ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡ: ಪೊಲೀಸರು ನೆಟ್ಟಗಿದ್ದಿದ್ದರೆ ಹರ್ಷ ಉಳಿಯುತ್ತಿದ್ದ

ಬೆಂಗಳೂರು, ಫೆ. 21: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಶಿವಮೊಗ್ಗ ನಗರದಲ್ಲಿ "ಯಾವುದೇ ಕ್ಷಣ ಅವಘಡ ಸಂಭವಿಸಬಹುದು. ಬಹುದೊಡ್ಡ ಕೋಮು ಸಂಘರ್ಷಕ್ಕೆ ಕಾರಣವಾಗಬಹುದು'' ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಾನವತಾವಾದ, ಸಮಾಜವಾದ, ವಿಶ್ವ ಮಾನವ ತತ್ವದ ತವರು ಶಿವಮೊಗ್ಗ ಈಗ ಕೋಮು ಸಂಘರ್ಷದ ಕೇಂದ್ರ ಬಿಂದು. ಹಲವು ವರ್ಷಗಳಿಂದ ಇಲ್ಲಿ ನಡೆದ ಘಟನೆಗಳು ಒಂದೆಡೆ ಹಿಂದೂ ಮೂಲಭೂತವಾದಿಗಳು ಹಾಗೂ ಮುಸ್ಲಿಂ ಮೂಲಭೂತ ವಾದಿಗಳು ಪ್ರತಿಕಾರ ತೀರಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿವೆ. ಅದರಲ್ಲೂ ಯುವ ಸಮೂಹವೇ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ಈ ಹಿಂದೆ ಕೋಮು ಸೌಹಾರ್ದ ಕೆಡಿಸುವ ಅನೇಕ ಘಟನೆಗಳು ಇಲ್ಲಿ ಮರುಕಳಿಸಿವೆ. ಹರ್ಷ ಕೊಲೆ ಪ್ರಕರಣ ಹುಟ್ಟು ಹಾಕಿರುವ ಪರಿಸ್ಥಿತಿ ನೋಡಿದರೆ ರಾಜ್ಯ ಪೊಲೀಸ್ ಇಲಾಖೆ ಶಿವಮೊಗ್ಗ ತುರ್ತು ರಕ್ಷಣೆಗೆ ಈಗಲೇ ಮತ್ತಷ್ಟು ಪೊಲೀಸ್ ತುಕಡಿಗಳನ್ನು ಇಳಿಸಬೇಕು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಶಿವಮೊಗ್ಗ ಪೊಲೀಸರ ಮೇಲೆ ನಂಬಿಕೆ ಇಲ್ಲ:

ಶಿವಮೊಗ್ಗ ಪೊಲೀಸರ ಮೇಲೆ ನಂಬಿಕೆ ಇಲ್ಲ:

ಇವತ್ತು ಎಲ್ಲಾ ರಾಜಕೀಯ ಒತ್ತಡಗಳನ್ನು ಮೀರಿ ಕೆಲಸ ಮಾಡುವ ಖಡಕ್ ಪೊಲೀಸ್ ಅಧಿಕಾರಿಗಳೇ ಕಡಿಮೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮಿನಿಟ್ ಕಲ್ಚರ್‌ಗೆ ಖಡಕ್ ಅಧಿಕಾರಿಗಳು ಎನಿಸಿಕೊಂಡವರು ಮೂಲೆಗುಂಪು ಸೇರಿದ್ದಾರೆ. ರಾಜಕಾರಣಿಗಳ ಮೂಗಿನ ನೇರಕ್ಕೆ ಕೆಲಸ ಮಾಡುವ ವರ್ಗವಷ್ಟೇ ಖಾಕಿ ತೊಟ್ಟುವ ಪರಿಸ್ಥಿತಿಯಿದೆ. ಇದಕ್ಕೆ ಶಿವಮೊಗ್ಗ ನಗರ ಕೂಡ ಹೊರತಾಗಿಲ್ಲ. ಹೀಗಾಗಿ ಸ್ಥಳೀಯ ಪೊಲೀಸರು ಈಗಿನ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಕೋಮು ಸಂಘರ್ಷವನ್ನು ತಡೆಯಬಲ್ಲರು ಎಂಬ ಯಾವ ನಂಬಿಕೆಯೂ ಜನರಲ್ಲಿ ಇಲ್ಲದಂತಾಗಿದೆ.

