ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷದ ಮುಖಂಡರ ಮಗಳ ಕಿಡಿ

Recommended Video

      ಬಿ ಎಸ್ ಯಡಿಯೂರಪ್ಪ ದೂರದ ಸಂಬಂಧಿ, ಸೊಸೆ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ವಿರುದ್ಧ ಗರಂ | Oneindia Kannada

      ಶಿವಮೊಗ್ಗ, ನವೆಂಬರ್ 22: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಕಾಣಿಸುತ್ತಿದೆ.

      ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ದೂರದ ಸಂಬಂಧಿ ಮತ್ತು ಮಾಜಿ ಶಾಸಕ ಎಸ್‌ ಐ ಚಿಕ್ಕನಗೌಡರ ಅವರ ಮಗಳು ನಂದಾ, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.

      ಫೇಸ್‌ಬುಕ್‌ನಲ್ಲಿ ನಂದಾ ಅವರು ಮಾಡಿರುವ ಪೋಸ್ಟ್ ತೀವ್ರ ಚರ್ಚೆಗೆ ಒಳಗಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಇಬ್ಬರು ಪ್ರಮುಖ ನಾಯಕರ ನಡುವಿನ ಸಂಬಂಧದ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

      ತಮ್ಮ ತಂದೆ, ಎಸ್‌ ಐ ಚಿಕ್ಕನಗೌಡ್ರ ಅವರ ಸೋಲಿಗೆ ಕಾರಣರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿಎಸ್ ಶಿವಳ್ಳಿ ಅವರ ಪರವಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ ಜತೆಗೆ ನಂಟು ಹೊಂದಿರುವುದಕ್ಕೆ ಪ್ರಹ್ಲಾದ್ ಜೋಶಿ ವಿರುದ್ಧ ನಂದಾ ಅವರು ಫೇಸ್ ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಮಾನ್ಯ ಸಂಸದರೇ ಏನಿದು?? ನಿಮ್ಮ ಪಕ್ಷವಾದ ಭಾ.ಜ.ಪ ಕ್ಕೇ ಮೋಸ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡ್ತಿರಿ... ನಾವು ಪ್ರೂಫ್ ಸಮೇತ ಕೆಲವು ಮುಖಂಡರು ಕಾಂಗ್ರೆಸ್ ಗೆ ಬೆಂಬಲಿಸುವಂತೆ ಪ್ರಚಾರ ಮಾಡಿದ್ದನ್ನು ಸಿ ಡಿ ಯಲ್ಲಿ ಹಾಗೂ ಲಿಖಿತವಾಗಿ ಅವರೆಲ್ಲರನ್ನು ಪಕ್ಷದಿಂದ ವಜಾ ಮಾಡ್ಬೇಕಾಗಿ ಕೇಳಿಕೊಂಡಿದ್ದೆವು. ಆದರೆ ಅದನ್ನು ಮಾಡುವುದು ಬಿಟ್ಟು ನೀವು ಅದೇ ಮೋಸಗಾರರ ಗ್ಯಾಂಗ್ ಕಟ್ಟಿಕೊಂಡು ಕಾರ್ಯಕ್ರಮಗಳನ್ನ ಮಾಡ್ತೀರಲ್ಲಾ... pls answer me, why didn't you take action on those persons?? ಎಂದು ನಂದಾ ಪ್ರಶ್ನಿಸಿದ್ದಾರೆ.

      bsy relative nanda slams bjp mp prahlad joshi

      ಬಿ ಜೆ ಪಿ ಯ ನಿಜವಾದ ಕಾರ್ಯಕರ್ತರು ಹಾಗು ಮತದಾರರಿಗೆ ಬೆಲೆ ಇಲ್ಲವಾ?? ನಿಮ್ಮ ಮೇಲೆ ನನಗೆ ತುಂಬಾ ಗೌರವವಿದೆ... ಚಿಕ್ಕ ವಯಸ್ಸಿಂದ ನಿಮ್ಮನ್ನ ನೋಡ್ತ ಇದ್ದೀನಿ... ಆದರೆ ಯಾವುದೋ ಗುಂಪಿನ ಹಿತಾಸಕ್ತಿಗೆ ಕುಂದಗೋಳ್ದಲ್ಲಿ ಬಿ ಜೆ ಪಿ ಸೋಲುವ ಹಾಗೆ ಮಾಡಿದ್ದು ವಿಪರ್ಯಾಸ... ಅದೇನೆ ಆಗಲಿ, ಪಕ್ಷ ಎಂದ ಮೇಲೆ ನಾವೆಲ್ಲ ಒಂದೆ ಎನ್ನಬೇಕಲ್ಲವೇ? ಅಧಿಕಾರ ಶಾಶ್ವತವಲ್ಲ ಆದ್ರೆ ನಿಮಗೂ ಅದೇ ರೀತಿ ಆದ್ರೆ ಹೇಗೆ ಇರುತ್ತೆ ಯೋಚನೆ ಮಾಡಿ

      ಆ ದ್ರೋಹಿಗಳನ್ನ ಪಕ್ಷದಿಂದ ಕಿತ್ತೊಗೆಯೊವರೆಗೂ ನಮಗೆ ಸಮಾಧಾನ ಇಲ್ಲ... ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ನಂದಾ ಹೇಳಿದ್ದಾರೆ.

      ನಂದಾ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಸಂಬಂಧದಲ್ಲಿ ಸೊಸೆಯಾಗಬೇಕು. ಅವರ ಪೋಸ್ಟ್ ಸಾಕಷ್ಟು ಚರ್ಚೆಗೀಡುಮಾಡಿದೆ.

      'ನಾನು ಈ ಪ್ರಶ್ನೆಯನ್ನು ಯಡಿಯೂರಪ್ಪ ಸೊಸೆಯಾಗಿ ಅಲ್ಲ, ಚಿಕ್ಕನಗೌಡ್ರ ಮಗಳಾಗಿ ಕೇಳಿದ್ದೇನೆ' ಎಂದು ಅವರು ಫೇಸ್ ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+