ ಗೋಪಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಡಾ.ದೀಪಕ್ ಎಸ್.ವಿ, ಡಾ.ನಂದಕಿಶೋರ್, ಜಂಟಿ ಕಾರ್ಯದರ್ಶಿಯಾಗಿ ಡಾ.ಕೀರ್ತಿಲತಾ, ಸಹ ಕಾರ್ಯದರ್ಶಿಯಾಗಿ ಡಾ.ಹೇಮಾ ಆಯ್ಕೆಯಾಗಿದ್ದಾರೆ. ರಾಜ್ಯ ಪ್ರತಿನಿಧಿಗಳಾಗಿ ಡಾ.ರಾಘವೇಂದ್ರ, ಡಾ.ಅರವಿಂದ ಗೋಪಾಲ್, ಡಾ.ದಯಾನಂದ್, ಡಾ.ಹರೀಶ್, ಡಾ.ಮಂಜುನಾಥ ಕೊಪ್ಪದ್ ಅವರನ್ನು ನೇಮಕ ಮಾಡಲಾಗಿದೆ.

ಇಸಿ ಸದಸ್ಯರಾಗಿ ಡಾ.ಮಹೇಶ್, ಡಾ.ಸುನಿಲ್, ಡಾ.ಜೈಭಾರತ್ ರೆಡ್ಡಿ, ಡಾ.ಭರತ್, ಡಾ.ವಿಕ್ರಂ, ಡಾ.ವೀರಭದ್ರ ಆಯ್ಕೆಗೊಂಡಿದ್ದಾರೆ. ಸಿಡಿಇ ಮುಖ್ಯಸ್ಥರಾಗಿ ಡಾ.ರಮೇಶ್, ಸಿಡಿಎಚ್ ಮುಖ್ಯಸ್ಥರಾಗಿ ಡಾ.ಸಾತ್ವಿಕ್ ಮತ್ತು 2021 ಸಾಲಿನ ಅಧ್ಯಕ್ಷರಾಗಿ ಡಾ.ದೀಪಕ್ ಜೆ.ಆರ್ ಅವರನ್ನು ಆಯ್ಕೆ ಮಾಡಲಾಗಿದೆ.

Dr. Shivakumar Selected As New President Of Indian Dental Association Shivamogga Unit

ದಂತ ವೈದ್ಯಕೀಯ ಸಂಘದ ಸಭೆ: ಶಿವಮೊಗ್ಗದ ಜೆಎನ್ಸಿ ಇಂಜನಿಯರಿಂಗ್ ಕಾಲೇಜ್ ಸಮೀಪವಿರುವ ದಂತ ವೈದ್ಯಕೀಯ ಕಚೇರಿ ಸಭಾಂಗಣದಲ್ಲಿ ನಡೆದ ಶಿವಮೊಗ್ಗ ದಂತ ವೈದ್ಯಕೀಯ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸರ್ವ ಸದಸ್ಯರ ಸಹಭಾಗಿತ್ವದಲ್ಲಿ ಎಲ್ಲಾ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಈ ವೇಳೆ ದಂತ ವೈದ್ಯರ ಸಮಸ್ಯೆಗಳು, ವೈದ್ಯಕೀಯ ರಂಗದ ಸವಾಲುಗಳು ನಡುವೆ ಸಂಘಟನೆಯನ್ನು ಗಟ್ಟಿಗೊಳಿಸಲು ತೀರ್ಮಾನಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+