ಇದಕ್ಕೆ ಕಾರಣ ಅದೇ ರಾಜಕೀಯ ನಾಯಕರ ಮಿನಿಟ್‌ ಕಲ್ಚರ್‌ಗಳೇ ಕಾರಣ. ಹೀಗಾಗಿ ಶಿವಮೊಗ್ಗ ನಗರದಲ್ಲಿ ಪ್ರತೀಕಾರ ಎಂಬುದು ಯಾವಾಗ ಸ್ಪೋಟಿಸುತ್ತದೋ ಗೊತ್ತಿಲ್ಲ. ಈಗಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂಬ ಮಾತು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಖುದ್ದು ಶಿವಮೊಗ್ಗಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.

ಹರ್ಷ ಘಟನೆ ಹಿನ್ನೆಲೆ:

ಹರ್ಷ ಘಟನೆ ಹಿನ್ನೆಲೆ:

ಭಾನುವಾರ ರಾತ್ರಿ ಕೊಲೆಗೀಡಾಗಿರುವ ಭಜರಂಗ ದಳದ ಕಾರ್ಯಕರ್ತ ಹರ್ಷ ಅಪರಾಧಿಕ ಹಿನ್ನೆಲೆ ಕೂಡ ಒಂದು ವರ್ಗವನ್ನು ಕೆರಳಿಸುವಂತಿದೆ. ಕೆಲ ವರ್ಷಗಳ ಹಿಂದೆ ಶಿವಮೊಗ್ಗ ನಗರದಲ್ಲಿ ಮೆಕ್ಕಾ ಯಾತ್ರಿಗಳಿಗೆ ಶುಭ ಕೋರಿ ಹಾಕಿದ್ದ ಬ್ಯಾನರ್‌ಗೆ ಯಾರೋ ಹಂದಿಯ ಅರ್ಧ ತಲೆಯನ್ನು ಕಟ್ಟಿದ್ದರು. ಈ ಪ್ರಕರಣದಲ್ಲಿ ಹರ್ಷ ಹೆಸರು ಕೂಡ ಕೇಳಿ ಬಂದಿತ್ತು.

ಇದಾದ ಬಳಿಕ ಶಿವಮೊಗ್ಗದಲ್ಲಿ ಗಣೇಶ ಉತ್ಸವ ವೇಳೆ ಕೇಕೆ ಹಾಕುವ, ಕಲ್ಲು ತೂರುವುದು ಹವ್ಯಾಸವಾಗಿ ಬಿಟ್ಟಿದೆ. ಈ ಹಿಂದೆ ಗಣೇಶ ಉತ್ಸವದ ವೇಳೆ ಕಲ್ಲು ತೂರಿ ಅವಾಚ್ಯ ಪದಗಳಿಂದ ನಿಂದನೆ ಮಾಡಲಾಗಿತ್ತು. ಒಂದು ಸಮುದಾಯ ಟಾರ್ಗೆಟ್ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದ ಯುವಕನಿಗೆ ಕಮಲಾ ನೆಹರು ಕಾಲೇಜು ಬಳಿಯೇ ಚಾಕುವಿನಿಂದ ಇರಿಯಲಾಗಿತ್ತು. ಇದೇ ರೀತಿಯ ಘಟನೆಗಳು ಪದೇ ಪದೇ ಮರುಕಳಿಸುತ್ತಲೇ ಇವೆ.

ನೆಮ್ಮದಿಯಾಗಿ ರಾತ್ರಿ ಕಳೆಯುವ ಪರಿಸ್ಥಿತಿ ಅಲ್ಲಿಲ್ಲ

ನೆಮ್ಮದಿಯಾಗಿ ರಾತ್ರಿ ಕಳೆಯುವ ಪರಿಸ್ಥಿತಿ ಅಲ್ಲಿಲ್ಲ

ಶಿವಮೊಗ್ಗದಲ್ಲಿ ಕೇವಲ ಹಿಂದೂ ಮೂಲಭೂತ ಸಂಘಟನೆಗಳಷ್ಟೇ ಮುಸ್ಲಿಂ ಮೂಲಭೂತವಾದ ಸಂಘಟನೆಗಳು ಬೆಳೆದು ನಿಂತಿವೆ. ದ್ವೇಷ - ಪ್ರತಿಕಾರದ ಘಟನೆಗಳು ಪದೇ ಪದೇ ಮರುಕಳಿಸುತ್ತಲೇ ಇವೆ. ಹರ್ಷ ಕೊಲೆ ಹಿನ್ನೆಲೆಯಲ್ಲಿ ಇವತ್ತು ಎಷ್ಟೆಲ್ಲಾ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರೂ, ಜನರು ನೆಮ್ಮದಿಯಾಗಿ ರಾತ್ರಿ ಕಳೆಯುವ ಪರಿಸ್ಥಿತಿ ಅಲ್ಲಿಲ್ಲ. ಬೂದಿ ಮುಚ್ಚಿದ ಕೆಂಡದಂತಿದೆ. ಯಾವ ಕ್ಷಣ ಎಲ್ಲಿ ಏನಾಗುತ್ತದೋ ಎಂಬ ಭಯ ಮನೆ ಮಾಡಿದೆ.

