ಶಿವಮೊಗ್ಗ : ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ, 20 ಸಾವಿರ ಕಳವು
ಶಿವಮೊಗ್ಗ, ಜುಲೈ 02 : ಕಾರಿನಲ್ಲಿ ಬಂದ ನಾಲ್ಕು ಜನರ ಗುಂಪು ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ 20 ಸಾವಿರ ಹಣ ದೋಚಿದ ಘಟನೆ ನಡೆದಿದೆ. ಬಸ್ಸಿನಲ್ಲಿನ ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿವೆ.
ಉಡುಪಿ-ಶಿವಮೊಗ್ಗ ನಡುವೆ ಸಂಚಾರ ನಡೆಸುವ ಖಾಸಗಿ ಬಸ್ ಕಂಡಕ್ಟರ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಬಳಿಕ ಆತನ ಬಳಿಕ ಇದ್ದ 20 ಸಾವಿರ ರೂ. ಹಣವನ್ನು ಕಳವು ಮಾಡಲಾಗಿದೆ.
ಜುಲೈ 30ರ ಭಾನುವಾರ ನಿಶಾನ್ ಟಾವೆಲ್ಸ್ ಎನ್ನುವ ಬಸ್ ಅಡ್ಡಗಟ್ಟಿದ ಗುಂಪು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದೆ. ಬಸ್ಸಿನಲ್ಲಿ ಕಡಿಮೆ ಜನರಿದ್ದ ಕಾರಣ ಜಗಳ ಬಿಡಿಸಲು ಸಾಧ್ಯವಾಗಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಕೂಡಾ ಗುಂಪು ಬೆದರಿಕೆ ಹಾಕಿದೆ.

ಘಟನೆ ವಿವರ : ಹೆಬ್ರಿಯ ಸೀತಾನದಿ ಬಳಿ ಕಾರಿನಲ್ಲಿ ಬಂದ ನಾಲ್ವರ ಗುಂಪು ಸ್ಥಳೀಯರ ಮೇಲೆ ಹಲ್ಲೆ ನಡೆಸುತ್ತಿದ್ದರು. ಇದನ್ನು ನೋಡಿದ ಚಾಲಕ ಬಸ್ ನಿಲ್ಲಿಸಿದ್ದಾನೆ. ಕಂಡಕ್ಟರ್ ಗಣೇಶ್ ಜಗಳ ಬಿಡಿಸಿದ್ದಾರೆ.
ಇದರಿಂದಾಗಿ ಆಕ್ರೋಶಗೊಂಡ ಗುಂಪು ಎರಡು ಕಾರಿನಲ್ಲಿ ಬಸ್ ಹಿಂಬಾಲಿಸಿದ್ದಾರೆ. ಶಿವಮೊಗ್ಗ ಮಾರ್ಗದ ಮಂಡಗದ್ದೆ ಬಳಿ ಬಸ್ ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ನಾಲ್ವರು ಪಾನಮತ್ತರಾಗಿದ್ದರು ಎಂದು ಪ್ರಯಾಣಿಕರು ಹೇಳಿದ್ದಾರೆ.
ಕಂಡಕ್ಟರ್‌ನನ್ನು ಬಸ್ಸಿನಿಂದ ಕೆಳಗೆ ಇಳಿಸಿ ಕಾಲಿನಿಂದ ಒದ್ದು, ಶರ್ಟ್ ಹರಿದಿದ್ದಾರೆ. ತುಟಿ ಒಡೆದುಹೋಗುವಂತೆ ಗುದ್ದಿದ್ದಾರೆ. ಮುಖ ಊದಿಕೊಳ್ಳುವಂತೆ ಗುದ್ದಿದ್ದಾರೆ. ಆತನ ಬಳಿ ಇದ್ದ 20 ಸಾವಿರ ರೂ. ಹಣವನ್ನು ದೋಚಿದ್ದಾರೆ.
ತುಳು ಭಾಷೆ ಮಾತನಾಡುತ್ತಿದ್ದ ಎಲ್ಲರೂ ಪ್ರಯಾಣಿಕರಿಗೂ ಬೆದರಿಕೆ ಹಾಕಿದ್ದಾರೆ ಎಂದು ಬಸ್ಸಿನಲ್ಲಿದ್ದವರು ಹೇಳಿದ್ದಾರೆ. ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications