ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಸಚಿವೆ ಅಮಾನತು
ಶಿವಮೊಗ್ಗ, ಜುಲೈ 1: ಕುವೆಂಪು ವಿಶ್ವವಿದ್ಯಾಲಯದ (ಸ್ವಪ್ರ) ದಾಸ್ತಾನು ಮತ್ತು ಖರೀದಿ ವಿಭಾಗದ ಉಪಕುಲಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದ ಡಿ.ವಿ.ಗಾಯಿತ್ರಿ ಅವರನ್ನು ವಿ.ವಿಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಮಾನತುಗೊಳಿಸಿ ಆದೇಶಿಸಿದ್ದಾರೆ.
Recommended Video
Corona updates,Mysore : ಹೆಚ್ಚಾದ ಸೋಂಕು, ಮೈಸೂರಿನಲ್ಲಿ ಬದಲಾದ ಕರ್ಫ್ಯೂ ಸಮಯ | Oneindia Kannada
ಡಿ.ವಿ ಗಾಯಿತ್ರಿಯವರು ಸುಳ್ಳು ಪ್ರಮಾಣ ಪತ್ರ ದಾಖಲು ನೀಡಿ ಪ್ರಥಮ ದರ್ಜೆ ನೌಕರಿಯ ಕೆಲಸ ಪಡೆದುಕೊಂಡಿದ್ದಾರೆ ಹಾಗೂ ತೀರ್ಥಹಳ್ಳಿ ತಹಶೀಲ್ದಾರ್ ಈ ಪ್ರಮಾಣ ಪತ್ರ ನೀಡಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ದೂರುಗಳು ವಿವಿಗೆ ಬಂದಿದ್ದವು. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿತ್ತು. ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಈ ಸಂಬಂಧ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಡಿ.ವಿ.ಗಾಯಿತ್ರಿಯವರನ್ನು ಜೂ.29 ರಂದು ಅಮಾನತುಗೊಳಿಸಿ ಆದೇಶಿಸಿದ್ದಾರೆ.












Click it and Unblock the Notifications