ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಬೆಳೆಗೆ ಹೊಸ ರೋಗ; ಮಲೆನಾಡ ರೈತರಲ್ಲಿ ಆತಂಕ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 20 : ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಧಾರಣೆಯ ಏರಿಳಿತದಿಂದಾಗಿ ಅಡಿಕೆ ಬೆಳೆದ ರೈತರು ನಷ್ಟ ಅನುಭವಿಸುತ್ತಾರೆ. ಈ ಬಾರಿ ಸುರಿದ ಭಾರಿ ಮಳೆಗೆ ಫಸಲು ಕಡಿಮೆಯಾಗಿತ್ತು. ಈಗ ಹಿಂಗಾರ ಒಣಗುವ ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ಬಾಧೆ ಕಂಡುಬಂದಿದ್ದು ರೈತರು ಆತಂಕಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಡಿಕೆಯ ಹಿಂಗಾರ ಒಣಗುವ ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ಬಾಧೆ ಕಂಡುಬಂದಿದೆ. ಈ ಬಾಧೆ ನಿರ್ವಹಣೆಗೆ ರೈತರು ಈಗಾಗಲೇ ಔಷಧ ಸಿಂಪರಣೆ ಮಾಡುತ್ತಿದ್ದಾರೆ.

ಜೇನು ಕೃಷಿ; ಕಡಿಮೆ ಬಂಡವಾಳ, ಅಧಿಕ ಲಾಭಜೇನು ಕೃಷಿ; ಕಡಿಮೆ ಬಂಡವಾಳ, ಅಧಿಕ ಲಾಭ

ಔಷಧ ಸಿಂಪರಣೆ ಮಾಡುತ್ತಿರುವ ವಿಚಾರ ತೋಟಗಾರಿಕಾ ಇಲಾಖೆಗೂ ತಲುಲಿದೆ. ಸಿಂಪರಣೆ ಮಾಡುವ ಔಷಧಗಳು ಪರಿಸರಕ್ಕೆ ಯವುದೇ ಹಾನಿ ಮಾಡದಂತಿರಬೇಕು. ರಾಸಯನಿಕಯುಕ್ತ ಔಷಧಗಳ ಸಿಂಪರಣೆಯಿಂದಾಗಿ, ಹೂವಿನ ಮಕರಂದ ಹೀರಲು ತೋಟಗಳಿಗೆ ಬರುವ ಜೇನು ನೊಣಗಳಿಗೆ ಹಾನಿಯಾಗುವ ಸಂಭವವಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ರೈತರಿಗೆ ಕರೆ ನೀಡಿದೆ.

ಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತ

ಅಡಿಕೆ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆ. ವರ್ಷದಿಂದ ವರ್ಷಕ್ಕೆ ಅಡಿಕೆ ತೋಟಗಳು ಹೆಚ್ಚುತ್ತಲೇ ಇದೆ. ಅಡಿಕೆ ಧಾರಣೆಯೂ ಹಲವು ವರ್ಷಗಳಿಂದ ಏರಿಳಿತದಲ್ಲೇ ಸಾಗುತ್ತಿದೆ. ಬೆಳೆಯನ್ನು ನಂಬಿರುವ ರೈತರು ಈಗ ರೋಗವನ್ನು ಹತೋಟಿ ಮಾಡಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿ ಅಡಿಕೆ, ತೆಂಗು ಬೆಳೆಗಾರರ ಬದುಕು- ಬವಣೆ ದಾವಣಗೆರೆ ಜಿಲ್ಲೆ ಮಾಯಕೊಂಡ ಹೋಬಳಿ ಅಡಿಕೆ, ತೆಂಗು ಬೆಳೆಗಾರರ ಬದುಕು- ಬವಣೆ

ಔಷಧಿ ಸಿಂಪರಣೆ ರೈತರಿಗೆ ಸಲಹೆ

ಔಷಧಿ ಸಿಂಪರಣೆ ರೈತರಿಗೆ ಸಲಹೆ

ರೈತರು ಇನ್ನು ಮುಂದೆ ಸಿಂಪರಣೆ ಕೈಗೊಳ್ಳುವ ಮೊದಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಅಥವಾ ವಿಜ್ಞಾನಿಗಳನ್ನು ಸಂಪರ್ಕಿಸಿ ಔಷಧಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಶಿಫಾರಸ್ಸು ಪಡೆದು ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ಹೇಳಿದೆ. ಯಾವುದೇ ಖಾಸಗಿ ವ್ಯಕ್ತಿಗಳು/ ಕಂಪನಿಯವರು/ಏಜೆನ್ಸಿಯವರು ಹೇಳಿದ ಔಷಧಿಗಳನ್ನು ಸೂಕ್ತವಾಗಿ ಪರಿಶೀಲಿಸಿದ ನಂತರವೇ ಸಿಂಪರಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ರೋಗದ ಲಕ್ಷಣಗಳು

