ಗೀತಾ ಗೆಲುವು; ಟ್ರಾಕ್ಟರ್ ಪಣಕ್ಕಿಟ್ಟ ವಿಜಯೇಂದ್ರ ತವರು ಕ್ಷೇತ್ರದ ರೈತ!
ಶಿವಮೊಗ್ಗ, ಮೇ 14: ಈ ಬಾರಿಯ ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಸಹ ಒಂದು. ಮೇ 7ರಂದು ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಶೇ 76.05ರಷ್ಟು ಮತದಾನವಾಗಿದ್ದು, ಫಲಿತಾಂಶದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಶಿವಮೊಗ್ಗದಲ್ಲಿ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿ. ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಪುತ್ರನಿಗೆ ಹಾವೇರಿ ಟಿಕೆಟ್ ಕೈ ತಪ್ಪಿದ ಬಳಿಕ ಅಸಮಾಧಾನಗೊಂಡ ಕೆ. ಎಸ್. ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಕಣಕ್ಕಿಳಿದರು.

ಲೋಕಸಭೆ ಚುನಾವಣೆ ಮತ ಎಣಿಕೆ ಜೂನ್ 4ರಂದು ನಡೆಯಲಿದೆ. ಆದರೆ ಈಗಲೇ ಶಿವಮೊಗ್ಗದಲ್ಲಿ ಯಾರಿಗೆ ಗೆಲುವು? ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಬೆಟ್ಟಿಂಗ್ ಸಹ ನಡೆಯುತ್ತಿದ್ದು, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಪರಸ್ಪರ ಸವಾಲು ಹಾಕಿ ನಿಂತಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಗೆಲುವು?; ಮೂರು ಬಾರಿ ಗೆಲುವು ಕಂಡಿರುವ ಬಿ. ವೈ. ರಾಘವೇಂದ್ರ ಈ ಬಾರಿಯೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಹ ಈ ಬಾರಿ ಗೆಲುವು ನಮ್ಮದು ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ ಶಿವಮೊಗ್ಗ ಕ್ಷೇತ್ರ ಕೈವಶವಾಗಲಿದೆ ಎಂದು ಭರವಸೆ ಹೊಂದಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಮೊದಲ ಬಾರಿಗೆ ಸಂಸದರಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತವರು ಕ್ಷೇತ್ರ ಶಿಕಾರಿಪುರದ ರೈತರೊಬ್ಬರು ಗೀತಾ ಗೆಲುವು ಖಚಿತ ಎಂದು ಹೇಳಿದ್ದು, ಟ್ರಾಕ್ಟರ್ ಪಣಕ್ಕಿಟ್ಟಿದ್ದಾರೆ.
ಶಿಕಾರಿಪುರದ ರವೀಂದ್ರ ಎಂಬ ರೈತ ಗೀತಾ ಶಿವರಾಜ್ ಕುಮಾರ್ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ. ಟ್ರಾಕ್ಟರ್ ಪಣಕ್ಕೆ ಇಟ್ಟಿದ್ದೇನೆ ಎಂದು ಬಿಜೆಪಿ ಕಾರ್ಯಕರ್ತರರಿಗೆ ಸವಾಲು ಹಾಕಿದ್ದಾರೆ. ಯಾರು ಗೆಲ್ಲುತ್ತಾರೆ? ಎಂದು ತಿಳಿಯಲು ಜೂನ್ 4ರ ತನಕ ಕಾಯಬೇಕಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ 7,29,872 ಮತಗಳನ್ನು ಪಡೆದು ಸುಮಾರು ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ.
ಆದರೆ ಕಾಂಗ್ರೆಸ್‌ನ 5 ಗ್ಯಾರಂಟಿ ಯೋಜನೆಗಳು, ಸಚಿವ ಮಧು ಬಂಗಾರಪ್ಪ ಪ್ರಭಾವ, ಎಸ್. ಬಂಗಾರಪ್ಪ ಕುಟುಂಬದ ವರ್ಚಸ್ಸು, ಅಬ್ಬರದ ಪ್ರಚಾರ, ಕೆ. ಎಸ್. ಈಶ್ವರಪ್ಪ ಸ್ಪರ್ಧೆಯಿಂದಾಗಿ ಗೀತಾ ಶಿವರಾಜ್ ಕುಮಾರ್ ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹೇಳುತ್ತಿದ್ದಾರೆ.
ಈ ಬಾರಿಯ ಶಿವಮೊಗ್ಗದ ಚುನಾವಣೆ ಎಸ್. ಬಂಗಾರಪ್ಪ, ಬಿ. ಎಸ್. ಯಡಿಯೂರಪ್ಪ ಕುಟುಂಬದ ನಡುವಿನ ಪ್ರತಿಷ್ಠೆಯಾಗಿತ್ತು. ಆದರೆ ಹಾವೇರಿಯಲ್ಲಿ ಪುತ್ರ ಕೆ. ಇ. ಕಾಂತೇಶ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿತು ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು.
ಅಮಿತ್ ಶಾ ಸೇರಿದಂತೆ ಯಾವ ನಾಯಕರ ಮನವೊಲಿಕೆಗೂ ಬಗ್ಗದೇ ನಾಮಪತ್ರ ವಾಪಸ್ ಪಡೆಯದೇ ಚುನಾವಣಾ ಕಣದಲ್ಲಿ ಉಳಿದರು. ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆಗೊಂಡರು. ಕೆ. ಎಸ್. ಈಶ್ವರಪ್ಪ ಬಿ. ವೈ. ರಾಘವೇಂದ್ರ, ಗೀತಾ ಶಿವರಾಜ್ ಕುಮಾರ್ ಇವರಲ್ಲಿ ಯಾರ ಮತಗಳನ್ನು ಸೆಳೆಯಲಿದ್ದಾರೆ? ಎಂಬುದು ಚುನಾವಣಾ ಫಲಿತಾಂಶದ ಚಿತ್ರಣವನ್ನು ತೀರ್ಮಾನಿಸಲಿದೆ.
ಶಿವಮೊಗ್ಗದ ಈ ಬಾರಿಯ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಸೊರಬದ ಶಾಸಕ, ಸಚಿವ ಮಧು ಬಂಗಾರಪ್ಪ ಪ್ರತಿಷ್ಠೆ ಅಡಗಿದೆ. ಶಿವಮೊಗ್ಗದಲ್ಲಿ ಗೆಲುವು ಯಾರಿಗೆ? ಎಂದು ತಿಳಿಯಲು ಜೂನ್ 4ರ ತನಕ ಕಾಯಬೇಕಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications