ಕಾಡಾನೆ, ಮಂಗವನ್ನು ಮನೆಯಲ್ಲಿ ಸಾಕಿಕೊಳ್ಳಲಿ; ರಾಘವೇಂದ್ರ
ಶಿವಮೊಗ್ಗ, ಅಕ್ಟೋಬರ್ 22 : "ಪರಿಸರವಾದಿಗಳಿಗೆ ಕಾಡು ಪ್ರಾಣಿಗಳ ಬಗ್ಗೆ ಅಷ್ಟು ಪ್ರತಿ ಇದ್ದರೆ ತಮ್ಮ ಮನೆಗಳಲ್ಲಿ ಕಾಡಾನೆ, ಕಾಡುಕೋಣ, ಮಂಗಗಳನ್ನು ಸಾಕಿಕೊಳ್ಳಲಿ" ಎಂದು ಶಿವಮೊಗ್ಗ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಮಂಗಳವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮಳೆಹಾನಿ ಕುರಿತು ಅವರು ಪರಿಶೀಲನೆ ನಡೆಸಿದರು. ಮಂಕಿ ಪಾರ್ಕ್ ಬಗ್ಗೆ ಪರಿಸರವಾದಿಗಳ ಪ್ರತಿಕ್ರಿಯೆ ಬಗ್ಗೆ ಮಾತನಾಡಿದರು.
"ಪರಿಸರವಾದಿಗಳ ನೀತಿ ಸರಿ ಇದೆ. ಆದರೆ, ಪರಿಸರ, ಪ್ರಾಣಿಗಳ ಬಗ್ಗೆ ಅವರಿಗೆ ಕಾಳಜಿ ಇದ್ದರೆ ತಮ್ಮ ಮನೆಗಳಲ್ಲಿಯೂ ಕೂಡ ಕಾಡಾನೆ, ಕಾಡು ಕೋಣ, ಮಂಗಗಳನ್ನು ಒಂದೊಂದು ಸಾಕಿಕೊಳ್ಳಲಿ" ಎಂದರು.

"ಕಾಡು ಪ್ರಾಣಿಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ರೈತರು ಮಂಕಿ ಪಾರ್ಕ್ ನಿರ್ಮಾಣ ಮಾಡಲು ಮನವಿ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಂದು ಮಂಕಿ ಪಾರ್ಕ್ ನಿರ್ಮಾಣ ಮಾಡುವ ಕುರಿತು ಚರ್ಚಿಸಲು ನವೆಂಬರ್ 5 ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ" ಎಂದರು.
"ಅಸ್ಸಾಂ ರಾಜ್ಯದಲ್ಲಿ ಇದೆ ರೀತಿ ಒಂದು ಮಂಕಿ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದರ ಪರಿಶೀಲನೆಗೆ ತಂಡವನ್ನು ಕಳುಹಿಸಲಾಗುವುದು. ದ್ವೀಪದ ಪ್ರದೇಶದಲ್ಲಿ ಮಂಗಳನ್ನು ಬಿಟ್ಟು ಆಹಾರವನ್ನು ಪೂರೈಕೆ ಮಾಡಲಾಗುವುದು. ರೈತರ ಹಿತಕ್ಕಾಗಿ ಈ ರೀತಿಯ ಯೋಜನೆ ರೂಪಿಸಲಾಗುದು" ಎಂದು ಬಿ. ವೈ. ರಾಘವೇಂದ್ರ ವಿವರಣೆ ನೀಡಿದರು.












Click it and Unblock the Notifications