ರೋಗದ ಲಕ್ಷಣಗಳು

ಅಡಿಕೆ ಹಿಂಗಾರವನ್ನು ಕೆರೆದು ತಿನ್ನುವ ಈ ಹುಳುಗಳು ಹಿಂಗಾರದಲ್ಲಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಈ ಗೂಡಿನಲ್ಲಿ ಹುಳುವಿನ ಹಿಕ್ಕೆ ಹಾಗೂ ಹಿಂಗಾರದಿಂದ ಕೆರೆದು ಉಳಿದಿರುವ ಭಾಗಗಳು ಅಲ್ಲಿಯೇ ಶೇಖರಣೆಯಾಗುತ್ತದೆ. ಇದರಿಂದ ಹಿಂಗಾರದ ಎಸಳುಗಳು ಒಣಗಲು ಆರಂಭವಾಗಿ ಹಿಂಗಾರ ಕಂದುಬಣ್ಣಕ್ಕೆ ತಿರುಗಿ ಉದುರಲು ಆರಂಭವಾಗುವುದು ರೋಗದ ಮುಖ್ಯ ಲಕ್ಷಣಗಳಾಗಿರುತ್ತವೆ.

ಜೇನು ನೊಣಗಳ ಸುರಕ್ಷತೆ

ಜೇನು ನೊಣಗಳ ಸುರಕ್ಷತೆ

ಔಷಧ ಸಿಂಪರಣೆ ಮಾಡುವ ಸಮಯದಲ್ಲಿ ಜೇನು ನೊಣಗಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಕೀಟ ಬಾಧೆ ಕಂಡುಬಂದಲ್ಲಿ ಮಾತ್ರ ರೈತರು ಬೇವಿನೆಣ್ಣೆ ಸಿಂಪರಣೆ ಮಾಡಬೇಕು. ಈಗಾಗಲೇ ಹುಳುವಿನ ಬಾಧೆ ಕಡಿಮೆಯಾಗಿರುತ್ತದೆ ಹಾಗೂ ಈ ಹುಳುವಿನ ಜೀವಿನ ಚಕ್ರ ಸಂಪೂರ್ಣವಾಗಿರುವುದರಿಂದ ಸಂತಾನೋತ್ಪತ್ತಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಔಷಧ ಸಿಂಪರಣೆಯ ಅವಶ್ಯಕತೆ ತುಂಬಾ ಕಡಿಮೆ.

ತೋಟದಲ್ಲಿ ಜೇನು ಪೆಟ್ಟಿಗೆ

ತೋಟದಲ್ಲಿ ಜೇನು ಪೆಟ್ಟಿಗೆ

ಜೇನು ಸಾಕಾಣಿಕೆ ಮಾಡುವ ರೈತರು ಜೇನು ಪೆಟ್ಟಿಗೆಗಳನ್ನು ಔಷಧ ಸಿಂಪರಣೆಯಾದ ಸಮಯದಲ್ಲಿ ಸುಮಾರು 3 ರಿಂದ 4 ದಿವಸಗಳ ಕಾಲ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸಿಂಪರಣೆಯಾದ ತೋಟದಲ್ಲಿ ಆದರೆ, ಜೇನುಪೆಟ್ಟಿಗೆ ಸುತ್ತ ಪರದೆಯನ್ನು ಹಾಕಿ ಜೇನು ನೊಣಗಳಿಗೆ ಕೃತಕ ಆಹಾರವನ್ನು( ಸಕ್ಕರೆ ಪಾಕ) ಒದಗಿಸಬೇಕು.

ರೋಗ ಬಾಧೆ ಹತೋಟಿ ಕ್ರಮಗಳು

ರೋಗ ಬಾಧೆ ಹತೋಟಿ ಕ್ರಮಗಳು

ಹಿಂಗಾರ ಒಣಗುವ ರೋಗದ ನಿಯಂತ್ರಣಕ್ಕೆ ಕಾಪರ್ ಆಕ್ಸಿ ಕ್ಲೋರೈಡ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹಿಂಗಾರಗಳಿಗೆ ಸಿಂಪಡಿಸಬೇಕು. ಹಿಂಗಾರದ ಒಳಗಡೆ ಹುಳುಗಳು ಹಾನಿಯುಂಟು ಮಾಡಿದಲ್ಲಿ ಕೀಟದ ನಿರ್ವಹಣೆಗೆ ಶೇ. 1ರ ಬೇವಿನೆಣ್ಣೆ 2 ಮಿ.ಲೀ. 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟಗಳ ಬಾಧೆ ಖಚಿತವಾಗಿದಲ್ಲಿ ಮಾತ್ರ ಬೇವಿನೆಣ್ಣೆ ಸಿಂಪರಣೆ ಮಾಡುವುದು ಸೂಕ್ತ.

English summary
Horticulture department direction to the farmers of Shivamogga district about new diseases arecanut tree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X