ಶಿವಮೊಗ್ಗ ಮಳೆ ಪ್ರಮಾಣ ಮತ್ತು ಜಲಾಶಯಗಳ ಮಟ್ಟ...
ಶಿವಮೊಗ್ಗ, ಅಕ್ಟೋಬರ್ 15: ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮಳೆ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 459.00 ಮಿ.ಮೀ. ಮಳೆಯಾಗಿದೆ. ಸರಾಸರಿ 65.57 ಮಿ.ಮಿ. ಮಳೆ ದಾಖಲಾಗಿದೆ.
ಅಕ್ಟೋಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 143.14 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 118.83 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ 40.60 ಮಿ.ಮೀ, ಭದ್ರಾವತಿ 18.40, ತೀರ್ಥಹಳ್ಳಿ 55.40, ಸಾಗರ 64.00, ಶಿಕಾರಿಪುರ 24.80, ಸೊರಬ 47.00 ಹಾಗೂ ಹೊಸನಗರ 208.80 ಮಿ.ಮೀ. ಮಳೆ ದಾಖಲಾಗಿದೆ. ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಜಲಾಶಯಗಳ ಒಳ ಹರಿವಿನಲ್ಲೂ ಹೆಚ್ಚಳವಾಗಿದೆ. ಭದ್ರಾ ಜಲಾಶಯ ಭರ್ತಿಯಾಗಿದ್ದು, ಇಂದು ಮುಂಜಾನೆ ನದಿಗೆ 8251 ಕ್ಯೂಸೆಕ್ ನೀರನ್ನು ಹರಿಸಲಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ
ಲಿಂಗನಮಕ್ಕಿ: 1819 (ಗರಿಷ್ಠ), 1814.40 (ಇಂದಿನ ಮಟ್ಟ), 50531.00 (ಒಳಹರಿವು), 2030.52 (ಹೊರಹರಿವು).

ಭದ್ರಾ: 186 (ಗರಿಷ್ಠ), 185.11 (ಇಂದಿನ ಮಟ್ಟ), 14304.00 (ಒಳಹರಿವು), 8251.00 (ಹೊರಹರಿವು).
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 25127.00 (ಒಳಹರಿವು), 25127.00 (ಹೊರಹರಿವು).
ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 589.04 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 2914 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಪಿಕ್ ಅಪ್: 563.88 (ಎಂಎಸ್‍ಎಲ್ ಗಳಲ್ಲಿ), 562.90 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 1170 (ಒಳಹರಿವು), 585.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್ ಗಳಲ್ಲಿ), 571.18 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 3268.00 (ಒಳಹರಿವು), 665 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್ ಗಳಲ್ಲಿ), 578.84 (ಇಂದಿನ ಮಟ್ಟ ಎಂ.ಎಸ್.ಎಲ್ ನಲ್ಲಿ), 1671.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).












Click it and Unblock the Notifications