ಇನ್ನು ಮೃತ ಯುವಕನ ತಾಯಿ ಕೂಡ ತನ್ನ ಮಗನ ಮೇಲೆ ಮುಸ್ಲಿಂ ಯುವಕರು ಟಾರ್ಗೆಟ್ ಮಾಡಿದ್ದರು ಎಂಬ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಹರ್ಷ ಮೇಲೆ ದಾಳಿ ಯತ್ನ ನಡೆದಿತ್ತು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ಇದರ ನಡುವೆ ಹಾಲಿ ಸಚಿವ ಈಶ್ವರಪ್ಪ ಕೂಡ ಕೊಲೆ ಆರೋಪಿಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದ್ರೆ ಶಿವಮೊಗ್ಗದಲ್ಲಿ ಯಾವ ಕ್ಷಣ ಶಾಂತಿ ಕದಡುತ್ತೋ ಊಹಿಸಲು ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ

ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ

ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹಿಜಾಬ್ ವಿವಾದದ ಅಂಗಳದಲ್ಲಿಯೇ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜ ಕಟ್ಟುವ ಕಂಬಕ್ಕೆ ಭಾಗವ ಧ್ವಜ ಕಟ್ಟಿದ ಹಿಂದೂಪರ ಸಂಘಟನೆಗಳ ಕಾರ್ಯ ಬೆಂಬಲಿಸಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆ ವಿವಾದ ಹುಟ್ಟು ಹಾಕಿತ್ತು. ಇದೇ ವಿಚಾರ ಇಟ್ಟುಕೊಂಡು ವಿರೋಧ ಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿವೆ.

ಇದರ ನಡುವೆ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾಗಿರುವುದು ಈ ವಿವಾದಗಳಿಗೆ ಮತ್ತಷ್ಟು ಮೆರಗು ನೀಡಿದಂತೆ ಕಾಣುತ್ತಿದೆ. ರಾಜಕೀಯ ಪಕ್ಷಗಳ ಕೆಸೆರೆರಚಾಟ ಜತೆಗೆ ಕೋಮು ದ್ವೇಷದ ವಾತಾವರಣ ಮತ್ತಷ್ಟು ಹೆಚ್ಚಾಗಲಿದೆ. ಈ ಎಲ್ಲಾ ದೃಷ್ಟಿಕೋನದಲ್ಲಿ ಆಲೋಚಿಸಿ ಈಗಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವುದು ಕ್ಷೇಮ. ಇಲ್ಲದಿದ್ದರೆ ಶಿವಮೊಗ್ಗ ನಗರದ ಪರಿಸ್ಥಿತಿ ಎಲ್ಲರ ಕೈ ಮೀರಬಹುದು ಎಂಬಂತಿದೆ ಅಲ್ಲಿನ ಈ ಕ್ಷಣದ ವಾತಾವರಣ.

ಈ ವರದಿ ಪ್ರಕಟವಾಗುವ ಸಮಯಕ್ಕೆ 212 ಪೊಲೀಸ್ ಇನ್ ಸ್ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್‌ಗಳನ್ನು ಶಿವಮೊಗ್ಗ ನಗರಕ್ಕೆ ನಿಯೋಜಿಸಿ ಪೊಲೀಸ್ ಇಲಾಖೆ ಆದೇಶಿಸಿದೆ. ಈ ಹಿಂದೆ ಶಿವಮೊಗ್ಗದಲ್ಲಿ ಕೆಲಸ ಮಾಡಿದ್ದವರನ್ನು ಹುಡುಕಿ ಪೊಲೀಸ್ ಇಲಾಖೆ ತುರ್ತು ನಿಯೋಜನೆ ಮಾಡಿದೆ. ಈ ಮೂಲಕ ಶಿವಮೊಗ್ಗ ನಗರ ಕಾನೂನು ಸುವ್ಯವಸ್ತೆ ಕಾಪಾಡಲು ಪೊಲೀಸ್ ಇಲಾಖೆ ಮುಂದಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+